'ಕಬ್ಜ 2' ಬರೋದು ಕನ್ಫರ್ಮ್: ಬಾಲಿವುಡ್ ನಂ 1 ಸ್ಟಾರ್ ಮೇಲೆ ಆರ್‌ ಚಂದ್ರು ಕಣ್ಣು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಕಳೆದೆರಡು ವರ್ಷಗಳಿಂದ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. 2022ರಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ನೋಡಿ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ದಂಗಾಗಿ ಹೋಗಿತ್ತು. 'ಕೆಜಿಎಫ್ 2','ಕಾಂತಾರ','777 ಚಾರ್ಲಿ', 'ವಿಕ್ರಾಂತ್ ರೋಣ'ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ್ದವು.

2023 ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷ ಆಗುತ್ತಾ? ಈ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ 'ಕಬ್ಜ' ಉತ್ತರ ಕೊಡಲಿದೆ. ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಕಾಂಬಿನೇಷನ್ ಅದೆಷ್ಟರ ಮಟ್ಟಿಗೆ ಕಿಕ್ ಕೊಡುತ್ತೆ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಯಾರಿಗೆ ಎಷ್ಟು ಕಾನ್ಫಿಡೆನ್ಸ್ ಇದೆಯೋ ಬೇರೆ ಮಾತು. ಆದರೆ, ನಿರ್ದೇಶಕ ಆರ್‌ ಚಂದ್ರು ಮಾತ್ರ ಫುಲ್ ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಅದಕ್ಕೆ 'ಕಬ್ಜ 2'ಗೆ ಈಗಾಗಲೇ ತಯಾರಿ ನಡೆಸಿದ್ದಾರೆ ಅನ್ನೋದು ಸುದ್ದಿ ಓಡಾಡುತ್ತಿದೆ.

After Kabzaa, Director R Chandru Will Start Kabzaa 2 And Is Planning to Bring Bollywood No. 1 Star

'ಕಬ್ಜ 2' ಬರೋದು ಕನ್ಫರ್ಮ್

'ಕಬ್ಜ' ರಿಲೀಸ್‌ಗೂ ಮುನ್ನವೇ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು 'ಕಬ್ಜ 2'ಗೆ ಸ್ಕೆಚ್ ಹಾಕಿದ್ದಾರೆ. ಈ ಸುದ್ದಿ ಕಳೆದ ಕೆಲವು ದಿನಗಳಿಂದ ಓಡಾಡುತ್ತಿತ್ತು. ಈ ಬೆನ್ನಲ್ಲೇ ಶಿವರಾಜ್‌ಕುಮಾರ್ ಸಿನಿಮಾದ ಡಬ್ಬಿಂಗ್ ವೇಳೆ, ಕಬ್ಜ 2 ಬಗ್ಗೆ ಮಾಧ್ಯಮಗಳಿಗೆ ರಿವೀಲ್ ಮಾಡಿದ್ದರು. 'ಕಬ್ಜ' ಪಾರ್ಟ್ 2ನಲ್ಲಿ ಶಿವಣ್ಣನ ಪಾತ್ರವೇ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೆ ಎಂದಿದ್ದರು.

" ನನ್ನ ಪಾತ್ರದ ಮೂಲಕವೇ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಅಂತ ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ, ಇದು ಹೇಗೆ ಅನ್ನೋದು ಇನ್ನೂ ಚರ್ಚೆಯಾಗಬೇಕಿದೆ." ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ 'ಕಬ್ಜ 2' ಸೆಟ್ಟೇರುವುದಂತೂ 'ಕಬ್ಜ' ಬಿಡುಗಡೆಗೂ ಮುನ್ನವೇ ಕನ್ಫರ್ಮ್ ಆಗಿದೆ.

ಬಾಲಿವುಡ್‌ ನಂ 1 ಸ್ಟಾರ್ ಮೇಲೆ ಚಂದ್ರು ಕಣ್ಣು?

ಇನ್ನೇನು 'ಕಬ್ಜ 2' ಬಗ್ಗೆ ಚರ್ಚೆ ಆಗುತ್ತಿರುವಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಆರ್. ಚಂದ್ರು 'ಕಬ್ಜ 2' ಅನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುವುದಕ್ಕೆ ಸ್ಕೆಚ್ ಹಾಕಿದ್ದಾರೆ. ಫಿಲ್ಮಿಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ನಿರ್ದೇಶಕ ಆರ್‌.ಚಂದ್ರು 'ಕಬ್ಜ 2' ಬಾಲಿವುಡ್‌ನ ನಂ 1 ನಟರನ್ನು ಕರೆದುಕೊಂಡು ಬರಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರೊಂದಿಗೆ ಮಾತುಕತೆ ಕೂಡ ನಡೆಯುತ್ತಿದೆ ಅಂತ ಚಂದ್ರು ಆಪ್ತ ವಲಯ ಮಾತಾಡಿಕೊಳ್ಳುತ್ತಿದೆ.

After Kabzaa, Director R Chandru Will Start Kabzaa 2 And Is Planning to Bring Bollywood No. 1 Star

ಹಾಗಿದ್ದರೆ, ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಮೂವರು ದಿಗ್ಗಜರು 'ಕಬ್ಜ 2'ನಲ್ಲಿ ಇರುತ್ತಾರಾ? ಅಥವಾ ಇಲ್ವಾ? ಅನ್ನೋ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಈ ಪ್ರಶ್ನೆಗೆ 'ಕಬ್ಜ' ಸಿನಿಮಾದ ಕ್ಲೈಮ್ಯಾಕ್ಸ್ ಉತ್ತರ ಕೊಡಲಿದೆ. ಮೂವರ ಪಾತ್ರ ಕ್ಲೈಮ್ಯಾಕ್ಸ್‌ನಲ್ಲಿ ಏನಾಗುತ್ತೆ? ಅನ್ನೋದು ಮುಂದಿನ ಕತೆಗೆ ನಾಂದಿ ಹಾಡಲಿದೆ. ಅಷ್ಟಕ್ಕೂ ಆರ್‌ ಚಂದ್ರು, ಬಾಲಿವುಡ್‌ ಸೂಪರ್‌ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿರೋದು ಸತ್ಯ ಅನ್ನೋ ಮಾತು ಬಲ್ಲ ಮೂಲಗಳೇ ತಿಳಿಸಿವೆ. ಏನಕ್ಕೂ ಆರ್ ಚಂದ್ರು ಆ ಬಾಲಿವುಡ್‌ ನಟ ಯಾರು? ಅನ್ನೋದನ್ನು ರಿವೀಲ್ ಮಾಡಬೇಕಿದೆ.

More from Filmibeat

English summary
After Kabzaa, Director R Chandru Will Start Kabzaa 2 And Is Planning to Bring Bollywood No. 1 Star, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X