ರಾಕಿ ಭಾಯ್ 'ಟಾಕ್ಸಿಕ್'ನಲ್ಲೂ ಸಪ್ತ ಸಾಗರ ದಾಟಿದ ರುಕ್ಮಿಣಿ ವಸಂತ್; ಪ್ರೊಡಕ್ಷನ್ ಹೌಸ್‌ಗಳಿಂದ ಭಾರೀ ಬೇಡಿಕೆ
'ಸಪ್ತ ಸಾಗರದಾಚೆ ಎಲ್ಲೋ' ಇದೊಂದು ಸಿನಿಮಾ ರುಕ್ಮಿಣಿ ವಸಂತ್ ವೃತ್ತಿ ಬದುಕನ್ನೇ ಬದಲಿಸಿದೆ. ರಕ್ಷಿತ್ ಶೆಟ್ಟಿ ಜೊತೆ ಪ್ರಿಯಾಳಾಗಿ ಕಾಣಿಸಿಕೊಂಡಿದ್ದಷ್ಟೇ ಕನ್ನಡ ಅಷ್ಟೇ ಅಲ್ಲ, ಪರಭಾಷೆಯಿಂದಲೂ ರಕ್ಮಿಣಿಗೆ ಆಫರ್‌ಗಳ ಸುರಿಮಳೆಯೇ ಹರಿದು ಬರುತ್ತಿದೆ. ರುಕ್ಮಿಣಿ ವಸಂತ್ ಈಗಾಗಲೇ ಇವರು ನಟಿಸಿದ ಸಿನಿಮಾಗಳು ಕೂಡ ಗೆದ್ದಿವೆ. ಹೊಂಬಾಳೆ ಫಿಲ್ಮ್ಸ್, ಕೆವಿಎನ್ ಪ್ರೊಡಕ್ಷನ್ ಅಂತಹ ಜನಪ್ರಿಯ ನಿರ್ಮಾಣ ಸಂಸ್ಥೆಗಳೊಂದಿಗೆ ರುಕ್ಮಿಣಿ ವಸಂತ್ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ ಚಾಪ್ಟರ್ 1'ಕ್ಕೆ ರುಕ್ಮಿಣಿ ವಸಂತ್ ನಾಯಕಿ ಅನ್ನೋದು ರಿವೀಲ್ ಆಗಿತ್ತು. ಅಷ್ಟಕ್ಕೆ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದರು. ರಿಷಬ್ ಹಾಗೂ ರುಕ್ಮಿಣಿ ವಸಂತ್ ಜೋಡಿಯನ್ನು ತೆರೆಮೇಲೆ ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದ್ದರು. ಈ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲೂ ರುಕ್ಮಿಣಿ ನಟಿಸುತ್ತಿದ್ದಾರೆ ಅನ್ನೋದು ಸುದ್ದಿ. ಅದುವೇ ಯಶ್ ನಟನೆಯ 'ಟಾಕ್ಸಿಕ್'.

ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. 'ಟಾಕ್ಸಿಕ್' ಟೀಮ್ ಅಧಿಕೃತವಾಗಿ ಈ ಸುದ್ದಿಯನ್ನು ಎಲ್ಲೂ ರಿವೀಲ್ ಮಾಡಿಲ್ಲ. ರುಕ್ಮಿಣಿ ವಸಂತ್ ಕೂಡ ಎಲ್ಲೂ ಹೇಳಿಕೊಂಡಿಲ್ಲ. ಆದರೂ ಈ ವಿಷಯ ಲೀಕ್ ಆಗಿದೆ. ಸಿನಿಮಾ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ರುಕ್ಮಿಣಿ ವಸಂತ್ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್'ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ದೃಶ್ಯಗಳಲ್ಲಿಯೂ ರುಕ್ಮಿಣಿ ನಟಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಏನಿದೆ ಎಂದು ನೋಡುವುದಾದರೇ.
ಎಲ್ಲೆಲ್ಲೂ ರುಕ್ಮಿಣಿ
ರುಕ್ಮಿಣಿ ವಸಂತ್ ಹೆಸರು ಹಲವು ಬಿಗ್ ಪ್ರಾಜೆಕ್ಟ್‌ಗಳಲ್ಲಿ ಕೇಳಿಬರುತ್ತಿದೆ. ಕನ್ನಡದ ಬಳಿಕ ತಮಿಳು ಹಾಗೂ ತೆಲುಗು ಪ್ರಾಜೆಕ್ಟ್‌ಗಳಲ್ಲಿಯೂ ಇವರು ನಟಿಸಿದ್ದಾರೆ. ಸದ್ಯ ರುಕ್ಮಿಣಿ ವಸಂತ್ ಕೈಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿವೆ. ಸೂಪರ್‌ಸ್ಟಾರ್‌ಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೈಯಲ್ಲಿ ಈಗಾಗಲೇ ಇರುವ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿಯಲ್ಲಿ ಮತ್ತೊಂದು ಪ್ರಾಜೆಕ್ಟ್ ಸೇರ್ಪಡೆಯಾಗಿದೆ. ಕನ್ನಡದ ನಟಿಯ ಬೇಡಿಕೆ ದಿಢೀರನೇ ಏರಿಕೆಯಾಗಿದೆ.

'ಟಾಕ್ಸಿಕ್' ಲೋಕಕ್ಕೆ ಎಂಟ್ರಿ?
ಇತ್ತೀಚೆಗಿನ ಮತ್ತೊಂದು ರೊಮಾಂಚನಕಾರಿ ಬೆಳವಣೆಗೆ ಎಂದರೆ, ರಾಕಿ ಭಾಯ್ ಸಿನಿಮಾದಲ್ಲೂ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ. ಯಶ್ ನಟಿಸುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್'ಗೆ ಆಯ್ಕೆ ಆಗಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದು, ಈಗಾಗಲೇ ಕೆಲವು ದೃಶ್ಯಗಳನ್ನು ಶೂಟ್ ಮಾಡಲಾಗಿದೆಂಬ ಮಾತು ಕೇಳಿ ಬರುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ರುಕ್ಮಿಣಿಗೆ ಪ್ರಮುಖ ಪಾತ್ರ ಎನ್ನಲಾಗಿದ್ದರೂ, ಇನ್ನೊಂದು ಮೂಲಗಳು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಮಾತು ಕೂಡ ಹರಿದಾಡುತ್ತಿದೆ.
ಮಲ್ಟಿಸ್ಟಾರರ್ ಸಿನಿಮಾದಲ್ಲಿ ರುಕ್ಮಿಣಿ
'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಯಶ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ತಾರೆಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅಂತಹ ನಟಿಯರು ಕೂಡ ನಟಿಸುತ್ತಿದ್ದಾರೆ. ಇವರ ಮಧ್ಯೆ ರುಕ್ಮಿಣಿ ವಸಂತ್ ಪಾತ್ರವೇನು? ಅನ್ನೋದೇ ಈಗ ಸಿನಿಪ್ರೇಮಿಗಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ರುಕ್ಮಿಣಿ ಕೈಯಲ್ಲಿ ಬಿಗ್ ಪ್ರಾಜೆಕ್ಟ್‌ಗಳು
ರುಕ್ಮಿಣಿ ವಸಂತ್ ಕೈಯಲ್ಲಿ ಬಿಗ್ ಪ್ರಾಜೆಕ್ಟ್‌ಗಳು ಇವೆ. ಈಗಾಗಲೇ ತಮಿಳಿನಲ್ಲಿ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು ನಟ ಶಿವಕಾರ್ತಿಕೇಯನ್‌ಗೂ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹಾಗೇ ಜೂ.ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾಗೂ ರುಕ್ಮಿಣಿ ವಸಂತ್ ಅವರೇ ನಾಯಕಿ. ಹೀಗಾಗಿ ಈ ನಟಿಯರ ಕೈಯಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಿವೆ.


Click it and Unblock the Notifications











