'ಕೆಡಿ' ವಿವಾದದ ಕಿಡಿ; 'ಪುಷ್ಪ 2' "ಫೀಲಿಂಗ್ಸು".. 'ಕಲ್‌ನಾಯಕ್' "ಚೋಲಿ ಕೆ ಪೀಛೇ ಕ್ಯಾ ಹೈ" ಕೊಟ್ಟು ಟಕ್ಕರ್

ಕಳೆದೆರಡು ದಿನಗಳಿಂದ 'ಕೆಡಿ' ಸಿನಿಮಾದ ವಿವಾದ ಭುಗಿಲೆದ್ದಿದೆ. "ಸರ್ಸೆ ಸರ್ಸೆ ಸೆರಗು..ಸರ್ಸೆ" ಹಾಡು ರಿಲೀಸ್ ಆಗುತ್ತಿದ್ದಂತೆ ಜನರು ತಿರುಗಿಬಿದ್ದಿದ್ದರು. ಅದರಲ್ಲೂ ಹಿಂದಿ ವರ್ಷನ್‌ಗೆ ಸಾಂಗ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇಡೀ ದೇಶದಲ್ಲಿ ಸಿನಿಪ್ರಿಯರು ವಿಶೇಷವಾಗಿ ಬಾಲಿವುಡ್ ಅಂಗಳದಲ್ಲಿ ವಿಪರೀತಿ ಟೀಕೆಗಳು ವ್ಯಕ್ತವಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಹಿತ್ಯದ ಬಗ್ಗೆ ಕಟುವಾಗಿ ಟೀಕೆ ಮಾಡುತ್ತಿದ್ದಾರೆ.

'ಕೆಡಿ' ಸಾಂಗ್‌ಗೆ ಹಿಂದಿ ಮಾರ್ಕೆಟ್‌ನಲ್ಲಿ ಕೀಳು ಮಟ್ಟದ ಸಾಹಿತ್ಯ ಎಂದು ಬೈಯ್ಯುತ್ತಿದ್ದಾರೆ. ಅದೇ ಇನ್ನೊಂದು ಕಡೆ ಹಿಂದಿ ಮಂದಿ ಹಾಗೇ ಬೈದುಕೊಳ್ಳುತ್ತಲೇ ಪದೇ ಪದೇ ಅದೇ ಹಾಡನ್ನು ಕೇಳ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ. ಹಾಗಂತ ಹಿಂದಿ, ಕನ್ನಡದಲ್ಲಷ್ಟೇ ಅಲ್ಲ. ತೆಲುಗು, ತಮಿಳು, ಮಲಯಾಳಂನಲ್ಲೂ ಹೀಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಜೋಗಿ ಪ್ರೇಮ್ ವಿರುದ್ಧ ದೂರುಗಳು ಕೂಡ ದಾಖಲಾಗಿವೆ.

After KD Song controversy many people commenting pushpa 2 peelings and choli ke peeche kya hai

ಇಷ್ಟೆ ವಿವಾದದ ಕಿಡಿ ಹೊತ್ತಿಕೊಂಡಿರುವಾಗಲೇ ಕೆಲವರು ಜೋಗಿ ಪ್ರೇಮ್ ಬೆಂಬಲಕ್ಕೆ ನಿಂತಿದ್ದಾರೆ. ಕನ್ನಡ ಸಿನಿಮಾವನ್ನು ಟೀಕೆ ಮಾಡುವ ವರ್ಗದ ಕೈವಾಡ ಎದ್ದು ಕಾಣುತ್ತಿದೆ ಎಂದೂ ಆರೋಪಿಸುತ್ತಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾ "ಫೀಲಿಂಗ್ಸು.." ಹಾಗೂ ಸಂಜಯ್ ದತ್ ನಟನೆಯ ಕಲ್‌ನಾಯಕ್ ಸಿನಿಮಾ "ಚೋಲಿಗೆ ಪೀಚೆ ಕ್ಯಾ ಹೇ.." ಹಾಡನ್ನು ಉದಾಹರಣೆಯಾಗಿ ಕೊಟ್ಟು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಜೋಗಿ ಪ್ರೇಮ್ "ಬೇಡವೆನು ವರವನನ್ನೂ.." ಅಂತಹ ಅದ್ಭುತ ಸಾಹಿತ್ಯವನ್ನೂ ಬರೆದಿದ್ದಾರೆ. ಇಂತಹ ಕೈಗಳಲ್ಲಿ ಪೋಲಿ ಪದಗಳು ಬೇಕಾ? ಎಂದು ದೂಷಿಸುತ್ತಿದ್ದಾರೆ. ನೇರವಾಗಿ ಪ್ರೇಮ್ ಮೇಲೆ ಕಿಡಿ ಕಾರುತ್ತಿದ್ದಾರೆ. ಕೆಲವರು "ಬೇಡುವನು ವರವನ್ನು" ಹಾಡು ನೀಡಿದ್ದಕ್ಕಾಗಿ ಕ್ಷಮಿಸುವ ಮಾತನ್ನೂ ಆಡುತ್ತಿದ್ದಾರೆ. "ಸರ್ಸೆ ಸರ್ಸೆ ಸೆರಗು.." ವ್ಯಾಪಕವಾಗಿ ಟೀಕೆಗೆ ಗುರಿಯಾಗುತ್ತಿದ್ದಂತೆ, ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಬೇರೆ ಸಿನಿಮಾದ ಹಾಡುಗಳಿಗೆ ಇಲ್ಲ ಟೀಕೆ, 'ಕೆಡಿ' ಸಿನಿಮಾದ ಹಾಡುಗಳಿಗೆ ಯಾಕೆ? ಅಂತ ಪ್ರಶ್ನೆ ಮಾಡಿತ್ತಿದ್ದಾರೆ.

