'ಲವ್ 360' ಬಳಿಕ ಮತ್ತೆ ಕೃಷ್ಣನ ಮೊರೆ ಹೋದ 'ಕೃಷ್ಣನ್ ಲವ್ ಸ್ಟೋರಿ' ನಿರ್ದೇಶಕ ಶಶಾಂಕ್!

ಡಾರ್ಲಿಂಗ್ ಕೃಷ್ಣ ಸ್ಯಾಂಡಲ್‌ವುಡ್‌ನ ಬ್ಯುಸಿ ನಟ. ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ಈಗ ಶಶಾಂಕ್ ನಿರ್ದೇಶನದ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಶಶಾಂಕ್ ಇತ್ತೀಚೆಗೆಷ್ಟೇ ಹೊಸಬರನ್ನೇ ಇಟ್ಟುಕೊಂಡು 'ಲವ್ 360' ಸಿನಿಮಾವನ್ನು ನಿರ್ದೇಶಿಸಿದ್ದರು. 'ಲವ್ 360' ಸಿನಿಮಾ ಚೆನ್ನಾಗಿದ್ದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿರಲಿಲ್ಲ. ಹೀಗಾಗಿ ಶಶಾಂಕ್ ವಿಡಿಯೋ ಮಾಡಿ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದರು.

ನಿರ್ದೇಶಕ ಶಶಾಂಕ್ ವಿಡಿಯೋ ವೈರಲ್ ಆದ ಬಳಿಕ ಎರಡನೇ ವಾರದಿಂದ 'ಲವ್ 360' ಸಿನಿಮಾ ನೋಡಲು ಥಿಯೇಟರ್‌ಗೆ ಪ್ರೇಕ್ಷಕರು ಬಂದಿದ್ದರು. 'ಲವ್ 360' ಗೆದ್ದ ಬಳಿಕ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ಆಕ್ಷನ್ ಕಟ್ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹೊಸ ಸಾಹಸದ ಬಗ್ಗೆ ನಿರ್ದೇಶಕ ಶಶಾಂಕ್ ಫಿಲ್ಮಿಬೀಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ-ಶಶಾಂಕ್ ಸಿನಿಮಾ

ಡಾರ್ಲಿಂಗ್ ಕೃಷ್ಣ-ಶಶಾಂಕ್ ಸಿನಿಮಾ

'ಕೃಷ್ಣನ್ ಲವ್ ಸ್ಟೋರಿ', ' ಕೃಷ್ಣ ಲೀಲಾ' ಸಿನಿಮಾಗಳ ನಿರ್ದೇಶಕ ಇತ್ತೀಚೆಗೆ 'ಲವ್ 360'ಯನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಪ್ರೇಕ್ಷಕರ ಮನಗೆದ್ದ ಬಳಿಕ ಡಾರ್ಲಿಂಗ್ ಕೃಷ್ಣಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾದ ಕಥೆ, ಚಿತ್ರಕಥೆಯನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಟ್‌ ಅನ್ನು ರೆಡಿ ಮಾಡಿಟ್ಟುಕೊಂಡಿದ್ದು, ಅಕ್ಟೋಬರ್ ತಿಂಗಳಿನಿಂದ ಶೂಟಿಂಗ್ ಆರಂಭ ಆಗಲಿದೆ.

ಪಕ್ಕಾ ಫ್ಯಾಮಿಲಿ ಸಿನಿಮಾ

ಪಕ್ಕಾ ಫ್ಯಾಮಿಲಿ ಸಿನಿಮಾ

" ಲವ್ 360 ಸಿನಿಮಾ ಬಿಡುಗಡೆಗೂ ಮುನ್ನವೇ ಡಾರ್ಲಿಂಗ್ ಕೃಷ್ಣ ಜೊತೆ ಸಿನಿಮಾ ಅನೌನ್ಸ್ ಮಾಡಿದ್ದೆ. ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ. ಫ್ಯಾಮಿಲಿ ಹೀರೊ ಜೊತೆ ಫ್ಯಾಮಿಲಿ ಡೈರೆಕ್ಟರ್ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು. ಲವ್ 360 ಗೆದ್ದ ಬಳಿಕ ಹೊಸ ಸಿನಿಮಾವನ್ನು ಅನೌನ್ಸ್ ಮಾಡುತ್ತಿದ್ದೇನೆ. ಇದು ನಮ್ಮ ಪ್ರೊಡಕ್ಷನ್‌ನಲ್ಲಿ ಬರುತ್ತಿರೋ ಮೂರನೇ ಸಿನಿಮಾ. ಅಲ್ಲದೆ ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್‌ನ ಮೊದಲ ಸಿನಿಮಾ. ನಮ್ಮಿಬ್ಬರಿಗೂ ಸರಿ ಹೊಂದುವ ಸಿನಿಮಾವಿದು." ಎನ್ನುತ್ತಾರೆ ನಿರ್ದೇಶಕ ಶಶಾಂಕ್.

