'ಹೊಯ್ಸಳ' ಬಳಿಕ 'ಕ್ಷೇತ್ರಪತಿ' ಲುಕ್ ಕೊಟ್ಟ ರಗಡ್ ನಟ: ಬರ್ತ್‌ಡೇ ಸರ್ಪ್ರೈಸ್
'ಗುಲ್ಟೂ', 'ಹೊಯ್ಸಳ'ದಂತಹ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರೋ ನಟ ನವೀನ್ ಶಂಕರ್. ಇತ್ತೀಚೆಗೆ ರಿಲೀಸ್ ಆಗಿರೋ ಧನಂಜಯ್ 25ನೇ ಸಿನಿಮಾ 'ಗುರುದೇವ್ ಹೊಯ್ಸಳ'ದಲ್ಲಿ ಖಡಕ್ ವಿಲನ್ ಆಗಿ ಮಿಂಚಿದ್ದರು.
ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ನವೀನ್ ಶಂಕರ್ ಸದಾ ವಿಭಿನ್ನ ಸಿನಿಮಾಗಳಿಂದಲೇ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡಿರೋ 'ಹೊಂದಿಸಿ ಬರೆಯಿರಿ' ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ನಟ ಕೈಯಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಿವೆ.

ನವೀನ್ ಶಂಕರ್ ಇಂದು (ಮೇ 25) ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಇದೇ ವೇಳೆ 'ಕ್ಷೇತ್ರಪತಿ' ತಂಡ ಮೋಷನ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. 'ಹೊಯ್ಸಳ' ಬಳಿಕ ಮತ್ತೊಂದು ರಗಡ್ ಪಾತ್ರದಲ್ಲಿ ನವೀನ್ ಶಂಕರ್ ಥಿಯೇಟರ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.
ಕಿಕ್ ಕೊಡುತ್ತಿದೆ 'ಕ್ಷೇತ್ರಪತಿ'
ನವೀನ್ ಶಂಕರ್ ರಗಡ್ ಸಿನಿಮಾಗಳಿಗೆ ಫೇಮಸ್. ಕಂಟೆಂಟ್ ಇರುವ ಸಿನಿಮಾಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ 'ಕ್ಷೇತ್ರಪತಿ' ಕೂಡ ಇಂತಹದ್ದೇ ಒಂದು ಕಥೆಯನ್ನು ಆಧರಿಸಿದ ಸಿನಿಮಾ. ಇದರಲ್ಲಿ ನವೀನ್ ಶಂಕರ್ ಒಬ್ಬ ಇಂಜಿನಿಯರ್. ರೈತನ ಮಗ. ಇವರಿಬ್ಬರ ಹೋರಾಟದ ಕಥೆಯೇ 'ಕ್ಷೇತ್ರಪತಿ'.
ಗದಗ ಭಾಗದಲ್ಲಿ ನಡೆಯೋ ಕಥೆಯಾಗಿದ್ದು, ಇಂಜಿನಿಯರ್ ಕಮ್ ನಿರ್ದೇಶಕ ಶ್ರೀಕಾಂತ್ ಕಾಟಗಿ 'ಕ್ಷೇತ್ರಪತಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಶ್ರೀಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು. ನವೀನ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿರೋ 'ಕ್ಷೇತ್ರಪತಿ' ಮೋಷನ್ ಪೋಸ್ಟರ್ ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದೆ.
'ಕೆಜಿಎಫ್' ಖ್ಯಾತಿಯ ಅರ್ಚನಾ ಜೋಯಿಸ್ ಸಾಥ್
'ಗುಲ್ಟೂ' ಸಿನಿಮಾದ ಹೀರೊ ನವೀನ್ ಶಂಕರ್‌ಗೆ 'ಕೆಜಿಎಫ್' ನಟಿ ಅರ್ಚನಾ ಜೋಯಿಸ್ ಹೀರೊಯಿನ್. ಈ ಸಿನಿಮಾದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರ ಪ್ರಕಾರ, 'ಕ್ಷೇತ್ರಪತಿ' ಅನ್ನೋದು ಸಂಸ್ಕೃತ ಪದ. ಇದು ರೈತ ಅನ್ನೋ ಅರ್ಥ ಕೊಡುತ್ತೆ.
'ಕ್ಷೇತ್ರಪತಿ' ಸಿನಿಮಾ ರೈತನ ಸಮಸ್ಯೆ ಕುರಿತಾದ ಸಿನಿಮಾ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ರೈತರ ಸಮಸ್ಯೆಯ ಕುರಿತಾದ ಕಮರ್ಷಿಯಲ್ ಸಿನಿಮಾವೊಂದು ಶೀಘ್ರವೇ ರಿಲೀಸ್ ಆಗಲಿದೆ. 'ಹೊಯ್ಸಳ' ಸಿನಿಮಾದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ನವೀನ್ ಶಂಕರ್, ಈಗ 'ಕ್ಷೇತ್ರಪತಿ' ಸಿನಿಮಾ ಮೂಲಕ ಸಿನಿಪ್ರಿಯರನ್ನು ರಂಜಿಸುವುದಕ್ಕೆ ಮುಂದಾಗಿದ್ದಾರೆ.
ರವಿ ಬಸ್ರೂರು ಮ್ಯೂಸಿಕ್
'ಕ್ಷೇತ್ರಪತಿ' ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ. ಹೀಗಾಗಿ ಮ್ಯೂಸಿಕ್ ಹಾಗೂ ಹಿನ್ನೆಲೆ ಸಂಗೀತದ ಮೇಲೆ ನಿರೀಕ್ಷೆ ಹೆಚ್ಚಿದೆ. ಹಾಗೇ ವೈಬಿವಿ ಶಿವ ಸಾಗರ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಈ ಸಿನಿಮಾದ ಟೆಕ್ನಿಕಲ್ ಟೀಮ್ ಅದ್ಭುತವಾಗಿದ್ದು, 'ಕ್ಷೇತ್ರಪತಿ' ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ನವೀನ್ ಶಂಕರ್ ಸದ್ಯ 'ಧರಣಿ ಮಂಡಳ ಮಧ್ಯದೊಳಗೆ', 'ಹೊಂದಿಸಿ ಬರೆಯಿರಿ', 'ನೋಡಿದವರು ಏನಂತಾರೆ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಮಾಸ್ ಅವರಾರದಲ್ಲಿ ನವೀನ್ ಶಂಕರ್ 'ಕ್ಷೇತ್ರಪತಿ'ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