Also Read
'ಸರ್ಸೆ ನಿನ್ನ ಸೆರಗ' ಎಂದ 'ಕೆಡಿ' ವಿರುದ್ಧ ಕೆರಳಿ ಕೆಂಡವಾದ ಕೇಂದ್ರ ಸರ್ಕಾರ ; ಕೂಡಲೇ ಹಾಡು ತೆಗೆಯುವಂತೆ ಖಡಕ್ ಎಚ್ಚರಿಕೆ
'ಸರ್ಸೆ ನಿನ್ನ ಸೆರಗ' ಎಂದ 'ಕೆಡಿ' ವಿರುದ್ಧ ಕೆರಳಿ ಕೆಂಡವಾದ ಕೇಂದ್ರ ಸರ್ಕಾರ ; ಕೂಡಲೇ ಹಾಡು ತೆಗೆಯುವಂತೆ ಖಡಕ್ ಎಚ್ಚರಿಕೆ

ಕಳೆದೆರಡು ದಿನಗಳಿಂದ ಬರೀ ವಿರೋಧವೇ ವ್ಯಕ್ತವಾಗುತ್ತಿದ್ದ ಪ್ರೇಮ್‌ಗೆ ಕೆಲವರು ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದು ಕನ್ನಡ ಸಿನಿಮಾವನ್ನು ತುಳಿಯುವ ಹುನ್ನಾರವಿರಬಹುದು. 'ಪುಷ್ಪ 2' ಸೇರಿದಂತೆ ಹಲವು ಸಿನಿಮಾದ ಹಾಡುಗಳುಗೆ ತಗಾದೆ ತೆಗೆಯದವರು 'ಕೆಡಿ' ಹಾಡನ್ನು ಖಂಡಿಸುತ್ತಿರುವುದು ಯಾಕೆ? ಅನ್ನೋದು ಈ ವರ್ಗದ ವಾದ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತುಳಿಯುವ ಪ್ರಯತ್ನ ಅನ್ನೋದು ಇವರ ವಾದ.

After KD Song controversy many people commenting pushpa 2 peelings and choli ke peeche kya hai

"ಸರ್ಸೆ ಸರ್ಸೆ ನಿನ್ನ ಸೆರಗಾ" ಹಾಡನ್ನ ಕೇಳೋದಕ್ಕೆ ಮೊದಲು ಅಲ್ಲು ಅರ್ಜುನ್ 'ಪುಷ್ಟ 2' ಸಿನಿಮಾದ "ಫೀಲಿಂಗ್ಸೂ.." ಹಾಡಿನ ಸಾಲನ್ನು ಕೇಳಿ ಅನ್ನೋದು ಕೆಲವರ ಕೋರಿಕೆ. ಅದರಲ್ಲಿ "6ಕ್ಕೆ ಒಂದ್ಸಾರಿ.. 7ಕ್ಕೆ ಒಂದ್ಸಾರಿ.. ಎದ್ದಾಗ ಒಂದ್ಸಾರಿ.. ಮಲಗ್ದಾಗ ಒಂದ್ಸಾರಿ.." ಅನ್ನುವಂತಹ ಸಾಲುಗಳಿವೆ. ಆಗ ಯಾಕೆ ಸುಮ್ಮನಿದ್ರಿ. ಅದು ನಿಮಗೆ ಕ್ರಿಯೇಟಿವಿ ಅಂತ ಅನಿಸಿತೇ ಅನ್ನೋದು ಮತ್ತೆ ಕೆಲವರ ವಾದ. ಹಾಗೇ ಈಗಾಗಲೇ ಕನ್ನಡದಲ್ಲಿಯೂ ದ್ವಂದ್ವಾರ್ಥಗಳನ್ನು ನೀಡುವ ಸಾಕಷ್ಟು ಹಾಡುಗಳು ಬಂದು ಹೋಗಿವೆ. ಆಗಲೂ ತಗಾದೆ ತೆಗೆಯದವರು ಈಗ್ಯಾಕೆ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನೊಂದು ಕಡೆ ಹಿಂದಿ ಮಂದಿ ಈ ಹಾಡು ಕೇಳಿ ಮೈಪರಚಿಕೊಳ್ಳುತ್ತಿದ್ದಾರೆ. ಆದರೆ, ದಶಕಗಳ ಹಿಂದೆ ಬಂದ 'ಕಲ್‌ನಾಯಕ್' ಸಿನಿಮಾದ "ಚೋಲಿ ಕೆ ಪೀಚೆ ಕ್ಯಾ ಹೇ.. ಚುನಿರೀ ಕಿ ನೀಚೆ ಕ್ಯಾ ಹೈ.." ಹಾಡಿಗಿಂತಲೂ ಖರಾಬ್ ಆಗಿ ಇದೆಯಾ? ಅಂತ ಪ್ರಶ್ನೆ ಮಾಡುತ್ತಿದ್ದಾರೆ. "ಕೆಡಿ ಹಾಡಿನ ಎಲ್ಲಾ ಸಾಲುಗಳನ್ನು ಮೆಟಾಫರಿಕ್ ಆಗಿಯೇ ಬರೆಯಲಾಗಿದೆ. ಅದು ಕೇಳುಗನ ಅರ್ಥಕ್ಕೆ ಬಿಟ್ಟದ್ದು.. ಎರಡೂ ರೀತಿಯಲ್ಲೂ ಅರ್ಥ ಬರುತ್ತೆ. ಒಂದು ಊಹೆ ಮತ್ತೊಂದು ಸತ್ಯ. ಎರಡೂ ಅರ್ಥ ಕೊಡುತ್ತವೆ." ಎಂದೂ ವಾದ ಮಂಟಿಸುತ್ತಿದ್ದಾರೆ.

"ಸರ್ಸೆ ಸೆರಗ.. ಹಾಡನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಒಂದು ವೇಳೆ ನೀವು ಇದನ್ನು ತಪ್ಪಾದ ದೃಷ್ಟಿಕೋನದಿಂದ ನೋಡಲು ನಿರ್ಧರಿಸಿದರೆ, ಇದರಲ್ಲಿರುವ ಎಲ್ಲವೂ ತಪ್ಪಾಗಿಯೇ ಕಾಣಿಸುತ್ತದೆ. ಆದರೆ ನೀವು ಓಪನ್ ಮೈಂಡ್‌ನಿಂದ ಕೇಳಿದರೆ... ಇದು ನಿಜಕ್ಕೂ ಅದ್ಭುತವಾದ ಹಾಡು." ಅನ್ನೋದು ಮತ್ತೆ ಕೆಲವರ ವಾದ. ಅದೇನೇ ಇದ್ದರೂ ಸಾಹಿತ್ಯ ಅಂತೂ ದ್ವಂದ್ವಾರ್ಥವನ್ನು ನೀಡುತ್ತೆ ಅನ್ನೋದರಲ್ಲಿ ಎರಡು ಮಾತು ಇಲ್ಲ. ಈಗ ಈ ಹಾಡನ್ನು ವಿರೋಧಿಸಬೇಕಾ? ಇಲ್ಲ ಬಿಟ್ಟು ಬಿಡಬೇಕಾ? ನಿಮಗೆ ಬಿಟ್ಟಿದ್ದು.

More from Filmibeat

English summary
After KD Song controversy many people commenting pushpa 2 peelings and choli ke peeche kya hai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X