ಅಂಟಿಗೆ ಪಿಂಟಿಗೆ ಶೈಲಿಯಲ್ಲೇ 'ಕೆರೆಬೇಟೆ' ಟ್ರೈಲರ್ ರಿಲೀಸ್; ಮಲೆನಾಡಿಗರು ಫುಲ್ ಫಿದಾ

ಅಪ್ಪಟ ದೇಸಿ ಸಿನಿಮಾ 'ಕಾಂತಾರ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಅದೇ ರೀತಿ ಅಪ್ಪಟ ಮಲೆನಾಡಿನ ಕಥೆಯೊಂದು ಸಿನಿಮಾ ಆಗಿದೆ. ಅದುವೇ 'ಕೆರೆಬೇಟೆ'. ಇದೂವರೆಗೂ ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಟ್ರೈಲರ್ ಮೂಲಕ ಗಮನ ಸೆಳೆದಿದೆ. ಸಿನಿಮಾ ಟ್ರೈಲರ್ ನೋಡಿ ಮಲೆನಾಡಿಗರು ಫುಲ್ ಫಿದಾ ಆಗಿದ್ದಾರೆ.

'ಕೆರೆಬೇಟೆ' ಸಿನಿಮಾ ಮಲೆನಾಡು ಭಾಗದ ಕೆರೆಯಲ್ಲಿ ಮೀನು ಬೇಟೆಯಾಗುವ ಒಂದು ಪದ್ಧತಿ. ಅಲ್ಲಿನ ಭಾಗದ ಜನರ ವಿಭಿನ್ನ ಸಂಸ್ಕೃತಿ. ಇದನ್ನು ಮೊದಲ ಬಾರಿಗೆ ತೆರೆಮೇಲೆ ತರಲಾಗುತ್ತಿದೆ. ಗೌರಿಶಂಕರ್ ಎಸ್‌ಆರ್‌ಜಿ ಮತ್ತೆ ನಾಯಕನಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ವಿಭಿನ್ನವಾದ ಹಳ್ಳಿ ಸೊಗಡಿನ ಸಿನಿಮಾ ಮೂಲಕ ರಂಜಿಸಲು ಸಜ್ಜಾಗಿದೆ.

After Kantara Soraba traditional regional content movie Kerebete trailer out

ನಿರ್ದೇಶಕ ರಾಜ್‌ಗುರು 'ಕೆರೆಬೇಟೆ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಸಿನಿ ಪ್ರಿಯರನ್ನು ಸೆಳೆದಿದೆ. ಅದರಲ್ಲೂ ಮಲೆನಾಡಿನ ಭಾಗದ ಜನರನ್ನು ಸಿಕ್ಕಾಪಟ್ಟೆ ಸೆಳೆದಿದೆ. ಸಿನಿಮಾ ತಂಡ ಟ್ರೈಲರ್ ರಿಲೀಸ್ ಅನ್ನು ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದೆ. ಅಂಟಿಗೆ ಪಿಂಟಿಗೆ ಶೈಲಿಯಲ್ಲಿ ದೀಪ ಹಿಡಿದು ಬೆಂಗಳೂರಿನ ಮನೆ ಮನೆಗೆ ಹೋಗಿ ತಮ್ಮ ಸಿನಿಮಾಗೆ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ನಾಯಕ ಗೌರಿ ಶಂಕರ್ ಪುತ್ರಿ ಈಶ್ವರಿ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

'ಕೆರೆಬೇಟೆ' ಟ್ರೈಲರ್‌ ಜೊತೆಗೆ 'ಅಂಟಿಕೆ ಪೆಂಟಿಗೆ' ಸಂಸ್ಕೃತಿ ಕೂಡ ಹೈಲೆಟ್ ಆಗಿದ್ದು ವಿಶೇಷ. 'ಕೆರೆಬೇಟೆ'ಯಲ್ಲಿ ಕೇವಲ ಮೀನುಗಾರ ಬೇಟೆಯಷ್ಟೇ ಅಲ್ಲ. ಇದರೊಂದಿಡಗೆ ಹಳ್ಳಿ ಜನರ ಕಿತ್ತಾಟ, ಹೊಡೆದಾಟ, ಭಾವನಾತ್ಮಕ ಸಂಬಂಧಗಳು, ಪ್ರೀತಿ ಎಲ್ಲವನ್ನೂ ನೋಡಬಹುದು. ನಾಯಕ ಗೌರಿ ಶಂಕರ್ ಜೊತೆ ಬಿಂಧು ಶಿವರಾಮ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದಾರೆ.

After Kantara Soraba traditional regional content movie Kerebete trailer out

ಪವನ್ ಒಡೆಯರ್ ಅವರೊಂದಿಗೆ ಸಹಾಯಕರಾಗಿ ನಿರ್ದೇಶಕ ರಾಜಗುರು ಕೆಲಸ ಮಾಡಿದ್ದರು. ಪವನ್ ಒಡೆಯರ್ ಜೊತೆ 'ಗೂಗ್ಲಿ', 'ರಣವಿಕ್ರಮ', 'ನಟಸಾರ್ವಭೌಮ', 'ಜೆಸ್ಸಿ', 'ರೆಮೋ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ 'ಕೆರೆಬೇಟೆ' ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಮಲೆನಾಡಿನವರೇ ಆಗಿರುವುದರಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಹಾಗಾಗಿ ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಿದ್ದಾರೆ.

ಗೌರಿ ಶಂಕರ್, ಬಿಂದು ಶಿವರಾಮ್ ಜೊತೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಗಗನ್ ಬದೇರಿಯಾ ಸಂಗೀತ ನೀಡಿದ್ದು, ಸದ್ಯ 'ಕೆರೆಬೇಟೆ' ಟ್ರೈಲರ್ ಸದ್ದು ಮಾಡಿದ್ದು, ಮಾರ್ಚ್ 15ಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
Kannada Movie Kerebete trailer out:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X