twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲಿದ್ದಾರೆ ನಾದಬ್ರಹ್ಮ ಹಂಸಲೇಖ.. ಈ ಮೌನ ಯಾಕೆ?

    |

    ಕಳೆದ ಕೆಲವು ದಿನಗಳಿಂದ ಸಂಗೀತಗಾರ ಹಂಸಲೇಖ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಪೇಜಾವರ ಶ್ರೀಗಳು, ಬಿಳಿಗಿರಿ ರಂಗಯ್ಯ, ಸೋಲಿಗರು ಹಾಗೂ ಅಸ್ಪೃಶ್ಯತೆ ಬಗ್ಗೆ ಮಾತಾಡಿ ಪೇಚಿಗೆ ಸಿಲುಕಿದ್ದ ನಾದಬ್ರಹ್ಮ ತೀವ್ರ ಪರವಿರೋಧವನ್ನು ಎದುರಿಸುತ್ತಿದ್ದಾರೆ. ತನ್ನ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿ ಟೀಕೆಗಳಿಂದ ನುಣುಚಿಕೊಳ್ಳುವ ಯತ್ನಕ್ಕೆ ಮುಂದಾಗಿದ್ದರು. ಆದರೆ, ಈ ವಿವಾದ ಇಲ್ಲಿಗೆ ಮುಗಿದು ಹೋಯ್ತಾ? ಕ್ಷಮೆ ಕೇಳಿದ ಮೇಲೂ ಹಂಸಲೇಖ ಅವರ ಮೇಲೆ ಜನರು ತಿರುಗಿ ಬಿದ್ದಿರುವುದು ಯಾಕೆ? ಕ್ಷಮೆ ಕೇಳಿದ ಮೇಲೂ ಜನರು ಟೀಕೆ ಮಾಡುತ್ತಿದ್ದರೂ ಸಂಗೀತಗಾರರು ಸೈಲೆಂಟ್ ಆಗಿದ್ದು ಯಾಕೆ? ಅನ್ನು ಸಾಕಷ್ಟು ಪ್ರಶ್ನೆಗಳು ಹುಟ್ಟು ಹಾಕಿವೆ.

    ತಾನು ಕೊಟ್ಟ ಹೇಳಿಕೆಗಳು ಬಿಸಿಬಿಸಿ ಚರ್ಚೆಯಾಗುತ್ತಿದ್ದರೂ ಹಂಸಲೇಖ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತಿಲ್ಲ. ಮೌನಕ್ಕೆ ಶರಣಾಗಿದ್ದಾರೆ. ಕೆಲವೆಡೆ ಹಂಸಲೇಖ ವಿರುದ್ಧ ದೂರುಗಳು ದಾಖಲಾಗುತ್ತಿವೆ. ಮತ್ತೆ ಕೆಲವೆಡೆ ಹಂಸಲೇಖ ಪರ ದಲಿತ ಸಮಿತಿಗಳು, ಬೇರೆ ಬೇರೆ ವರ್ಗದ ಜನರು ಬೆಂಬಲ ಸೂಚಿಸಿದ್ದಾರೆ. ತಾನು ಕೊಟ್ಟ ಹೇಳಿಕೆಗಳಿಂದ ಜನರು ಕಚ್ಚಾಡುವಂತಾಗಿದ್ದರೂ ನಾದಬ್ರಹ್ಮ ತನಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಅಷ್ಟಕ್ಕೂ ಯಾಕೆ ಈ ಮೌನ. ಅಸ್ಪೃಶ್ಯತೆ ನಿವಾರಣೆ ಆಗಬೇಕು ಅಂತ ಸಾರಿ ಸಾರಿ ಹೇಳುತ್ತಿರುವ ಸಂಗೀತ ನಿರ್ದೇಶಕ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ತೆರೆಮರೆಗೆ ಸರಿದಿದ್ದು ಯಾಕೆ?

    ಎಲ್ಲಿದ್ದಾರೆ ನಾದಬ್ರಹ್ಮ ಹಂಸಲೇಖ, ಮೌನವೇಕೆ?

    ದೂರು ನೀಡಿದರೂ.. ದೂರಲಿಲ್ಲ ಏಕೆ?

    ದೂರು ನೀಡಿದರೂ.. ದೂರಲಿಲ್ಲ ಏಕೆ?

    ಹಂಸಲೇಖ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ "ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯ ಅಂತ ನಂಗ್ ಅನ್ನಿಸ್ತು." ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಪೇಜಾವರ ಶ್ರೀಗಳ ಭಕ್ತಗಣ ತಿರುಗಿ ಬಿದ್ದಿದೆ. ದೂರುಗಳ ಮೇಲೆ ದೂರು ದಾಖಲಾಗುತ್ತಿದೆ. ಸೋ‍ಷಿಯಲ್ ಮೀಡಿಯಾದಲ್ಲಿ ತೀವ್ರ ವಾಗ್ದಾಳಿ ನಡೆಯುತ್ತಿದೆ. ಹೀಗಿದ್ದರೂ ಹಂಸಲೇಖ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ, ಮೌನ ವಹಿಸಿರುವುದು ಯಾಕೆ? ಅನ್ನುವುದು ಮೊದಲ ಆರೋಪ.