ಬಿಗ್ ಬಜೆಟ್ ಸಿನಿಮಾಗೆ ಕೈ ಹಾಕಿದ ಶಶಾಂಕ್

ಬಿಗ್ ಬಜೆಟ್ ಸಿನಿಮಾಗೆ ಕೈ ಹಾಕಿದ ಶಶಾಂಕ್

" ಕೆಜಿಎಫ್ 2 ಸಿನಿಮಾ ಬಳಿಕ ಎಲ್ಲರೂ ದೊಡ್ಡ ಬಜೆಟ್ ಸಿನಿಮಾವನ್ನೇ ನೋಡಲು ಇಷ್ಟ ಪಡುತ್ತಿದ್ದಾರೆ. ಹೀಗಾಗಿ ನಮ್ಮಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಸಿನಿಮಾನೂ ಬಿಗ್ ಬಜೆಟ್ ಸಿನಿಮಾದ್ದೇ ಆಗಿರುತ್ತೆ. ಫ್ಯಾಮಿಲಿ ಸಿನಿಮಾ ಆಗಿರೋದ್ರಿಂದ ಬಜೆಟ್ ದೊಡ್ಡದಿರುತ್ತೆ. ಇನ್ನೂ ಸ್ಟಾರ್ ಕಾಸ್ಟ್ ಆಯ್ಕೆ ಆಗಬೇಕಿದೆ. ಇನ್ನು ಮೂರು ದಿನಗಳಲ್ಲಿ ಹೀರೊಯಿನ್ ಫೈನಲ್ ಆಗುತ್ತಾರೆ. ಉಳಿದ ಸ್ಟಾರ್ ಕಾಸ್ಟ್ ಅನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ." ಎಂದಿದ್ದಾರೆ ಶಶಾಂಕ್.

'ಲವ್ 360'ಯಿಂದ ನನಗೆ ನಷ್ಟ ಆಗಿಲ್ಲ

'ಲವ್ 360'ಯಿಂದ ನನಗೆ ನಷ್ಟ ಆಗಿಲ್ಲ

'ಲವ್ 360' ಸಿನಿಮಾ ಶಶಾಂಕ್ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. "ಈ ಸಿನಿಮಾದಿಂದ ಶಶಾಂಕ್ ನಷ್ಟ ಆಗಿಲ್ಲ. ಲಾಭನೇ ಆಗಿದೆ ಎನ್ನುತ್ತಿದ್ದಾರೆ. ಬೇರೆ ಹಕ್ಕುಗಳ ಮಾರಾಟದಿಂದ ಶೇ.75ರಷ್ಟು ಹಣ ವಾಪಾಸ್ ಬಂದಿತ್ತು. ಇನ್ನು ಶೇ. 25ರಷ್ಟು ಹಣ ಮಾತ್ರ ಥಿಯೇಟರ್‌ನಿಂದ ಬರಬೇಕಿತ್ತು. ಅದು ಎರಡನೇ ವಾರದ ಬಳಿಕ ಬಂದಿದೆ. ಆದರೆ, ನಾವು ಹಾಕಿದ ಎಫರ್ಟ್‌ಗೆ ಇದು ಸಾಲಲಿಲ್ಲ ಅನ್ನೋದಷ್ಟೇ ನಮ್ಮ ಅಳುಕು." ಎಂದು ಮಾಹಿತಿ ಕೊಡುತ್ತಾರೆ ಶಶಾಂಕ್.

More from Filmibeat

English summary
After Love 360 Shashank New Movie With Darling Krishna Starts From Octorber, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X