ಹೊಸ ಸಿನಿಮಾ ಅನೌನ್ಸ್ ಮಾಡಿದ 'ಲ್ಯಾಂಡ್‌ಲಾರ್ಡ್' ನಿರ್ಮಾಪಕ; ಪಿಸಿ ಶೇಖರ್ ನಿರ್ದೇಶಕ..ಹೀರೊ ಯಾರು?

'ಸಾರಥಿ' ಸಿನಿಮಾ ಬಳಿಕ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಕಮ್‌ಬ್ಯಾಕ್ ಮಾಡಿದ್ದರು. ಬಹಳ ವರ್ಷಗಳ ಬಳಿಕ 'ಲ್ಯಾಂಡ್‌ಲಾರ್ಡ್' ಸಿನಿಮಾ ನಿರ್ಮಾಣ ಮಾಡಿದ್ದರು. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾವನ್ನು ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದರು. ಗ್ರಾಮೀಣ ಭಾಗದ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿತ್ತು. 2ನೇ ಸಿನಿಮಾ ಮೂಲಕವೂ ಯಶಸ್ಸು ನಿರ್ಮಾಪಕ ಕೆವಿ ಸತ್ಯಪ್ರಕಾಶ್ ತಕ್ಕ ಮಟ್ಟಿಗೆ ಯಶಸ್ಸು ಕಂಡಿದ್ದಾರೆ.

'ಲ್ಯಾಂಡ್‌ಲಾರ್ಡ್' ಬಳಿಕ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಮತ್ತೆ ಸಿನಿಮಾ ಮಾಡುತ್ತಾರೋ ಇಲ್ವೋ ಅನ್ನೋ ಅನುಮಾನ ಸಿನಿಮಾ ಮಂದಿಗೆ ಇತ್ತು. 'ಸಾರಥಿ' ನಂತರ ಸೈಲೆಂಟ್ ಆದಂತೆ, 'ಲ್ಯಾಂಡ್‌ಲಾರ್ಡ್‌' ಬಳಿಕವೂ ಸೈಲೆಂಟ್ ಆಗಬಹುದೇ ಎಂಬ ಅನುಮಾನಗಳು ಇತ್ತು. ಆದ್ರೀಗ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ.

After Landlord producer K V Sathyaprakash announced new movie with director PC Shekar

ಯುಗಾದಿ ಹಬ್ಬ ಹಿಂದೂಗಳ ಪಾಲಿಗೆ ಹೊಸ ವರ್ಷ. ಹೀಗಾಗಿ ಸಿನಿಮಾ ಮಂದಿ ಕೂಡ ಆಕ್ಟಿವ್ ಆಗಿಬಿಡುತ್ತಾರೆ. ಯುಗಾದಿ ಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾಗಳ ಘೋಷಣೆ ಮಾಡುವುದಕ್ಕೆ ರೆಡಿಯಾಗುತ್ತಾರೆ. ಹೀಗಾಗಿ ಹಬ್ಬಕ್ಕೂ ಮೊದಲೇ ಸಂಭ್ರಮ ಕೂಡ ಜೋರಾಗಿರುತ್ತೆ. ಈ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ನ ನಿರ್ದೇಶಕ ಪಿಸಿ ಶೇಖರ್‌ ಅವರೊಂದಿಗೆ 'ಸಾರಥಿ' ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಸಿನಿಮಾ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಇನ್ನು ಪಿಸಿ ಶೇಖರ್ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನು ನೀಡಿದ್ದಾರೆ. ಅವರು ನಿರ್ದೇಶಿಸಿ 'ರಾಗಾ', 'ರೊಮಿಯೋ' ಅಂತಹ ಸಿನಿಮಾಗಳು ಸಿನಿಮಾ ಪ್ರಿಯರ ಗಮನ ಸೆಳೆದಿತ್ತು. ಇದೀಗ ನಿರ್ದೇಶಕ ಪಿಸಿ ಶೇಖರ್ ಇದೀಗ ತಮ್ಮ 12ನೇ ಸಿನಿಮಾ ನಿರ್ದೇಶನ ಮಾಡಲು ಮುಂದೆ ಬಂದಿದ್ದಾರೆ. ಈ ಬಾರಿ ಪಿಸಿ ಶೇಖರ್ 'ಸಾರಥಿ', 'ಲ್ಯಾಂಡ್‌ಲಾರ್ಡ್' ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಜೊತೆ ಕೈ ಜೋಡಿಸಿದ್ದು, ಮತ್ತೊಂದು ವಿಭಿನ್ನ ಸಿನಿಮಾ ನೀಡುವ ತರಾತುರಿಯಲ್ಲಿದ್ದಾರೆ. ಈ ಸಿನಿಮಾ ಗೆದ್ದರೆ, ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಹ್ಯಾಟ್ರಿಕ್ ಹಿಟ್ ಸಾಧನೆ ಮಾಡಿದಂತೆ ಆಗುತ್ತೆ.

