'ಮಹಾನ್' ಸಿನಿಮಾ 'ಹಾಗೆ ಸುಮ್ಮನೆ' ಕಿರಣ್ ಶ್ರೀನಿವಾಸ್

ಸದಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನದ, ಪ್ರತಿಷ್ಠಿತ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಹಾಗೂ ಜನಪ್ರಿಯ ನಟ ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನಟ ಕಿರಣ್ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ. ಮಹಾನ್ ಚಿತ್ರದ ತಮ್ಮ ಪಾತ್ರದ ಬಗ್ಗೆ ಕಿರಣ್ ಶ್ರೀನಿವಾಸ್ ಈ ರೀತಿ ಹೇಳುತ್ತಾರೆ‌.

"ಮಹಾನ್" ಚಿತ್ರದ ನಿರ್ದೇಶಕ ಪಿ‌.ಸಿ.ಶೇಖರ್ ಅವರ ನಿರ್ದೇಶನದ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿತ್ತು. ಅವರ ನಿರ್ದೇಶನದ "ಮಹಾನ್" ಚಿತ್ರದ ಪ್ರಮುಖಪಾತ್ರದಲ್ಲಿ ನಾನು ನಟಿಸಿರುವುದಕ್ಕೆ ಖುಷಿಯಾಗಿದೆ. "ಮಹಾನ್" ಚಿತ್ರದಲ್ಲಿ ನಾನು ಈವರೆಗೂ ಮಾಡಿರದ ಪಾತ್ರ ಮಾಡಿದ್ದೇನೆ. ಈ ಪಾತ್ರ ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರವಾಗುತ್ತದೆ ಎಂಬ ಭರವಸೆ ಇದೆ.

After Long time Haage Summane Fame Kiran Srinivas acting in P C Shekars Mahaan

ನಿರ್ದೇಶಕರು ಕಥೆ ಹೇಳಿದಾಗಲೇ ನನ್ನ ಪಾತ್ರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು. ಇನ್ನೂ, ಕೆಲವು ವರ್ಷಗಳ ಹಿಂದೆ ವಿಜಯ ರಾಘವೇಂದ್ರ ಅವರು ತೀರ್ಪುಗಾರರಾಗಿದ್ದ ರಿಯಾಲಿಟಿ ಶೋನಲ್ಲಿ ನಾನು ನಿರೂಪಕನಾಗಿದ್ದೆ.. ಆಗ ಅವರು ತೋರಿದ ಪ್ರೀತಿ ಇನ್ನೂ ಕಣ್ಣ ಮುಂದೆ ಇದೆ. ಈಗ ಅವರ ಜೊತೆಗೆ ನಟಿಸಿರುವುದು ಬಹಳ ಖುಷಿಯಾಗಿದೆ. ರಂಗಾಯಣ ರಘು ಅವರಿಂದ ಅಭಿನಯದ ಬಗ್ಗೆ ಸಾಕಷ್ಟು ಕಲಿತಿದ್ದೇನೆ. ರಾಧಿಕಾ ನಾರಾಯಣ್ ಹಾಗೂ ವರ್ಷ ಬೊಳಮ್ಮ ಅವರ ಜೊತೆಗೆ ಅಭಿನಯಿಸಿದ್ದು ಹಾಗೂ ಪ್ರಕಾಶ್ ಬುದ್ದೂರು ಅವರ ನಿರ್ಮಾಣದಲ್ಲಿ ನಟಿಸುತ್ತಿರುವುದು ಸಂತೋಷವಾಗಿದೆ. ಈ ಚಿತ್ರದಲ್ಲಿ "ಮಹಾನ್" ಎಂದರೆ ರೈತ. ದೇಶದ ಬೆನ್ನೆಲುಬಾದ ರೈತನ ಕುರಿತಾದ ಚಿತ್ರದಲ್ಲಿ ನಾನು ಒಂದು ಭಾಗವಾಗಿರುವುಕ್ಕೆ ಹೆಮ್ಮೆ ಇದೆ ಎನ್ನುತ್ತಾರೆ ನಟ ಕಿರಣ್ ಶ್ರೀನಿವಾಸ್.

ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಮುಂತಾದವರು "ಮಹಾನ್" ಚಿತ್ರದ ತಾರಾಬಳಗದಲ್ಲಿದ್ದಾರೆ‌.

English summary
After Long time Haage Summane Fame Kiran Srinivas acting in P C Shekars Mahaan.
Read more about: kannada movie vijay raghavendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X