ನಿಶ್ಚಿತಾರ್ಥದ ಬಳಿಕ ಬಾವಿ ಪತಿ ಹುಡುಕೊಂಡು ಹೋದ ಹರಿಪ್ರಿಯಾ: ಕಡಲ ತೀರದಲ್ಲಿ 'ಲವ್ ಲಿ' ಜೋಡಿ!

ಸ್ಯಾಂಡಲ್‌ವುಡ್ ಮಂದಿಗೆ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸರ್ಪ್ರೈಸ್ ಕೊಟ್ಟಿದ್ದರು. ಇಬ್ಬರೂ ಪ್ರೀತಿ ಮಾಡುತ್ತಿರೋ ವಿಷಯ ಗುಟ್ಟಾಗಿ ಇಟ್ಟಿತ್ತು ಈ ಜೋಡಿ. ಅದೆಷ್ಟೇ ಗುಟ್ಟಾಗಿ ಪ್ರೀತಿ ಮಾಡಿದರೂ, ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಈಗ ಎಲ್ಲವೂ ರಿವೀಲ್ ಆಗಿದೆ.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡ ಬಳಿಕ ತಮ್ಮನ್ನು ಹರಸಿ, ಆಶೀರ್ವದಿಸಿ ಎಂದು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

ಮುಂದಿನ ವರ್ಷ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಈ ಜೋಡಿ ನಿಶ್ಚಿತಾರ್ಥದ ಬಳಿಕ ಶೂಟಿಂಗ್ ಸೆಟ್ಟಿಗೆ ಕಾಲಿಟ್ಟಿದೆ. ವಸಿಷ್ಠ ಸಿಂಹ 'ಲವ್ ಲಿ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಗೆ ಹರಿಪ್ರಿಯ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.

ಬಾವಿ ಪತಿ ಹುಡುಕೊಂಡು ಹೊರ ಹರಿಪ್ರಿಯಾ!

ಬಾವಿ ಪತಿ ಹುಡುಕೊಂಡು ಹೊರ ಹರಿಪ್ರಿಯಾ!

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಎಂಗೇಜ್ಮೆಂಟ್ ಮುಗಿಸಿ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಸಿಷ್ಠ ಸಿಂಹ 'ಲವ್ ಲಿ' ಸಿನಿಮಾ ಶೂಟಿಂಗ್‌ಗಾಗಿ ಉಡುಪಿಯಲ್ಲಿದ್ದಾರೆ. ಹೀಗಾಗಿ ಬಾವಿ ಪತಿಯನ್ನು ನೋಡಲು ಹರಿಪ್ರಿಯಾ ಉಡುಪಿವರೆಗೂ ಪಯಣ ಬೆಳೆಸಿದ್ದಾರೆ. ಹರಿಪ್ರಿಯಾ ಸರ್ಪ್ರೈಸ್ ವಿಸಿಟ್‌ ನೋಡಿ ಚಿತ್ರತಂಡ ಫುಲ್ ಖುಷಿಯಾಗಿತ್ತು. ಕೆಲವು ಹೊತ್ತು ಹರಿಪ್ರಿಯಾ ಚಿತ್ರತಂಡದೊಂದಿಗೆ ಕಾಲ ಕಳೆದು ನಂತರ ಅಲ್ಲಿಂದ ಹೊರಟು ಬಂದಿದ್ದಾರೆ.

ಶೂಟಿಂಗ್ ಸೆಟ್ಟಲ್ಲಿ ಹರಿಪ್ರಿಯಾ

ಶೂಟಿಂಗ್ ಸೆಟ್ಟಲ್ಲಿ ಹರಿಪ್ರಿಯಾ

ಹರಿಪ್ರಿಯಾ ಶೂಟಿಂಗ್ ಸೆಟ್ಟಿಗೆ ಬರುತ್ತಿದ್ದಂತೆ ವಸಿಷ್ಠ ಸಿಂಹ ಅಪ್ಪಿ ಸ್ವಾಗತಿಸಿದ್ದಾರೆ. ಬಳಿಕ ಹರಿಪ್ರಿಯಾ ಕೆಲವ ಹೊತ್ತು ಸಿನಿಮಾ ಶೂಟಿಂಗ್ ವೀಕ್ಷಣೆ ಮಾಡಿದ್ದಾರೆ. ಹಾಗೇ ಸಿನಿಮಾದಲ್ಲಿ ನಟಿಸುತ್ತಿರೋ ಸಾಧು ಕೋಕಿಲಾ, ದತ್ತಣ್ಣ ಹಾಗೂ ಮಾಳವಿಕಾ ಅವರೊಂದಿಗೆ ಹರಡೆ ಹೊಡೆದಿದ್ದಾರೆ. ನಿಶ್ಚಿತಾರ್ಥದ ಬಳಿಕ ನೇರವಾಗಿ ಶೂಟಿಂಗ್‌ಗೆ ಬಂದಿದ್ದ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಕಡಲ ತೀರದಲ್ಲಿ ಕೆಲವು ಕಾಲ ಸಮಯ ಕಳೆದಿದ್ದಾರೆ. ಬಳಿಕ ಅಲ್ಲಿಂದ ಹಿಂತಿರುಗಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಸರ್ಪ್ರೈಸ್ ಭೇಟಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಹಂಚಿಕೊಂಡಿದೆ.

'ಲವ್ ಲಿ' ಸೆಟ್ಟಿನಲ್ಲಿ ಕನ್ನಡದ ದಿಗ್ಗಜರು

'ಲವ್ ಲಿ' ಸೆಟ್ಟಿನಲ್ಲಿ ಕನ್ನಡದ ದಿಗ್ಗಜರು

ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಲವ್ ಲಿ' ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ನಟಿಸುತ್ತಿದ್ದಾರೆ. ಹಾಮಿಡಿ ಕಿಂಗ್ ಸಾಧುಕೋಕಿಲಾ ಹಾಸ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಹಿರಿಯ ನಟ ದತ್ತಣ್ಣ ನಟಿಸುತ್ತಿದ್ದಾರೆ. 'ಕೆಜಿಎಫ್ 2' ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾಳವಿಕಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ 'ಲವ್ ಲಿ' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೇ ಭರದಿಂದ ಶೂಟಿಂಗ್ ಮಾಡುತ್ತಿದೆ.

ಮುಂದಿನ ವರ್ಷ ತಾರಾ ಜೋಡಿ ಮದುವೆ

ಮುಂದಿನ ವರ್ಷ ತಾರಾ ಜೋಡಿ ಮದುವೆ

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುತ್ತಿದ್ದು, ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೆ ಈಗಿನಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹರಿಪ್ರಿಯಾ ಕೂಡ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದು ಬ್ಯುಸಿಯಾಗಿದ್ದಾರೆ. ಇತ್ತ ವಸಿಷ್ಠ ಸಿಂಹ ಕೂಡ ಕನ್ನಡ, ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಆ ಸಿನಿಮಾಗಳು ಮುಗಿಯುತ್ತಿದ್ದಂತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

More from Filmibeat

English summary
After Engagement Haripriya Visited Vasishta Simha Starrer Love Li Set, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X