ಪಿಸಿ ಶೇಖರ್ ಈಗಾಗಲೇ ಸಿನಿಮಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಪ್ರಿ ಪ್ರೊಡಕ್ಷನ್ ಕೆಲಸ ಎಲ್ಲವೂ ಮುಗಿದಿದೆ. ಯುಗಾದಿಗೆ ಸಿನಿಮಾ ಅನೌನ್ಸ್ ಮಾಡಿದ ಬಳಿಕ ಸೆಟ್ಟೇರಿಸುವುದಕ್ಕೆ ರೆಡಿಯಾಗಿದ್ದಾರೆ. ಪಿಸಿ ಶೇಖರ್ ಸದ್ಯ 'ಮಹಾನ್' ಸಿನಿಮಾದ ಕೊನೆಯ ಹಂತದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾ ಮುಗಿಯುವ ಮುನ್ನವೇ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಪಿಸಿ ಶೇಖರ್ 'ಮಹಾನ್' ರಿಲೀಸ್‌ಗೂ ಮುನ್ನವೇ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

After Landlord producer K V Sathyaprakash announced new movie with director PC Shekar

ಕೆವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗಲಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಸುಳಿವು ನೀಡಿದ್ದಾರೆ. "ಸಾರಥಿ, ಲ್ಯಾಂಡ್‌ಲಾರ್ಡ್ ಅಂತ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿಯಾಗುತ್ತೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಸ್ಟಾರ್ ಕಾಸ್ಟ್ ಬಗ್ಗೆ ರಿವೀಲ್ ಮಾಡುತ್ತೇವೆ" ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಇನ್ನೊಂದು ವಿಶೇಷವಿದೆ. ಕೆವಿ ಸತ್ಯಪ್ರಕಾಶ್ ಹಾಗೂ ಪಿಸಿ ಶೇಖರ್ ಇಬ್ಬರಿಗೂ ಆತ್ಮೀಯರಾಗಿರುವ ಗೆಳೆಯ ನಟ ನಿರ್ಮಾಪಕ ಮಿತ್ರ ಈ ಸಿನಿಮಾಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ನಿರ್ದೇಶಿಸಿದ 'ರಾಗಾ' ಸಿಮಿಮಾದಲ್ಲಿ ಮಿತ್ರ ಹೀರೋ ಆಗಿದ್ದರು. ಅಲ್ಲದೆ ಆ ಸಿನಿಮಾವನ್ನು ಅವರೇ ನಿರ್ಮಾಣ ಮಾಡಿದ್ದರು. ಇಬ್ಬರು ಗೆಳೆಯರಿಗಾಗಿ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕ್ಯಾಮರಾ ಹಿಂದೆ ಕೆಲಸ ಮಾಡುತ್ತಿದ್ದಾರೆ. 'ರಾಗಾ' ಸಿನಿಮಾದಲ್ಲಿ ನಟ ಮಿತ್ರ ಮತ್ತು ಪಿಸಿ ಶೇಖರ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಹಾಗಾಗಿ ಇದೀಗ ಮತ್ತೆ ಒಟ್ಟಿಗೆ ಸೇರಿರುವುದರಿಂದ ಈ ಸಿನಿಮಾದ ಮೇಲು ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
After Landlord producer K V Sathyaprakash announced new movie with director PC Shekar.
Read more about: kannada movie sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X