ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸುವುದಕ್ಕೂ ಮುನ್ನ ಲಂಡನ್‌ಗೆ ಹಾರಿದ ಯಶ್: ಏನಿದು ಗ್ಲೋಬಲ್ ಮ್ಯಾಟರ್?
ರಾಕಿ ಭಾಯ್ ಯಶ್ ಮುಂಬರುವ 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಷ್ಟೇ ಅಲ್ಲ. ಪ್ಯಾನ್ ವರ್ಲ್ಡ್ ಸಿನಿಮಾ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮುಂಬೈನಲ್ಲಿ ಸುಮಾರು 45 ದಿನಗಳ ಕಾಲ ಶೂಟಿಂಗ್ ಮುಗಿಸಿದ ಬಳಿಕ ಯಶ್ ದಿಢೀರನೇ ಲಂಡನ್‌ಗೆ ಹಾರಿದ್ದಾರೆ. ಜಾಗತಿಕ ಮಟ್ಟದಲ್ಲಿ ಯಶ್ ಬೇರೆ ಏನೋ ದೊಡ್ಡದಾಗಿ ಪ್ಲಾನ್ ಮಾಡಿತ್ತಿದ್ದಾರೆ ಅನ್ನೋ ಸೂಚನೆಯನ್ನು ಕೊಟ್ಟು ಪ್ರಯಣ ಬೆಳೆಸಿದಂತೆ ಇದೆ.
ಕಳೆದ ಕೆಲವು ದಿನಗಳಿಂದ ಭಾರತೀಯ ಚಿತ್ರರಂಗದಲ್ಲೇ ಅತೀ ನಿರೀಕ್ಷೆ ಇಟ್ಟುಕೊಂಡಿರುವ 'ಟಾಕ್ಸಿಕ್' ಸಿನಿಮಾದ ಆಕ್ಷನ್ ಸೀನ್‌ಗಳನ್ನು ಮುಗಿಸಲಾಗಿದೆ. 45 ದಿನಗಳ ಕಾಲ ಹಲವು ನಗರಗಳಲ್ಲಿ ಬೃಹತ್ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಿಸಿದ ಬಳಿಕ ಮುಂಬೈ ಶೆಡ್ಯೂಲ್‌ಗೆ ಅಂತ್ಯ ಹಾಡಲಾಗಿದೆ. ಈ ಹಂತದಲ್ಲಿ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಭಾಗಿಯಾಗಿದ್ದು ವಿಶೇಷ.

'ಟಾಕ್ಸಿಕ್' ಸಿನಿಮಾ ಮೇಜರ್ ಆಕ್ಷನ್ ಬ್ಲಾಕ್ ಅನ್ನು ಈ ಹಂತದಲ್ಲಿ ಶೂಟಿಂಗ್ ಮಾಡಲಾಗಿತ್ತು. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಸೂಪರ್ ವಿಷನ್‌ನಲ್ಲಿ ಈ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಲಾಗಿದೆ. ಈ ಹಂತದ ಚಿತ್ರೀಕರಣದ ಮುಕ್ತಾಯಗೊಳ್ಳುವ ಮೂಲಕ ಸಿನಿಮಾ ಪ್ರಮುಖ ದೃಶ್ಯಗಳನ್ನು ಶೂಟಿಂಗ್ ಮುಗಿಸಿದಂತಾಗಿದೆ ಎಂದು ಚಿತ್ರತಂಡದ ಮೂಲಗಳಿಂದ ಮಾಹಿತಿ ಬಂದಿದೆ. ಕೊನೆಯ ಹಂತದ ಚಿತ್ರೀಕರಣಕ್ಕೆ ಬೆಂಗಳೂರಿಗೆ ಎಂಟ್ರಿ ಕೊಡಲಿದೆ.
ಬೆಂಗಳೂರಿನಲ್ಲಿ ಅಂತಿಮ ಹಂತದ ಶೂಟಿಂಗ್
ಮುಂಬೈ ಶೂಟಿಂಗ್ ಮುಗಿದ ಬಳಿಕ 'ಟಾಕ್ಸಿಕ್' ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದೆ. ಇದೇ ಕೊನೆಯ ಹಂತದ ಚಿತ್ರೀಕರಣ ಆಗಿದ್ದು, ಇಲ್ಲಿಗೆ ಸಿನಿಮಾ ಸಂಪೂರ್ಣ ಮುಕ್ತಾಯ ಆದಂತೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ 'ಟಾಕ್ಸಿಕ್' ತಂಡ ಬೆಂಗಳೂರಿಗೆ ಬರುತ್ತಿದ್ದು, ಶೂಟಿಂಗ್ ಆರಂಭ ಮಾಡುತ್ತಿದೆ. ಆ ಮೂಲಕ ಅಧಿಕೃತವಾಗಿ ಶೂಟಿಂಗ್ ಮುಕ್ತಾಯವಾದಂತೆ. ಇನ್ನೇನಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಲಿವೆ.
