ಬಿಳಿ ಪಂಚೆಯಲ್ಲಿ ಅಡ್ಡಾಡುತ್ತಿದ್ದ ರಿಷಬ್ ಶೆಟ್ಟಿ ಸೂಟು ಧರಿಸಿ ಪ್ರತ್ಯಕ್ಷ: ಡಿವೈನ್ ಸ್ಟಾರ್‌ಗೆ ಡಿಮ್ಯಾಂಡ್!

'ಕಾಂತಾರ' ರಿಲೀಸ್ ಆಗಿದ್ದು ಆಯ್ತು. ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದೂ ಆಯ್ತು. ಎಲ್ಲಕ್ಕಿಂತ ಹೆಚ್ಚಾಗಿ ಓಟಿಟಿಗೂ ಲಗ್ಗೆ ಇಟ್ಟಿದ್ದೂ ಆಗಿದೆ. ಆದರೂ, 'ಕಾಂತಾರ' ಹವಾ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ರಿಷಬ್ ಶೆಟ್ಟಿ ಇನ್ನೂ ಸಿನಿಮಾಗೆ ಸಂಬಂಧಿಸಿದ ಪ್ರಚಾರದಲ್ಲಿ ಬ್ಯುಸಿಯಾಗೇ ಇದ್ದಾರೆ.

'ಕಾಂತಾರ' ಸಿನಿಮಾ ಕರ್ನಾಟಕದ ಮಣ್ಣಿನ ಕಥೆ. ಹಾಗಂತ ಕೇವಲ ಸ್ಯಾಂಡಲ್‌ವುಡ್‌ಗಷ್ಟೇ ಸೀಮಿತವಾಗಿಲ್ಲ. ದಕ್ಷಿಣ ಭಾರತದಿಂದ ಹಿಡಿದು ಉತ್ತರ ಭಾರತದವರೆಗೂ ಈ ಸಿನಿಮಾ ನೋಡಿ ಮೆಚ್ಚಿಕೊಂಡವರೇ ಹೆಚ್ಚು. ಇನ್ನು ಗಳಿಕೆಯಲ್ಲೂ ಹೊಸ ಹೊಸ ದಾಖಲೆಯನ್ನು ಬರೆದು ಮುನ್ನುಗ್ಗಿತ್ತು.

'ಕಾಂತಾರ' ಯಶಸ್ಸಿನ ಹಾದಿಯುದ್ದಕ್ಕೂ ರಿಷಬ್ ಶೆಟ್ಟಿ ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೂ ಐದು ಭಾಷೆಗಳಿಗೂ ಸಂದರ್ಶನ ನೀಡಿದ್ದರು. ಈ ವೇಳೆ ರಿಷಬ್ ಶೆಟ್ಟಿ ಬಿಳಿ ಪಂಚೆಯುಟ್ಟು ಸಂದರ್ಶನವನ್ನು ನೀಡಿದ್ದರು. ಈಗ ಬಹಳ ದಿನ ಬಳಿಕ ಸೂಟು ತೊಟ್ಟು ಕ್ಯಾಮರಾ ಮುಂದೆ ಬಂದಿದ್ದಾರೆ. ಅಷ್ಟಕ್ಕೂ ಸೂಟ್ ತೊಟ್ಟು ಫೋಟೊಶೂಟ್‌ ಮಾಡಿಸಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸೂಟ್‌ನಲ್ಲಿ ರಿಷಬ್ ಶೆಟ್ಟಿ ಮಿಂಚಿಂಗ್

ಸೂಟ್‌ನಲ್ಲಿ ರಿಷಬ್ ಶೆಟ್ಟಿ ಮಿಂಚಿಂಗ್

ರಿಷಬ್ ಶೆಟ್ಟಿ 'ಕಾಂತಾರ' ಪ್ರಮೋಷನ್‌ಗೆ ಹೋದಲ್ಲೆಲ್ಲಾ ಬಿಳಿ ಪಂಚೆ ಉಟ್ಟುಕೊಂಡು ಹೋಗಿದ್ದರು. ಸ್ಯಾಂಡಲ್‌ವುಡ್‌, ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಕಡೆಯಲ್ಲೂ ರಿಷಬ್ ಶೆಟ್ಟಿ ಪಂಚೆಯಲ್ಲಿಯೇ ಕಾಣಿಸಿಕೊಂಡಿದ್ದರು. ಆದ್ರೀಗ ಬಹಳ ದಿನಗಳ ಬಳಿಕ ಸೂಟು ತೊಟ್ಟು ಸ್ಟೈಲಿಷ್ ಕೊಟ್ಟಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಿಷಬ್ ಶೆಟ್ಟಿ ಹೊಸ ಲುಕ್‌ಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಮ್ಯಾಗಜೀನ್‌ಗಾಗಿ ಸೂಟ್ ಧರಿಸಿದ ರಿಷಬ್ ಶೆಟ್ಟಿ

ಮ್ಯಾಗಜೀನ್‌ಗಾಗಿ ಸೂಟ್ ಧರಿಸಿದ ರಿಷಬ್ ಶೆಟ್ಟಿ

'ಕಾಂತಾರ' ಸಿನಿಮಾದಿಂದ ರಿಷಬ್ ಶೆಟ್ಟಿ ಎಷ್ಟು ಜನಪ್ರಿಯರಾಗಿದ್ದಾರೆ ಅನ್ನೋದಕ್ಕೆ ಈ ಫೋಟೊಶೂಟ್ ಸಾಕ್ಷಿ. ಹ್ಯಾಶ್‌ಟ್ಯಾಗ್ ಅನ್ನೋ ಮ್ಯಾಗಜೀನ್ ರಿಷಬ್ ಶೆಟ್ಟಿಯನ್ನು ಹುಡುಕಿಕೊಂಡು ಬಂದಿದೆ. ರಿಷಬ್ ಶೆಟ್ಟಿ ಜರ್ನಿ, 'ಕಾಂತಾರ' ಸಿನಿಮಾದ ಗೆಲುವು, ಬಾಕ್ಸಾಫೀಸ್‌ ಕಲೆಕ್ಷನ್ ಎಲ್ಲವನ್ನೂ ಗಮನಿಸುತ್ತಿದ್ದ ಹ್ಯಾಶ್‌ಟ್ಯಾಗ್ ಮ್ಯಾಗಜೀನ್ ರಿಷಬ್‌ ಶೆಟ್ಟಿಯನ್ನು ಮುಖಪುಟದಲ್ಲಿ ಬಿಂಬಿಸಲಿದೆ. ಈ ಕಾರಣಕ್ಕಾಗಿಯೇ ಫೋಟೊಶೂಟ್‌ ಮಾಡಿದ್ದು, ಅದರ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ.

'ಕಾಂತಾರ 2'ನಲ್ಲಿ ರಿಷಬ್ ಶೆಟ್ಟಿ ಬ್ಯುಸಿ

'ಕಾಂತಾರ 2'ನಲ್ಲಿ ರಿಷಬ್ ಶೆಟ್ಟಿ ಬ್ಯುಸಿ

'ಕಾಂತಾರ' ಸಕ್ಸಸ್ ಆಗುತ್ತಿದ್ದಂತೆ ರಿಷಬ್ ಶೆಟ್ಟಿ ಸಿನಿಮಾಗಳ ಆಯ್ಕೆ ಬದಲಾಗಿದೆ. ಇದೂವರೆಗೂ ಮುಂದಿನ ಸಿನಿಮಾ ಬಗ್ಗೆ ರಿಷಬ್ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಕೆಲವು ದಿನಗಳ ಹಿಂದಷ್ಟೇ ನಟ ದಿಗಂತ್ ' ಕಾಂತಾರ 2' ಬಗ್ಗೆ ರಿವೀಲ್ ಮಾಡಿದ್ದರು. ಈ ಹಿಂದೆನೇ ರಿಷಬ್ ಶೆಟ್ಟಿ 'ಕಾಂತಾರ' ಪಾರ್ಟ್ 2 ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ? ಅನ್ನೋ ಕುತೂಹಲದಲ್ಲಿಯೇ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ದಾಖಲೆ

ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ದಾಖಲೆ

'ಕಾಂತಾರ' ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ರಿಲೀಸ್ ಆಗಿತ್ತು. 50 ದಿನಗಳಲ್ಲಿ ದೇಶಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಸುಮಾರು 85 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದರಂತೆ 'ಕಾಂತಾರ' ಸಿನಿಮಾ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಅದ್ಭುತ ಕಲೆಕ್ಷನ್ ಮಾಡಿದೆ. ಹೀಗಾಗಿ 'ಕಾಂತಾರ 2' ಯಾವಾಗ ಸೆಟ್ಟೇರುತ್ತೆ ಅಂತ ಎದುರು ನೋಡುತ್ತಿದ್ದಾರೆ.

More from Filmibeat

English summary
After Kantara Success Rishab Shetty Will Be Seen In Hashtag Magazine Cover Page, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X