ಅಪಘಾತದಲ್ಲಿ ನಿಧನರಾಗಿದ್ದ ಕನ್ನಡ ನಟಿ ಪವಿತ್ರಾ ಜಯರಾಂ ಗೆಳೆಯ ಆತ್ಮಹತ್ಯೆಗೆ ಶರಣು!

ಕನ್ನಡ ನಟಿ ಪವಿತ್ರಾ ಜಯರಾಮ್ ಇತ್ತೀಚೆಗೆ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಅವರ ಗೆಳೆಯ ಹಾಗೂ ತೆಲುಗು ನಟ ಚಂದು ಕೂಡ ಕಾರು ಅಪಘಾತದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆ ವೇಳೆ ಕನ್ನಡ ನಟಿ ಪವಿತ್ರಾ ಜಯರಾಂ ಸಾವಿನ ಬಗ್ಗೆ ಚಂದು ಭಾವುಕರಾಗಿ ಮಾತಾಡಿದ್ದರು.

ಪವಿತ್ರಾ ಜಯರಾಂ ಸಾವಿನ ನಿಂದ ನೊಂದಿದ್ದ ಗೆಳೆಯ ಹಾಗೂ ಸೀರಿಯಲ್‌ ನಟ ಚಂದು ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಹೊರಬಿದ್ದಿದೆ. ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಚಂದು ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ನಟಿ ಪವಿತ್ರಾ ಜಯರಾಂ ಮೃತ ದೇಹದೊಂದಿಗೆ ಮಂಡ್ಯದವರೆಗೂ ಚಂದು ಬಂದು, ಮಾಧ್ಯಮಗಳೊಂದಿಗೆ ಭಾವುಕರಾಗಿ ಮಾತಾಡಿದ್ದರು.

After Kannada actress Pavithra Jayaram died in an accident her boyfriend Chandu committed suicide

ಚಂದು ಹಾಗೂ ಪವಿತ್ರಾ ಜಯರಾಂ ಇಬ್ಬರೂ ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಚಂದು ಅದಾಗಲೇ ಹಲವು ತೆಲುಗು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಪವಿತ್ರಾ ಹಾಗೂ ಚಂದ್ರು ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ದರ್ಶನ್ ಸಿನಿಮಾ 'ಡೆವಿಲ್‌'ನಲ್ಲಿ ನಟಿಸಲು ಪವಿತ್ರಾ ಜಯರಾಂಗೆ ಆಫರ್ ಬಂದಿತ್ತು. ಹೀಗಾಗಿ ಆ ಸಿನಿಮಾಗೆ ಸಹಿ ಮಾಡಲು ಬೆಂಗಳೂರಿಗೆ ಪವಿತ್ರಾ ಜೊತೆ ಚಂದು ಕೂಡ ಬಂದಿದ್ದರು.

ಬೆಂಗಳೂರಿನಿಂದ ಹಿಂತಿರುಗುವಾಗ ಪ್ರಯಾಣಿಸುತ್ತಿರುವ ಕಾರು ಅಪಘಾತವಾಗಿತ್ತು. ಈ ವೇಳೆ ನಟಿ ಪವಿತ್ರಾ ಜಯರಾಂ ಸಾವನ್ನಪ್ಪಿದರೆ, ಚಂದು ಇಂದು (ಮೇ 17) ಆತ್ಮಹತ್ಯೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಇಂದು ಪವಿತ್ರಾ ಜಯರಾಂ ಹುಟ್ಟುಹಬ್ಬ ಎಂದು ಚಂದು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಆತ್ಮಹತ್ಯೆ ಸುದ್ದಿ ಹೊರಬಂದಿದೆ.

ಚಂದ್ರು ಆತ್ಮಹತ್ಯೆ ಬಗ್ಗೆ ಸದ್ಯ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಗೆಳತಿ ಪವಿತ್ರಾ ಜಯರಾಂ ಸಾವಿನ ಬಳಿಕ ನೊಂದು ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಳಾಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಪವಿತ್ರಾ ಜಯರಾಂ ಸಾವಿಗೆ ಆಂಬುಲೆನ್ಸ್ ತಡವಾಗಿ ಬಂದಿದ್ದೇ ಕಾರಣವೆಂದು ಚಂದು ಆರೋಪ ಮಾಡಿದ್ದರು.

ಚಂದು ಉರ್ಫ್ ಚಂದ್ರಕಾಂತ್ ಹಾಗೂ ಪವಿತ್ರಾ ಜಯರಾಂ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಒಂದೇ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರಿಂದ ಆತ್ಮೀಯರಾಗಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ. ಚಂದು ಈಗ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಚಂದ್ರುಗೆ 2015ರಲ್ಲೇ ಶಿಲ್ಪಾ ಎಂಬುವವರೊಂದಿಗೆ ಮದುವೆ ಆಗಿತ್ತು. ಅವರಿಗೆ ಎರಡು ಮಕ್ಕಳಿದ್ದಾರೆ. ಇತ್ತ ನಟಿ ಪವಿತ್ರಾ ಜಯರಾಮ್ ಕೂಡ ಮದುವೆ ಆಗಿ ವಿಚ್ಛೇದನ ಪಡೆದಿದ್ದಾರೆ. ಅವರಿಗೂ ಇಬ್ಬರು ಮಕ್ಕಳಿದ್ದು, ಚಂದು ಜೊತೆ ಮದುವೆ ಆಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ. ಅಷ್ಟರೊಳಗೆ ಇಬ್ಬರೂ ಬದುಕು ದುರಂತ ಅಂತ್ಯ ಕಂಡಿದೆ.

More from Filmibeat

English summary
After Kannada actress Pavithra Jayaram died in an accident, her boyfriend Chandu committed suicide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X