'ಕೆಜಿಎಫ್ 2' ಟ್ರೈಲರ್ ಲೀಕ್ ಆಯ್ತು.. ದಾಖಲೆ ಬರೀತು; ಈಗ 'ಟಾಕ್ಸಿಕ್' ಸೀನ್ ಲೀಕ್.. ಮುಂದೇನು?

ರಾಕಿಂಗ್ ಸ್ಟಾರ್ ಯಶ್ ನಟಿಸಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್'. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ಮೇಕಿಂಗ್ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದಿತ್ತು. ಆದ್ರೀಗ ಯಾರೋ ಕಿಡಿಗೇಡಿಗಳು 'ಟಾಕ್ಸಿಕ್' ಸಿನಿಮಾದ ಮೇಕಿಂಗ್ ಸೀನ್ ಅನ್ನು ಲೀಕ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.

'ಕೆಜಿಎಫ್ 2' ಬಳಿಕ ಯಶ್ ಲಾಂಗ್ ಗ್ಯಾಪ್ ಕೊಟ್ಟು 'ಟಾಕ್ಸಿಕ್' ಶುರು ಮಾಡಿದ್ದರು. ಮಲಯಾಳಂ ನಿರ್ದೇಶಕ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಾಲಿವುಡ್ ದಿಗ್ಗಜರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಬಹುತಾರಾಗಣದ ಈ ಸಿನಿಮಾ ಮೇಕಿಂಗ್ ಕೂಡ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ ಚಿತ್ರತಂಡ ಒಂದೇ ಒಂದು ಫ್ರೇಮ್ ಅನ್ನೂ ಲೀಕ್ ಆಗುವುದಕ್ಕೆ ಬಿಟ್ಟಿರಲಿಲ್ಲ. ಆದ್ರೂ, ಟೀಮ್ ಕಣ್ತಪ್ಪಿಸಿ ಮೇಕಿಂಗ್ ದೃಶ್ಯವೊಂದು ಸೋರಿಕೆಯಾಗಿದೆ.

After KGF Chapter 2 traiter Yash Toxic film making scene leaked on social media

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸೆಟ್‌ ಹಾಕಿ 'ಟಾಕ್ಸಿಕ್' ಶೂಟಿಂಗ್ ಮಾಡಿದ್ದರು. ಬಳಿಕ ಈ ತಂಡ ಮುಂಬೈಗೆ ಶಿಫ್ಟ್ ಆಗಿತ್ತು. ಅಲ್ಲೂ ಕೆಲವು ದಿನಗಳ ಕಾಲ ಶೂಟಿಂಗ್ ಬಳಿಕ ಬ್ರೇಕ್ ನೀಡಲಾಗಿದೆ. ಇದೇ ಗ್ಯಾಪ್‌ನಲ್ಲಿ ಮೇಕಿಂಗ್ ದೃಶ್ಯ ಲೀಕ್ ಆಗಿದ್ದು ಚಿತ್ರತಂಡದ ನಿದ್ದೆ ಕೆಡಿಸಿದೆ. ಆದರೆ, ಫ್ಯಾನ್ಸ್ ಮಾತ್ರ ಖುಷಿಯಾಗಿದ್ದಾರೆ. ಅದಕ್ಕೆ ಬಲವಾದ ಕಾರಣವಿದೆ. 'ಕೆಜಿಎಫ್ 2' ಟ್ರೈಲರ್ ಲೀಕ್ ಆಗಿತ್ತು. ಸಿನಿಮಾ ದಾಖಲೆ ಬರೀತು. ಈಗ 'ಟಾಕ್ಸಿಕ್' ಕೂಡ ಲೀಕ್ ಆಗಿದ್ದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ ಅಂತಿದ್ದಾರೆ.

