Ganesh-Brundavihaari:'ಕೃಷ್ಣಂ ಪ್ರಣಯ ಸಖಿ' ಕಾಂಬೋದ ಹೊಸ ಸಿನಿಮಾ ಟೈಟಲ್ 'ಬೃಂದಾವಿಹಾರಿ'; ಹೈಲೈಟ್ ಏನು?
ಗೋಲ್ಡನ್‌ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಸಕ್ಸಸ್ ಕಂಡಿತ್ತು. ಸಿನಿಮಾದ ಹಾಡುಗಳು ಸಂಗೀತ ಪ್ರಿಯರ ಕಿವಿಗಳಿಗೆ ಇಂಪು ನೀಡಿದ್ದವು. ಜನರು ಥಿಯೇಟರ್‌ಗೆ ಬರುತ್ತಿಲ್ಲ ಎಂದು ಚಿಂತೆ ಪಡುವ ಸಮಯ. ಆ ವೇಳೆ ಈ ಸಿನಿಮಾ ಪ್ರೇಕ್ಷಕರನ್ನು ಎಳೆದು ತಂದಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಸೂಪರ್ ಹಿಟ್ ಆಗಿತ್ತು.
'ಕೃಷ್ಣಂ ಪ್ರಣಯ ಸಖಿ' ಕನ್ನಡ ಚಿತ್ರರಂಗಕ್ಕೆ ಆಕ್ಟರ್-ಡೈರೆಕ್ಟರ್ ಕಾಂಬಿನೇಷನ್ ನೀಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಯಶಸ್ಸು ಕಂಡರು. ದಂಡುಪಾಳ್ಯ ಇಮೇಜ್‌ನಿಂದ ನಿರ್ದೇಶಕ ಶ್ರೀನಿವಾಸ್ ರಾಜು ಕೂಡ ಹೊರ ಬಂದಿದ್ದರು. ಇಬ್ಬರಿಗೂ ಸೂಪರ್ ಸಕ್ಸಸ್ ಸಿಕ್ಕಿತ್ತು. ಇದೇ ಯಶಸ್ಸಿನ ಬೆನ್ನಲ್ಲೇ ಈ ಕಾಂಬಿನೇಷನ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದೆ.

2025ರಲ್ಲಿ ಸದ್ದಿಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಇಬ್ಬರೂ ಹೊಸ ಸಿನಿಮಾ ಶುರು ಮಾಡಿದ್ದರು. ಆದರೆ, ಟೈಟಲ್ ಮಾತ್ರ ರಿವೀಲ್ ಮಾಡಿರಲಿಲ್ಲ. ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿನಿಮಾ ಟೈಟಲ್ ರಿವೀಲ್ ಮಾಡಲಾಗಿದೆ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಬಳಿಕ 'ಬೃಂದಾವಿಹಾರಿ' ಎಂದು ಇಡಲಾಗಿದೆ. ಸದ್ಯ ಈ ಟೈಟಲ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾವನ್ನು ಸಮೃದ್ಧಿ ವಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಪಕ ಸಮೃದ್ಧಿ ವಿ ಮಂಜುನಾಥ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರಸ್ತುತ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡ ಟೈಟಲ್ ಅನ್ನು ಅನಾವರಣ ಮಾಡಿದ್ದಾರೆ. ಸೂಪರ್ ಹಿಟ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಬಳಿಕ 'ಬೃಂದಾವಿಹಾರಿ' ಸಿನಿಮಾದ ಕಥೆ ಬಗ್ಗೆ ಕುತೂಹಲ ಹೆಚ್ಚಾಗಿದೆ.
'ಬೃಂದಾವಿಹಾರಿ' ಕೂಡ ರೊಮ್ಯಾಂಟಿಕ್ ಲವ್ ಸ್ಟೋರಿ. ಈ ಕಾರಣಕ್ಕೆ ಸಿನಿಮಾಗೆ 'ಬೃಂದಾವಿಹಾರಿ' ಎಂದು ಟೈಟಲ್ ಇಡಲಾಗಿದೆ. 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಬಳಿಕ 'ಬೃಂದಾವಿಹಾರಿ' ಟೈಟಲ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಈಗಾಗಲೇ 'ಬೃಂದಾವಿಹಾರಿ' ಸಿನಿಮಾದ ಚಿತ್ರೀಕರಣ ಕೂಡ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಇನ್ನು 'ಬೃಂದಾವಿಹಾರಿ' ಸಿನಿಮಾದಲ್ಲಿಯೂ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಬ್ಬರು ನಾಯಕಿಯರು ಇದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮಾ ನಟಿಸುತ್ತಿದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮಾ ಇಬ್ಬರೊಂದಿಗೆ ಗಣೇಶ್ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದ ಕುತೂಹಲವಿದೆ. ವಕೀಲೆ, ಮಾಡಲ್ ಹಾಗೂ ನಟಿಯಾಗಿರುವ ಮಾಳವಿಕಾ ಶರ್ಮಾ ಅವರದ್ದು ಇದು ಮೊದಲ ಕನ್ನಡ ಸಿನಿಮಾ. ತಮಿಳಿನಲ್ಲಿ 'ನೆಲಾ ಟಿಕೆಟ್', 'ರೆಡ್', 'ಕಾಫಿ ವಿಥ್ ಕಾದಲ್', 'ಭೀಮಾ' ಹಾಗೂ 'ಹರೊಮ್ ಹರಾ' ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್ ಸಿನಿಮಾ ಅಂದ್ಮೇಲೆ ಹಾಡುಗಳ ಬಗ್ಗೆ ನಿರೀಕ್ಷೆ ಇದ್ದೇ ಇರುತ್ತೆ. ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಟ್ಯೂನ್‌ಗಳನ್ನು ಹಾಕಿದ್ದಾರೆ. ಹೀಗಾಗಿ ಸುಮಧುರ ಹಾಡುಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಸದ್ಯದಲ್ಲೇ ಸಿನಿಮಾದ ಹಾಡುಗಳು ರಿಲೀಸ್ ಮಾಡುವ ಆಲೋಚನೆ ಇದೆ. ಇನ್ನು ನಿರ್ದೇಶಕ ಶ್ರೀನಿವಾಸರಾಜು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.


Click it and Unblock the Notifications















