Jailer: 'ನರಸಿಂಹ'ನ ಫೈಯರ್ ಪವರ್ ನೋಡಿ ತಮಿಳರೇ ಕಂಗಾಲು: ಶಿವಣ್ಣನ ಈ 4 ಸಿನಿಮಾ ನೋಡಿ ಎಂದ ಫ್ಯಾನ್ಸ್!
'ಜೈಲರ್' ರಿಲೀಸ್ ಆಗಿದ್ದಾಗಿದೆ.. ಮೊದಲ ದಿನ ಜನರ ಮೆಚ್ಚುಗೆ ಗಳಿಸಿದ್ದೂ ಆಗಿದೆ. ಬಾಕ್ಸಾಫೀಸ್‌ನಲ್ಲಿ ರಜನಿ ಮೇನಿಯಾ ಶುರುವಾಗಿದ್ದೂ ಆಗಿದೆ. ತಲೈವಾ ಅಭಿಮಾನಿಗಳ ಸಂಭ್ರಮನೂ ಮುಗಿಲು ಮುಟ್ಟಿದೆ. ಈ ಮಧ್ಯೆ ಶಿವಣ್ಣ ಫಿನಿಕ್ಸ್‌ನಂತೆ ಎದ್ದು ಬಂದಿದ್ದಾರೆ.
ಈ ಸಿನಿಮಾದಿಂದ ರಜನಿಕಾಂತ್ ಗೆದ್ದರು ಅನ್ನೋದು ಸಂಭ್ರಮ ಅಲ್ಲ. ನರಸಿಂಹನ ಅವತಾರವೆತ್ತಿ ರಜನಿ ಅಭಿಮಾನಿಗಳ ಹೃದಯ ಗೆದ್ದುಬಿಟ್ಟಿದ್ದಾರೆ ಶಿವಣ್ಣ. ಎಲ್ಲಿ ನೋಡಿದರೂ ಶಿವಣ್ಣ ಪಾತ್ರದ ಬಗ್ಗೆನೇ ಗುಣಗಾನ. ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಲುಕ್, ಮ್ಯಾನರಿಸಂ ಬಗ್ಗೆನೇ ಟಾಕ್.
'ಜೈಲರ್' ಸಿನಿಮಾದಲ್ಲಿ ಶಿವಣ್ಣನದ್ದು ಅತಿಥಿ ಪಾತ್ರ. ಕೇವಲ ಎಂಟರಿಂದ ಹತ್ತು ನಿಮಿಷ ಬಂದು ಹೋಗುವ ಸೆಂಚುರಿ ಸ್ಟಾರ್ ತಮಿಳಿ ಮನಗೆದ್ದಿದ್ದಾರೆ. ಶಿವಣ್ಣನ ಸ್ವಾಗ್‌ಗೆ ಕಾಲಿವುಡ್ ಮಂದಿ ತಲೆಕೆಡಿಸಿಕೊಂಡಿದ್ದಾರೆ. ಇತ್ತ ಸೆಂಚುರಿಸ್ಟಾರ್ ಅಭಿಮಾನಿಗಳು ಶಿವಣ್ಣನ ಪ್ರಮುಖ ನಾಲ್ಕು ಸಿನಿಮಾಗಳನ್ನು ನೋಡುವಂತೆ ಸಲಹೆ ನೀಡಿದ್ದಾರೆ. ಸೆಂಚುರಿಸ್ಟಾರ್ ಖದರ್ ಏನು ಅನ್ನೋದನ್ನು ಹಾಡಿ ಹೊಗಳುತ್ತಿದ್ದಾರೆ. ಫ್ಯಾನ್ಸ್ ಸಲಹೆ ನೀಡಿದ ಆ ನಾಲ್ಕು ಸಿನಿಮಾಗಳ್ಯಾವುವು?
ಶಿವಣ್ಣನ ಕ್ರೇಜ್‌ಗೆ ಫ್ಯಾನ್ಸ್ ಥ್ರಿಲ್
ಸೆಂಚುರಿಸ್ಟಾರ್ ಶಿವಣ್ಣ ಕರ್ನಾಟಕದಲ್ಲಷ್ಟೇ ಅಲ್ಲ, ತಮಿಳುನಾಡಿನಲ್ಲೂ ಮೋಡಿ ಮಾಡುತ್ತಿದ್ದಾರೆ. ಅತಿಥಿಯಾಗಿ ಎಂಟ್ರಿ ಕೊಟ್ಟು ತಮಿಳರ ಮನಗೆದ್ದು ಬಂದಿದ್ದಾರೆ. 8 ರಿಂದ 10 ನಿಮಿಷಗಳಲ್ಲೇ ತನ್ನದೇ ಮನಗೆದ್ದು ಬಂದಿದ್ದಾರೆ. ಶಿವಣ್ಣನ ಎಂಟ್ರಿಗೆ, ಮ್ಯಾನರಿಸಂಗೆ, ಕಣ್ಣಿನ ನೋಟಕ್ಕೆ ಫಿದಾ ಆಗಿಬಿಟ್ಟಿದ್ದಾರೆ. ಶಿವಣ್ಣನ ಕ್ರೇಜ್ ಹೆಚ್ಚಾಗುತ್ತಿದ್ದಂತೆ ತಮಿಳರು ಹಳೇ ಸಿನಿಮಾಗಳನ್ನು ನೋಡಲು ಬಯಸಿದ್ದರು. ಅದಕ್ಕೆ ಶಿವಣ್ಣ ಅಭಿಮಾನಿಗಳು 4 ಸಿನಿಮಾಗಳನ್ನು ಪಟ್ಟಿ ಮಾಡಿ ಕೊಟ್ಟಿದ್ದಾರೆ.