'ಕೆಜಿಎಫ್ 2' ಟ್ರೈಲರ್ ಮೇಲೆ ಸಿನಿಪ್ರಿಯರು, ಯಶ್ ಅಭಿಮಾನಿಗಳು ಕಣ್ಣಿಟ್ಟಿದ್ದರು. ಯಶ್ ಹುಟ್ಟುಹಬ್ಬಕ್ಕೆ ಟ್ರೈಲರ್ ರಿಲೀಸ್ ಮಾಡುವುದಾಗಿ ಅನೌನ್ಸ್ ಕೂಡ ಮಾಡಿದ್ದರು. ಆದರೆ, ಒಂದು ದಿನ ಮುನ್ನವೇ 'ಕೆಜಿಎಫ್ 2' ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಇದು ಚಿತ್ರತಂಡದ ಅರಿವಿಗೆ ಬರುತ್ತಿದ್ದಂತೆ ಘೋಷಣೆ ಮಾಡಿದ ಸಮಯಕ್ಕಿಂತ ಮುನ್ನವೇ ಹೊಂಬಾಳೆ ಫಿಲ್ಮ್ಸ್ ಟ್ರೈಲರ್ ರಿಲೀಸ್ ಮಾಡಿದ್ದರು. 'ಕೆಜಿಎಫ್ 2' ಟ್ರೈಲರ್ ಕೂಡ ದಾಖಲೆ ಬರೀತು. ಸಿನಿಮಾನೂ ಬಾಕ್ಸಾಫೀಸ್‌ನಲ್ಲಿ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ಮುಗಿಸುವ ಮುನ್ನವೇ ಮೇಕಿಂಗ್ ಸೀನ್ ಲೀಕ್ ಆಗಿದೆ. ವೈಟ್ ಅಂಡ್ ವೈಟ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ನೋಡುವುದಕ್ಕೆ ಕ್ಯಾಸಿನೋ ಫೀಲ್ ಬರುತ್ತಿದ್ದು, ಫಾರಿನ್ ಪ್ರಜೆಗಳನ್ನು ನೋಡಬಹುದು. ಹೀಗಾಗಿ ಇದೊಂದು ಪ್ರಮುಖ ದೃಶ್ಯವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ಲೀಕ್ ಆಗಿರುವ ದೃಶ್ಯದ ಬಗ್ಗೆ ಇನ್ನೂ ಚಿತ್ರತಂಡ ಮಾಹಿತಿ ನೀಡಬೇಕಿದೆ.

'ಕೆಜಿಎಫ್ 2' ಕೆಲವು ಫೋಟೊಗಳು ಕೂಡ ಲೀಕ್ ಆಗಿದ್ದವು. ಅಲ್ಲಿಂದ ಯಶ್ ತಮ್ಮ ತಂಡಕ್ಕೆ ಸೂಚನೆಯನ್ನೂ ನೀಡಿದ್ದರು. ಬೆಂಗಳೂರಿನಲ್ಲಿ ನಡೆದ 'ಟಾಕ್ಸಿಕ್' ಶೂಟಿಂಗ್ ವೇಳೆ ಸೆಟ್ಟಿಗೆ ಮೊಬೈಲ್ ತರುವುದನ್ನು ನಿಷೇಧ ಮಾಡಲಾಗಿತ್ತು. ಹೀಗಾಗಿ ಒಂದೇ ಒಂದು ದೃಶ್ಯ ಕೂಡ ಲೀಕ್ ಆಗಿರಲಿಲ್ಲ. ಆದ್ರೀಗ ಹುಟ್ಟುಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಲೀಕ್ ಆಗಿರುವ ದೃಶ್ಯಗಳು ಎಲ್ಲಿಯದ್ದು? ಯಾವ ದೃಶ್ಯ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ.

ಇನ್ನು ಯಶ್ ತಮ್ಮ ಹುಟ್ಟುಹಬ್ಬಕ್ಕೆ ಊರಿನಲ್ಲಿ ಇರುವುದಿಲ್ಲ ಅಂತ ಅಭಿಮಾನಿಗಳಿಗೆ ಸಂದೇಶ ರವಾನೆ ಮಾಡಿದ್ದಾರೆ. 'ಟಾಕ್ಸಿಕ್' ಶೂಟಿಂಗ್‌ನಲ್ಲಿ ಇರುವ ಕಾರಣ ವಿದೇಶಕ್ಕೆ ತೆರಳುವುದಾಗಿ ಫ್ಯಾನ್ಸ್‌ಗೆ ಪತ್ರವನ್ನು ಬರೆದಿದ್ದಾರೆ. ಕಳೆದ ವರ್ಷ ಕೂಡ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಆದರೂ, ಅವಘಡ ನಡೆದು ಹೋಗಿತ್ತು. ಹೀಗಾಗಿ ಈ ಬಾರಿ ತಮ್ಮ ಅಭಿಮಾನಿಗಳಿಗೆ ಸುರಕ್ಷಿತವಾಗಿ ಇರುವುದಕ್ಕೆ ಯಶ್ ಹೇಳಿದ್ದಾರೆ. ಇನ್ನು 'ಟಾಕ್ಸಿಕ್' ಶೂಟಿಂಗ್ ವೇಗವಾಗಿ ಸಾಗುತ್ತಿತ್ತು. ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಗೊತ್ತಾಗಿಲ್ಲ.

More from Filmibeat

English summary
After KGF Chapter 2 traiter Yash Toxic film making scene leaked on social media
Read more about: yash toxic leak
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X