ದುಬೈನಲ್ಲೂ ದರ್ಶನ್ ಪ್ರಾಣಿ ಪ್ರೀತಿ; ಹುಲಿ ಮೈ ಸವರಿ ಖುಷಿ ಪಟ್ಟ ಡಿ ಬಾಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ಕರ್ನಾಟಕ ಬಾಕ್ಸಾಫೀಸ್‌ನಲ್ಲಿ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿಯೇ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕಳೆದ ವರ್ಷ ಮಂಕಾಗಿದ್ದ ಸ್ಯಾಂಡಲ್‌ವುಡ್‌ಗೆ ದರ್ಶನ್ ಸಿನಿಮಾ ಮತ್ತೆ ಹೊಸ ಹುರುಪು ನೀಡಿರೋದಂತೂ ಸತ್ಯ.

ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಜಯಭೇರಿ ಬಾರಿಸಿದ ಬಳಿಕ ದರ್ಶನ್ ದುಬೈಗೆ ಪ್ರಯಣ ಬೆಳೆಸಿದ್ದರು. 'ಕಾಟೇರ' ಸಿನಿಮಾವನ್ನು ದುಬೈನಲ್ಲೂ ರಿಲೀಸ್ ಮಾಡಿದ್ದರಿಂದ ಅಲ್ಲಿನ ಭಾರತೀಯರಿಗಾಗಿ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿತ್ತು. ಹೀಗಾಗಿ ಅತಿಥಿಯಾಗಿ ದರ್ಶನ್ ಹಾಗೂ ಅವರ ತಂಡ ದುಬೈಗೆ ತೆರಳಿತ್ತು. ಸಿನಿಮಾ ಕೆಲಸ ಮುಗಿಯುತ್ತಿದ್ದಂತೆ ದರ್ಶನ್ ಫುಲ್ ಜಾಲಿ ಮೂಡಿನಲ್ಲಿದ್ದಾರೆ.

darshan in Dubai Zoo

'ಕಾಟೇರ' ಸಕ್ಸಸ್ ಬೆನ್ನಲ್ಲೇ ದುಬೈನಲ್ಲಿ ದರ್ಶನ್ ತಮ್ಮ ಆಪ್ತರು ಹಾಗೂ ತಂಡದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ದರ್ಶನ್ ಸ್ನೇಹಿತರೊಂದಿಗೆ ಬೋಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದರು. ಆದ್ರೀಗ ಸೀದಾ ದುಬೈನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಪ್ರಾಣಿಗಳೊಂದಿಗೆ ಕೆಲ ಹೊತ್ತು ಸುತ್ತಾಡಿ ಬಂದಿದ್ದಾರೆ.

ದುಬೈನ ಮೃಗಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಹುಲಿಯ ಮೈ ಸವರಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಹುಲಿ ಮೈ ಸವರುತ್ತಿರುವ ದರ್ಶನ್ ವಿಡಿಯೋಗೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹುಲಿ ಜೊತೆ ಜೊತೆಗೆ ದರ್ಶನ್ ಹಾವನ್ನು ಕೊರಳಿಗೆ ಸುತ್ತಿಕೊಂಡು ಪೋಸ್ ಕೊಟ್ಟಿದ್ದಾರೆ.

ಇನ್ನೊಂದು ಕಡೆ ಚಿಂಪಾಜಿ ಕೈ ಹಿಡಿದ ದರ್ಶನ್‌ರನ್ನು ಕರೆದುಕೊಂಡು ಹೋಗಿರುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ದುಬೈನಲ್ಲೂ ದರ್ಶನ್ ಪ್ರಾಣಿ ಪ್ರೀತಿಯನ್ನು ಕಂಡು ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮೆಂಟ್‌ಗಳಲ್ಲಿ ದರ್ಶನ್‌ರನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲ ಡಿ ಬಾಸ್ ಅಭಿಮಾನಿಗಳು ಫುಲ್ ವಿಡಿಯೋವನ್ನು ಹಾಕುವಂತೆ ಒತ್ತಾಯ ಕೂಡ ಮಾಡಿದ್ದಾರೆ.

darshan in Dubai Zoo

"ಪ್ರಾಣಿಗಳು ಅಂತಹ ಒಪ್ಪುವ ಸ್ನೇಹಿತರು -ಅವರು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ. ಅವರು ಯಾವುದೇ ಟೀಕೆಗಳನ್ನು ರವಾನಿಸುವುದಿಲ್ಲ. ನಾ ನೋಡಿರುವ ಅತಿ ದೊಡ್ಡ ಪ್ರಾಣಿ ಪ್ರಿಯ ಇವರು" ಎಂದು ಒಬ್ಬ ಅಭಿಮಾನಿ ಈ ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.

ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಬಂದಿರೋ 'ಕಾಟೇರ' ಕರ್ನಾಟಕದಲ್ಲಿ ಉತ್ತಮ ಗಳಿಕೆ ಕಂಡಿದೆ. ಈ ಮೂಲಕ ಮತ್ತೆ ದರ್ಶನ್‌ಗೆ ಬಿಗ್ ಸಕ್ಸಸ್ ಸಿಕ್ಕಿದೆ. 'ಕ್ರಾಂತಿ' ಬಳಿಕ ದರ್ಶನ್ ಇಂತಹದ್ದೊಂದು ಯಶಸ್ಸನ್ನು ಎದುರು ನೋಡುತ್ತಿದ್ದರು. ಅದಕ್ಕೆ ತಕ್ಕಂತೆ ಅಪ್ಪಟ ಕನ್ನಡ ಸಿನಿಮಾ 'ಕಾಟೇರ' ಬಾಕ್ಸಾಫೀಸ್‌ ಅಬ್ಬರಿ ಜೋರಾಗಿಯೇ ಸದ್ದು ಮಾಡುತ್ತಿದೆ.

More from Filmibeat

English summary
After Kaatera premier show in Kaatera Darshan visited Dubai Zoo video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X