ಭಾರತೀಯ ಚಿತ್ರರಂಗದ ಅತೀ ದೊಡ್ಡ ಆಕ್ಷನ್ ಸೀಕ್ವೆನ್ಸ್
ಮುಂಬೈನಲ್ಲಿ 45 ದಿನಗಳ ಕಾಲ ಚಿತ್ರೀಕರಿಸಿದ ಪವರ್‌ಫುಲ್ ಆಕ್ಷನ್ ಸೀಕ್ವೆನ್ಸ್ ಭಾರತೀಯ ಚಿತ್ರರಂಗದ ಅತಿ ದೊಡ್ಡ ಸಾಹಸ ಎಂದು ಮೂಲಗಳು ಹೇಳುತ್ತಿವೆ. ದುಬಾರಿ ವೆಚ್ಚದಲ್ಲಿ ಹಿಂದೆಂದೂ ಭಾರತೀಯ ಚಿತ್ರರಂಗ ಕಂಡಿರದ ಆಕ್ಷನ್ ದೃಶ್ಯಗಳನ್ನು ಈ ಸಿನಿಮಾಗಳಲ್ಲಿ ನೋಡಬಹುದಾಗಿದೆ. ಸಿನಿಮಾ ತಂಡದ ಮೂಲಗಳು ಹೇಳುವಂತೆ " ಮುಂಬೈ ಶೆಡ್ಯೂಲ್ ಸಿಕ್ಕಾಪಟ್ಟೆ ಚಾಲೆಂಜಿಂಗ್ ಹಾಗೂ ಮಹತ್ವಕಾಂಕ್ಷೆಯದ್ದಾಗಿತ್ತು. ಇದು ಭಾರತೀಯ ಚಿತ್ರರಂಗದಲ್ಲೇ ಅತೀ ಉದ್ದದ ಹಾಗೂ ದುಬಾರಿ ಆಕ್ಷನ್ ಸೀಕ್ವೆನ್ಸ್ ಎಂದು ನಿಸ್ಸಂದೇಹವಾಗಿ ಹೇಳಬಹುದು" ಎಂದು ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಶೆಡ್ಯೂಲ್ ಹೇಗಿರುತ್ತೆ?
ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ ಹಂತದ ಶೂಟಿಂಗ್‌ನಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಮುಂಬೈನಲ್ಲಿ ನಿರ್ದೇಶಕ ಗೀತು ಮೋಹನ್‌ದಾಸ್ ಅವರ ವಿಭಿನ್ನ ಕಥನಾ ಶೈಲಿ, ಜೆಜೆ ಪೆರ್ರಿ ದುಬಾರಿ ಆಕ್ಷನ್ ಹಾಗೂ ಅದನ್ನು ತೆರೆಮೇಲೆ ತಂದಿರುವ ಯಶ್ ತೆರೆಮೇಲೆ ಅಚ್ಚರಿ ಮೂಡಿಸುತ್ತಾರೆ. ಅದರ ಮುಂದುವರೆದ ಭಾಗವಾಗಿ ಬೆಂಗಳೂರಿನಲ್ಲಿ ಪ್ರಮುಖ ದೃಶ್ಯಗಳ ಚಿತ್ರೀಕರಣದ ಮೂಲಕ ಶೂಟಿಂಗ್‌ಗೆ ಅಂತ್ಯ ಹಾಡಲಿದ್ದಾರೆ.
ಲಂಡನ್‌ಗೆ ಯಶ್, ಏನಿದು ಗ್ಲೋಬಲ್ ಮ್ಯಾಟರ್?
ಮುಂಬೈ ಶೆಡ್ಯೂಲ್ ಮುಗಿಯುತ್ತಿದ್ದಂತೆ ರಾಕಿಂಗ್ ಸ್ಟಾರ್ ಯಶ್ ಲಂಡನ್‌ಗೆ ಹಾರಿದ್ದಾರೆ. 'ಟಾಕ್ಸಿಕ್' ಸಿನಿಮಾದ ಗ್ಲೋಬಲ್ ಪಾರ್ಟ್ನರ್‌ಶಿಪ್ ಬಗ್ಗೆ ಪ್ರಮುಖ ಕಂಪನಿಗಳ ಜೊತೆ ಮಾತುಕತೆ ನಡೆಯುವುದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಿರುವುದರಿಂದ ಜಾಗತಿಕ ಮಟ್ಟದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅಲ್ಲದೆ ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಿರುವ ಸಿನಿಮಾ ಆಗಿದ್ದರಿಂದ ಗ್ಲೋಬಲ್ ರಿಲೀಸ್‌ಗೆ ಮುಂದಾಗಿದೆ ಎನ್ನಲಾಗಿದೆ. ಹಾಗೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದೆ. ಕೆವಿಎನ್ ಪ್ರೊಡಕ್ಷನ್‌ನ ಕೆ.ನಾರಾಯಣ್ ಹಾಗೂ ಯಶ್ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಾರ್ಚ್ 19, 2026ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.


Click it and Unblock the Notifications











