ಕಮಲ್ ಹಾಸನ್ ವಿವಾದದ ಬಳಿಕ ಪಿಎಂ ನರೇಂದ್ರ ಮೋದಿಯ ವಿಡಿಯೋ ವೈರಲ್; ಅದರಲ್ಲೇನಿದೆ?
ಕಮಲ್ ಹಾಸನ್ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ಕೊಟ್ಟು ವಿವಾದದ ಕಿಚ್ಚ ಹಚ್ಚಿದ್ದಾರೆ. ತಮಿಳು ನಟನ ಈ ವಿವಾದಾತ್ಮಕ ಹೇಳಿಕೆ ಬಗ್ಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕಮಲ್ ನಟಿಸಿದ ಥಗ್ ಲೈಫ್ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಆಕ್ರೋಶವನ್ನು ಹೊರಹಾಕಿದೆ. ಹೀಗಾಗಿ 'ಥಗ್ ಲೈಫ್' ಬಿಡುಗಡೆ ಆಗುತ್ತೋ ಇಲ್ಲವೋ ಎನ್ನುವ ಗೊಂದಲವಿದೆ.
ತಮಿಳು ನಟ ಕಮಲ್ ಹಾಸನ್ ವಿವಾದದ ಕಿಡಿ ಹಚ್ಚುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯ ಹಳೇ ವಿಡಿಯೋವನ್ನು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಮೋದಿ ತಮಿಳು ಭಾಷೆಯ ಬಗ್ಗೆ ಹೇಳಿದ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಮಲ್ ಜೊತೆ ಪ್ರಧಾನಿ ಮೋದಿ ಎರಡು ವರ್ಷಗಳ ಹಿಂದೆ ತಮಿಳು ಭಾಷೆಯ ಬಗ್ಗೆ ವೇದಿಕೆ ಮೇಲೆ ಕೊಟ್ಟ ಹೇಳಿಕೆಯ ವಿಡಿಯೋಗಳು ಸೈಲೆಂಟ್‌ಗಾಗಿ ಎಲ್ಲಾ ಹರಿದಾಡುವುದಕ್ಕೆ ಶುರುವಾಗಿದೆ.

ಕಮಲ್ ಹಾಸನ್ ವಿವಾದ ಎದ್ದೇಳುತ್ತಿದ್ದಂತೆ ಈ ವಿಡಿಯೋವನ್ನು ವೈರಲ್ ಮಾಡುತ್ತಿರುವುದು ಏಕೆ? ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಪಿಎಂ ಮೋದಿ ವಿಡಿಯೋ ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಮೋದಿ ಏನಂದಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಕನ್ನಡ ಭಾಷೆಯ ಬಗ್ಗೆ ಆಧಾರ ರಹಿತ ಹೇಳಿಕೆ ಕೊಟ್ಟು ಕಮಲ್ ಹಾಸನ್ ವಿವಾದಕ್ಕೆ ಸಿಲುಕಿದ್ದಾರೆ. ಕನ್ನಡಿಗರು, ಭಾಷಾ ತಜ್ಞರು ಕಮಲ್ ಹೇಳಿಕೆಯ ವಿರುದ್ಧ ಕಿಡಿಕಾರಿದ್ದಾರೆ. ತಮಿಳು ಭಾಷೆಯಿಂದ ಕನ್ನಡ ಹುಟ್ಟಿದೆ ಎಂದು ವಾದವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ. ತಮಿಳು ಹಾಗೂ ಕನ್ನಡ ಎರಡೂ ಸಹೋದರ ಭಾಷೆಗಳು ಎಂದು ವಾದ ಮಂಡಿಸುತ್ತಿದ್ದಾರೆ. ಭಾಷಾ ತಜ್ಞರೇ ಪ್ರತಿಕ್ರಿಯೆ ನೀಡುತ್ತಿದ್ದರೂ, ಕಮಲ್ ಹಾಸನ್ ಮಾತ್ರ ತಪ್ಪು ಒಪ್ಪಿಕೊಳ್ಳುವುದಕ್ಕೆ ರೆಡಿಯಿಲ್ಲ. ಮೊಂಡುತನವನ್ನು ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆನೂ ಕಮಲ್ ಹಾಸನ್ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಕಮಲ್ ಹಾಸನ್ ವಿವಾದ ಕರ್ನಾಟಕದಲ್ಲಿ ವಿವಾದದ ಕಿಚ್ಚು ಹಚ್ಚಿರುವ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಹಲವು ಬಾರಿ, ಹಲವು ಸಂದರ್ಭಗಳಲ್ಲಿ ವೇದಿಕೆ ಮೇಲೆ ತಮಿಳು ಜಗತ್ತಿನ ಹಳೆಯ ಭಾಷೆಗಳಲ್ಲಿ ಒಂದು ಎಂದು ಹೇಳಿದ್ದಾರೆ. ಈ ವಿಡಿಯೋಗಳನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ತಮಿಳು ಜಗತ್ತಿನ ಅತ್ಯಂತ ಹಳೆಯ ಭಾಷೆ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಪಿಎಂ ಮೋದಿ ಹಲವು ಸಂದರ್ಭಗಳಲ್ಲಿ ತಮಿಳು ಜಗತ್ತಿನ ಹಳೆಯ ಭಾಷೆ ಎಂದಿರುವ ವಿಡಿಯೋ ಶೇರ್ ಮಾಡಲಾಗುತ್ತಿದೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯಾ? ಇಂತಹದ್ದೊಂದು ಅನುಮಾನವಂತೂ ಹುಟ್ಟಿಕೊಂಡಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ "ನಾನು ಹಲವು ವೇದಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಹೆಮ್ಮೆಯಿಂದ ಈ ಮಾತುಗಳನ್ನು ಹೇಳಿದ್ದೆ. ತಮಿಳು ಭಾಷೆ ಪ್ರಪಂಚದ ಅತ್ಯಂತ ಹಳೆಯ ಭಾಷೆ. ಇದು ನನ್ನ ದೇಶದ್ದು ಎಂದು ಹೆಮ್ಮೆಯಿಂದ ಹೇಳಿದ್ದೆ." ಎಂದು ಹೇಳಿದ್ದರು. ಈ ಕ್ಲಿಪ್ ಅನ್ನಷ್ಟೇ ಕಟ್ ಮಾಡಿ ವೈರಲ್ ಮಾಡಲಾಗುತ್ತಿದೆ.
2023ರಲ್ಲಿ 'ಪರೀಕ್ಷಾ ಪೆ ಚರ್ಚಾ' ಎನ್ನುವ ಕಾರ್ಯಕ್ರಮದಲ್ಲಿ ಮಾತೃಭಾಷೆಯ ಬಗ್ಗೆನೂ ಪ್ರಧಾನಿ ಮೋದಿ ಮಾತಾಡಿದ್ದರು. " ಪ್ರತಿಯೊಬ್ಬರೂ ಪ್ರಯತ್ನ ಪಡಬೇಕು ಎಂದು ನಾನು ಆಸೆ ಪಡುತ್ತೇನೆ. ನಮ್ಮ ಮಾತೃಭಾಷೆಯ ಹೊರತಾಗಿ ಭಾರತದ ಯಾವುದಾದರೂ ಭಾಷೆಯ ಕೆಲವು ಸಾಲುಗಳು ಮಾತಾಡುವುದಕ್ಕೆ ಬರಬೇಕು. ನೀವು ಬೇರೆ ಭಾಷೆಯ ವ್ಯಕ್ತಿಯನ್ನು ಭೇಟಿ ಮಾಡಿದಾಗ, ಒಂದೆರಡು ವಾಕ್ಯಗಳನ್ನು ಅವರ ಭಾಷೆಯಲ್ಲಿ ಮಾತಾಡಿದಾಗ ಖುಷಿಯಾಗುತ್ತೆ." ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಕಮಲ್ ಹಾಸನ್ ವಿವಾದದ ಬಗ್ಗೆ ಈ ವಿಡಿಯೋ ಕ್ಲಿಪಿಂಗ್‌ಗಳನ್ನು ಶೇರ್ ಮಾಡಲಾಗುತ್ತಿದೆ.


Click it and Unblock the Notifications











