For Quick Alerts
  ALLOW NOTIFICATIONS  
  For Daily Alerts

  ಏಕ್ ಲವ್ ಯಾ ಬಳಿಕ ನಟಿ ರಕ್ಷಿತಾ ಸಹೋದರನ ಹೊಸ ಸಿನಿಮಾ ಅನೌನ್ಸ್!

  |

  ನಟಿ ರಕ್ಷಿತಾ ಸಹೋದರ ರಾಣಾ ಏಕ್‌ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿಯೇ ರಾಣ ಭರವಸೆಯನ್ನು ಮೂಡಿಸಿದ್ದರು. ಸಿನಿಮಾ ಬಿಡುಗಡೆಯಾಗಿ ಹಲವು ದಿನಗಳಾದರೂ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿರಲಿಲ್ಲ.

  ಜೋಗಿ ಪ್ರೇಮ್ ನಿರ್ದೇಶಿಸಿದ್ದ 'ಏಕ್ ಲವ್ ಯಾ' ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿತ್ತು. ಬಹಳ ದಿನಗಳ ಬಳಿಕ ಪ್ರೇಮ್ ಪಕ್ಕಾ ಪ್ರೇಮ್ ಕಹಾನಿ ಜೊತೆ ಕ್ರೈಂ ಸ್ಟೋರಿಯನ್ನು ತೆರೆಮೇಲೆ ತಂದಿದ್ದರು. ಈ ಕಥೆಯ ಮೂಲಕವೇ ರಾಣಾರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿದ್ದರು.

  ಮೊದಲ ಸಿನಿಮಾದಲ್ಲಿಯೇ ರಾಣಾ ನಟನೆಯನ್ನು ನೋಡಿ ಪ್ರೇಕ್ಷಕರು ಕೂಡ ಮೆಚ್ಚಿ ಕೊಂಡಾಡಿದ್ದರು. ಸ್ಯಾಂಡಲ್‌ವುಡ್‌ಗೆ ಭರವಸೆಯ ನಟನಾಗಬಹುದು ಎಂದು ಭರವಸೆ ನುಡಿದಿದ್ದರು. ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಗಮನ ಸೆಳೆದಿದ್ದ ರಾಣಾ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.

  ರಾಣಾ ಮುಂದಿನ ಸಿನಿಮಾ ಬಗ್ಗೆ ಈಗ ಉತ್ತರ ಸಿಕ್ಕಿದೆ. ರಾಣಾ ಎರಡನೇ ಸಿನಿಮಾವನ್ನು 'ಏಕ್‌ ಲವ್ ಯಾ' ಸಿನಿಮಾದಲ್ಲಿ ಜೋಗಿ ಪ್ರೇಮ್‌ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಿಜಯ್ ಈಶ್ವರ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಈಶ್ವರ್ ನಿರ್ದೇಶಕ ಪ್ರೇಮ್ ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ.

  After Ek Love Yaa Raan Next Movie With Jogi Prem Assistant Vijay Eshwar

  ವಿಜಯ್ ಈಶ್ವರ್ ಹೇಳಿದ ಕಥೆ ರಾಣಾಗೆ ಇಷ್ಟ ಆಗಿದ್ದು, ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೇಮ್, ರಕ್ಷಿತಾ ಕೂಡ ವಿಜಯ್ ಈಶ್ವರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರಂತೆ. ಇನ್ನು ಸಿನಿಮಾದ ಕಥಯೇನು? ಆಕ್ಷನ್ ಸಿನಿಮಾನಾ? ಲವ್ ಸ್ಟೋರಿನಾ? ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ.

  English summary
  After Ek Love Yaa Raan Next Movie With Jogi Prem Assistant Vijay Eshwar, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X