ತಮಿಳರಿಗೆ 4 ಸಿನಿಮಾ ನೋಡಲು ಸಲಹೆ
ಸೆಂಚುರಿ ಸ್ಟಾರ್ ಖದರ್ ಏನು? ಲಾಂಗ್ ಹಿಡಿದು ಬಂದ ಸಿನಿಮಾಗಳ ಕ್ರೇಜ್ ಹೇಗಿತ್ತು? ಅನ್ನೋದು ಕನ್ನಡಿಗರಿಗೆ ಗೊತ್ತೇ ಇದೆ. ಅದಕ್ಕೆ ಸೆಂಚುರಿಸ್ಟಾರ್ ಅಭಿಮಾನಿಗಳು ತಮಿಳಿಗರಿಗೆ ಈ ನಾಲ್ಕು ಸಿನಿಮಾಗಳನ್ನು ನೋಡುವಂತೆ ಸಲಹೆ ನೀಡುತ್ತಿದ್ದಾರೆ. ಉಪೇಂದ್ರ ನಿರ್ದೇಶಿಸಿದ 'ಓಂ'. ಪ್ರೇಮ್ ನಿರ್ದೇಶಿಸಿದ 'ಜೋಗಿ', ದುನಿಯಾ ಸೂರಿ ನಿರ್ದೇಶನದ 'ಟಗರು', ನರ್ತನ್ ಸಿನಿಮಾ 'ಮಫ್ತಿ' ನೋಡುವಂತೆ ಸಲಹೆ ನೀಡುತ್ತಿದ್ದಾರೆ.
ಅಪರೂಪದ ತಳಿ
ಶಿವಣ್ಣ ಕ್ರೇಜ್ ಕಂಡು ಅಭಿಮಾನಿಗಳೇ ಶಾಕ್ ಆಗಿದ್ದಾರೆ. ಅದಕ್ಕೆ ಸೆಂಚುರಿಸ್ಟಾರ್ ಖದರ್ ಅನ್ನು ಹಾಡಿ ಹೋಗಳುತ್ತಿದ್ದಾರೆ. " ಇವರಿಗೆ ಅದ್ಬುತ ಎನ್ನುವಂತಹ ಲುಕ್ ಇಲ್ಲದೆ ಇರಬಹುದು. ಉಳಿದ ಸೀನಿಯರ್ ಹೀರೊಗಳಂತೆ ದೈಹಿಕ ಸೌಂದರ್ಯ ಇಲ್ಲದೆ ಇರಬಹುದು. ನಿಮ್ಮಲ್ಲಿ ಇವರು ಜನಪ್ರಿಯರಲ್ಲದೇ ಇರಬಹುದು. ಆದರೆ, ಮೊದಲ ನೋಟದಲ್ಲಿಯೇ ನಿಮ್ಮನ್ನು ಸೆಳೆಯಲು ಈ ವ್ಯಕ್ತಿಯ ಓಳಗೆ ಒಂದು ಸೆಳೆತವಿದೆ, ತಾಕತ್ತಿದೆ, ತಾನೇ ಸೃಷ್ಟಿಸಿಕೊಂಡ ಖದರ್ ಇದೆ, ಮ್ಯಾನರಿಸಂ ಇದೆ. ಇದೊಂದು ಅಪರೂಪದ ತಳಿ" ಅಂತ ಕಮೆಂಟ್ ಮಾಡುತ್ತಿದ್ದಾರೆ.
ತಮಿಳುನಾಡಲ್ಲಿ ಹೇಗಿದೆ ಕ್ರೇಜ್?
ಶಿವರಾಜ್‌ಕುಮಾರ್ ಕ್ರೇಜ್ ರಜನಿಕಾಂತ್ ಅನ್ನೂ ಬೀಟ್ ಮಾಡುವಂತಿದೆ. ತಮಿಳು ಪ್ರೇಕ್ಷಕರು ಸಿನಿಮಾ ನೋಡಿ ಫಿದಾ ಆಗಿದ್ದಾರೆ. "ಶಿವರಾಜ್‌ಕುಮಾರ್ ಎಂಟ್ರಿಗೆ ಇಡೀ ಥಿಯೇಟರ್ ಹುಚ್ಚೆದ್ದು ಕುಣಿಯುತ್ತಿದೆ. ಶಿವಣ್ಣ ಕಂಡು ತಮಿಳುನಾಡಿನಲ್ಲೂ ಥ್ರಿಲ್ ಆಗಿದ್ದಾರೆ." ಕಮೆಂಟ್ ಮಾಡುತ್ತಿದ್ದಾರೆ. "ಶಿವಣ್ಣನನ್ನು ಕನ್ನಡ ಫಿಲ್ಮ್ ಮೇಕರ್ಸ್ ಸರಿಯಾಗಿ ತೋರಿಸಿಲ್ಲ" ಎಂದೂ ಹೇಳುತ್ತಿದ್ದಾರೆ. " ಪ್ರಿ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ರಜನಿಯನ್ನೇ ಡಾಮಿನೇಟ್ ಮಾಡುತ್ತಾರೆ ಅನ್ನೋದನ್ನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ" ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications











