'ಕೆಜಿಎಫ್ 2' ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಏನು ನಡೀತಿದೆ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಬೇಜಾನ್ ಸದ್ದು ಮಾಡಿದ್ದು ಗೊತ್ತೇ ಇದೆ. ಕನ್ನಡ ಸಿನಿಮಾವೊಂದು ವಿಶ್ವದ ಮೂಲೆ ಮೂಲೆಯಲ್ಲೂ ಹೆಸರು ಮಾಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹಿರಿಮೆಯೇ. ಪ್ರಾದೇಶಿಕ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡುವುದು ಸಾಮಾನ್ಯದ ಸಂಗತಿ ಅಲ್ಲವೇ ಅಲ್ಲ.

'ಕೆಜಿಎಫ್ 2' ಅಂದುಕೊಂಡಿದ್ದನ್ನು ಸಾಧಿಸಿದೆ. ಬಾಕ್ಸಾಫೀಸ್‌ನಲ್ಲಿ ಇನ್ನೂ ಅಬ್ಬರಿಸುವುದನ್ನು ಕಡಿಮೆ ಮಾಡಿದೆಯೇ ಹೊರತು ನಿಲ್ಲಿಸಿಲ್ಲ. ಈಗ ಎಲ್ಲಿ ನೋಡಿದರೂ 'ಕೆಜಿಎಫ್ 2' ಬಗ್ಗೆನೇ ಮಾತಾಡುತ್ತಿದ್ದಾರೆ. ಆದರೆ, ಸ್ಯಾಂಡಲ್‌ವುಡ್‌ನ ಮುಂದಿನ ಹಾದಿ ಏನು? ಸ್ಯಾಂಡಲ್‌ವುಡ್‌ನಲ್ಲೀಗ ಏನಾಗುತ್ತಿದೆ? ಕನ್ನಡದ ಉಳಿಸಿದ ಸಿನಿಮಾಗಳು ಏನು ಮಾಡುತ್ತಿವೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅದಿತಿಯ ಅಲೆಕ್ಸಾ

ಅದಿತಿಯ ಅಲೆಕ್ಸಾ

ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ನಟಿ ಅದಿತಿ ಪ್ರಭುದೇವ. ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ, ಸದ್ಯ 'ಅಲೆಕ್ಸಾ' ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಒಂದು ಹಾಡು ಸೇರಿದಂತೆ ಕೆಲವು ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ‌. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. 'ಅಲೆಕ್ಸಾ' ಮೂಲಕ ಆಕ್ಷನ್ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.

ಪೃಥ್ವಿ- ಮಿಲನಾ ಸಿನಿಮಾ 'F0R REGN'

ಪೃಥ್ವಿ- ಮಿಲನಾ ಸಿನಿಮಾ 'F0R REGN'

'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹಾಗೂ 'ಲವ್ ಮಾಕ್ಟೇಲ್' ಖ್ಯಾತಿಯ ಮಿಲನಾ ನಾಗರಾಜ್ ಕಾಂಬಿನೇಷನ್‌ ಸಿನಿಮಾ 'F0R REGN'. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಅಣ್ಣ ಪುಟ್ಟ ದೃಶ್ಯಗಳು ಬಾಕಿ ಉಳಿದಿವೆ. ಮಿಲನಾ ನಾಗರಾಜ್ ವಿವಾಹದ ಬಳಿಕ ನಟಿಸಿರುವ ಸಿನಿಮಾ ಇದು. ಪೋಸ್ಟರ್‌ನಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದೆ. ರವಿಶಂಕರ್ ಈ ಸಿನಿಮಾದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕಿರಿಕ್ ಶಂಕರ್' ಮೇ 27ಕ್ಕೆ ರಿಲೀಸ್

'ಕಿರಿಕ್ ಶಂಕರ್' ಮೇ 27ಕ್ಕೆ ರಿಲೀಸ್

ಲೂಸ್ ಮಾದ ಯೋಗಿ ನಟಿಸಿರುವ 'ಕಿರಿಕ್ ಶಂಕರ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಎಂ ಎನ್ ಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದು, ಆನಂತ್ ರಾಜು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಏಪ್ರಿಲ್‌ನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ, 'ಕೆಜಿಎಫ್ 2' ಸೇರಿದಂತೆ ಹಲವು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದರಿಂದ, ಬಿಡುಗಡೆಯನ್ನು ಮುಂದೂಡಲಾಗಿತ್ತು. ಈಗ ಇದೇ ತಿಂಗಳು 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

'ವಾಸಂತಿ ನಲಿದಾಗ' ಕತೆಯೇನು?

'ವಾಸಂತಿ ನಲಿದಾಗ' ಕತೆಯೇನು?

ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ 'ವಾಸಂತಿ ನಲಿದಾಗ'. ಈ ಸಿನಿಮಾ ಕೂಡ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ಹೊಸಬರ ಸಿನಿಮಾಗಿದ್ದರೂ, ಸಾಯಿಕುಮಾರ್ ಹಾಗೂ ಸುಧಾರಾಣಿ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಧು ಕೋಕಿಲಾ, ಮಂಜು ಪಾವಗಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
After KGF 2 Whats Happening In Sandalwood: Quick Roundup, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X