ಇತ್ತ ಗನ್ ಲೈಸನ್ಸ್ ರದ್ದು.. ಅತ್ತ ಅಮ್ಮನೊಂದಿಗೆ ತಮ್ಮನ ಸಿನಿಮಾ ವೀಕ್ಷಿಸಿದ ದರ್ಶನ್; 'ರಾಯಲ್' ಗುಟ್ಟೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಪಡೆದು ಹೊರಬಂದಿದ್ದರೂ ಸಂಕಷ್ಟು ಕಡೆಯಾದಂತೆ ಕಾಣುತ್ತಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಅವರ ಬಳಿ ಇದ್ದ ಲೈಸೆನ್ಸ್‌ ಗನ್ ಅನ್ನು ಸರೆಂಡರ್ ಮಾಡುವಂತೆ ಪೊಲೀಸ್‌ರು ಸೂಚನೆ ನೀಡಿದ್ದರು. ಆ ಬಳಿಕ ದರ್ಶನ್ ಗನ್ ಅನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು.

ಬೆಂಗಳೂರಿನ ಪೊಲೀಸರು ಸೂಚನೆಗೆ ಪ್ರತಿಕ್ರಿಯಿಸಿದ ದರ್ಶನ್ ಗನ್ ಅವಶ್ಯಕತೆಯನ್ನು ವಿವರಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ, ಪೊಲೀಸರು ರೇಣುಕಾಸ್ವಾಮಿ ಕೇಸ್ ಮುಗಿಯುವವರೆಗೂ ಗನ್ ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದೆ. ಹೀಗಾಗಿ ತಾತ್ಕಾಲಿಕವಾಗಿ ಅವರ ಗನ್ ಲೈಸೆನ್ಸ್ ಅನ್ನು ಅಮಾನತಿನಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ರೇಣುಕಾಸ್ವಾಮಿ ಕೇಸ್ ಮುಗಿಯುವವರೆಗೂ ದರ್ಶನ್ ಗನ್ ಅನ್ನು ಬಳಸುವಂತಿಲ್ಲ. ಹಾಗೇ ಗನ್‌ ಅನ್ನು ಪೊಲೀಸರಿಗೆ ಸರೆಂಡರ್ ಮಾಡಬೇಕಾಗಿದೆ.

After his gun license cancelled by Bengaluru police Darshan watched his brother directed Royal movie

ಪೊಲೀಸರ ಸೂಚನೆ ಮೇರೆಗೆ ದರ್ಶನ್ ತಮ್ಮ ನಿವಾಸ ವ್ಯಾಪ್ತಿಯಲ್ಲಿರುವ ಆರ್.ಆರ್‌ ನಗರ ಪೊಲೀಸ್ ಠಾಣೆಗೆ ಗನ್ ಅನ್ನು ನೀಡುವಂತೆ ಸೂಚಿಸಲಾಗಿದೆ. ಹೀಗಾಗಿ ರೇಣುಕಾಸ್ವಾಮಿ ಕೇಸ್‌ನಿಂದ ಅವರು ಹೊರ ಬರುವವರೆಗೂ ಗನ್ ಅನ್ನು ಬಳಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ದರ್ಶನ್‌ಗೆ ಗನ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ನಗರ ಪೊಲೀಸ್ ಇಲಾಖೆ ಆಡಳಿತ ವಿಭಾಗ‌ ಡಿಸಿಪಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ರಾಜರಾಜೇಶ್ವರಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ದರ್ಶನ್ ಗನ್ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ದರ್ಶನ್ ಹೊರ ಬರುವವರೆಗೂ ಈ ಗನ್ ಮತ್ತೆ ಅವರ ಕೈ ಸೇರುವುದಿಲ್ಲ ಎನ್ನಲಾಗಿದೆ.

ಬೆಂಗಳೂರು ಪೊಲೀಸರು ನೀಡಿದ ನೋಟಿಸ್‌ಗೆ ದರ್ಶನ್ ಉತ್ತರ ನೀಡಿದ್ದರು. ತಾನೊಬ್ಬ ಸೆಲೆಬ್ರೆಟಿಯಾಗಿದ್ದರಿಂದ ಗನ್ ತನ್ನ ಬಳಿ ಇರುವ ಅಗತ್ಯವಿದೆ. ಆ ಗನ್ ಅನ್ನು ತನ್ನ ಆತ್ಮರಕ್ಷಣೆ ಮಾತ್ರ ಇಟ್ಟುಕೊಂಡಿರುವುದಾಗಿ ಕಾರಣವನ್ನು ಕೊಟ್ಟಿದ್ದರು. ಆದರೆ, ಪೊಲೀಸರು ದರ್ಶನ್ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಗನ್ ಪರವಾನಿಗಿಯನ್ನು ಕ್ಯಾನ್ಸಲ್ ಮಾಡಿದ್ದಾರೆ. ಒಂದು ಕಡೆ ಈ ಸುದ್ದಿ ಸದ್ದು ಮಾಡುತ್ತಿದ್ದರೆ. ಅತ್ತ ತಮ್ಮ ದಿನಕರ್ ತೂಗುದೀಪ್ ನಿರ್ದೇಶಿಸಿದ 'ರಾಯಲ್' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಪಡೆದ ಬಳಿಕ ಕೆಲವು ನಿರ್ಬಂಧಗಳನ್ನು ಹಾಕಿದ್ದರಿಂದ ತಮ್ಮ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಅವರ ಆರೋಗ್ಯ ಇನ್ನೂ ಸರಿ ಹೋಗಬೇಕಿದೆ. ಈ ಕಾರಣಕ್ಕೆ ಬೆಂಗಳೂರು ಹಾಗೂ ಮೈಸೂರು ಅಂತ ಓಡಾಡಿಕೊಂಡಿದ್ದಾರೆ. ಸದ್ಯ ತಮ್ಮ ದಿನಕರ್ ನಿರ್ದೇಶಿಸಿದ ಸಿನಿಮಾ 'ರಾಯಲ್' ಇದೇ ವಾರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಆ ಸಿನಿಮಾವನ್ನು ದರ್ಶನ್ ವೀಕ್ಷಣೆ ಮಾಡಿದ್ದಾರೆ.

ಅಮ್ಮ ಹಾಗೂ ತಮ್ಮ ದಿನಕರ್ ತೂಗುದೀಪ ಜೊತೆ ದರ್ಶನ್ ಮುನಿಸಿಕೊಂಡಿದ್ದರು. ಈಗ ಅದೆಲ್ಲವನ್ನು ಮರೆತು ಅಮ್ಮನೊಂದಿಗೆ ದರ್ಶನ್ ರಾಯಲ್ ಸಿನಿಮಾ ನೋಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಸಿನಿಮಾ ನೋಡಿ ಸಹೋದರನಿಗೆ ದರ್ಶನ್ ಏನು ಸಲಹೆ ಕೊಟ್ಟಿದ್ದಾರೆ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

More from Filmibeat

English summary
After his gun license cancelled by Bengaluru police Darshan watched his brother directed Royal movie
Read more about: darshan sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X