    ಕ್ಷಮೆ ಒಪ್ಪದವರಿಗೆ ಉತ್ತರಿಸಲಿಲ್ಲ ನಾದ ಬ್ರಹ್ಮ

    ಕ್ಷಮೆ ಒಪ್ಪದವರಿಗೆ ಉತ್ತರಿಸಲಿಲ್ಲ ನಾದ ಬ್ರಹ್ಮ

    ದಿವಂಗತ ಪೇಜಾವರ ಶ್ರೀಗಳು ಹಾಗೂ ಬಿಳಿಗಿರಿ ರಂಗಯ್ಯನ ಬಗ್ಗೆ ಕಟು ಟೀಕೆಗಳನ್ನು ಮಾಡಿದ್ದ ಹಂಸಲೇಖ ತಾನಾಡಿದ ಮಾತುಗಳ ಬಗ್ಗೆ ಕ್ಷಮೆ ಕೇಳಿದ್ದರು. ಆದರೆ, ಅದನ್ನು ಕ್ಷಮೆ ಅಂತ ಒಪ್ಪಿಕೊಳ್ಳಲು ಶ್ರೀಗಳ ಭಕ್ತಗಣ ರೆಡಿಯಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ವಿರುದ್ಧ ತಿರುಗಿಬೀಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಕೆಲ ದಲಿತ ಸಂಘಟನೆಗಳು, ವಿಚಾರವಂತರೆಸಿಕೊಂಡವರು ಹಂಸಲೇಖ ಬೆಂಬಲಕ್ಕೆ ನಿಂತಿದ್ದು, ಬಿಟ್ಟರೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲೂ ತಾನು ಕೊಟ್ಟ ಹೇಳಿಕೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬಹುದಿತ್ತು. ಅದು ಮಾಡದೆ ಕಿತ್ತಾಡಲು ಬಿಟ್ಟು ಮೌನವಾಗಿದ್ದಾರೆ ಅನ್ನುವ ಎರಡನೇ ಆರೋಪ.

    ಈ ಬಗ್ಗೆ ಹಂಸಲೇಖ ಅವರ ಪ್ರತಿಕ್ರಿಯೆ ಕೇಳಲು ಯತ್ನಿಸಲಾಯಿತು. ಆದರೆ, ''ಹಂಸಲೇಖ ಪುತ್ರಿ ಈಗ ತಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸಲಾಗುತ್ತದೆ." ಎಂದು ಹೇಳಿದ್ದಾರೆ. ಅಷ್ಟಕ್ಕೂ ವಿವಾದಕ್ಕೆ ಸಿಲುಕಿದ ಹಂಸಲೇಖ ಈಗ ಏನು ಮಾಡುತ್ತಿದ್ದಾರೆ. ಹೇಳಿಕೆ ಕೊಟ್ಟು ತನಗೆ ಸಂಬಂಧವೇ ಇಲ್ಲದಂತೆ ತನ್ನ ಕೆಲಸಗಳಲ್ಲಿ ಮಗ್ನರಾಗಿರುವುದು ಯಾಕೆ? ಕನ್ನಡ ಚಿತ್ರರಂಗದ ಸಿನಿಸಾಹಿತಿ ಕವಿರಾಜ್ ಸೇರಿದಂತೆ ಕೆಲವರು ಹಂಸಲೇಖ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಧೈರ್ಯವಾಗಿ ಮಾತಾಡುತ್ತಿಲ್ಲವೇಕೆ ಪ್ರಶ್ನೆ ಸಹಜವಾಗಿ ಹುಟ್ಟಿಕೊಂಡಿದೆ. ನಾದ ಬ್ರಹ್ಮನ ವಿರುದ್ಧ ತಿರುಗಿಬಿದ್ದಿರುವ ಕೆಲವರು ಸರಿಗಮಪ ರಿಯಾಲಿಟಿ ಶೋನಿಂದಲೂ ಕೈ ಬಿಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಒತ್ತಡ ತರುತ್ತಿದ್ದಾರೆ.

    ರಿಯಾಲಿಟಿ ಶೋ ಕಥೆಯೇನು?

    ರಿಯಾಲಿಟಿ ಶೋ ಕಥೆಯೇನು?

    ಹಂಸಲೇಖ ಸದ್ಯ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆದರೆ, ಜೀ ಕನ್ನಡದ ಸುಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪದ ಪ್ರಮುಖ ತೀರ್ಪುಗಾರರಾಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದು, ಹಂಸಲೇಖ ದಿಢೀರನೇ ಕ್ಷಮೆ ಕೇಳಿದ್ದಕ್ಕೆ ಇದೇ ಕಾರಣ ಎನ್ನಲಾಗಿದೆ. ತೀವ್ರ ಟೀಕೆಗಳಿಗೆ ಒಳಗಾಗಿದ್ದರಿಂದ ರಿಯಾಲಿಟಿ ಶೋನಿಂದ ಕೈ ಬಿಡಬಹುದು ಅನ್ನುವ ಆತಂಕದಿಂದ ಕ್ಷಮೆ ಕೇಳಿದ್ದಾರೆ ಅನ್ನೋದು ಹಲವರ ವಾದ. ಆದರೆ, ರಿಯಾಲಿಟಿ ಶೋನಿಂದ ಹಂಸಲೇಖರನ್ನು ಕೈ ಬಿಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಜೀ ಕನ್ನಡ ವಾಹಿನಿಯ ಮೂಲಗಳು ತಿಳಿಸಿವೆ.

    English summary
    After giving statement against Pejawar Seer, Hamsalekha became silent. People are seeking answers from Nadabhramha Hamsalekha, but he remains silent.
    Thursday, November 18, 2021, 9:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X