Peter Pre-View:'ಲವ್ ಮಾಕ್ಟೇಲ್ 3' ಬಳಿಕ ಸ್ಯಾಂಡಲ್‌ವುಡ್‌ ಮತ್ತೊಂದು ಸಕ್ಸಸ್ ಕೊಡಬಹುದೇ 'ಪೀಟರ್'?

'ಧುರಂಧರ್ 2' ಅಬ್ಬರದ ನಡುವೆಯೂ ಕನ್ನಡ ಚಿತ್ರರಂಗಕ್ಕೆ ಲವ್ 'ಮಾಕ್ಟೇಲ್ 3' ಮೂಲಕ ಮತ್ತೊಂದು ಸಕ್ಸಸ್ ಸಿಕ್ಕಿದೆ. ಸಿನಿಮಾ ತಂಡ ಇತ್ತೀಚೆಗಷ್ಟೇ ಸಿನಿಮಾ ಗೆದ್ದಿರೋ ಸಂಭ್ರಮಾಚರಣೆಯನ್ನೂ ಮಾಡಿದೆ. ಈ ಸಿನಿಮಾ ಗೆದ್ದ ಬೆನ್ನಲ್ಲೇ ಮತ್ತೊಂದು ಕನ್ನಡ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದುವೇ 'ಪೀಟರ್'.

'ದೂರದರ್ಶನ' ಅನ್ನೋ ಒಂದೊಳ್ಳೆ ಕಂಟೆಂಟ್ ಸಿನಿಮಾ ಮಾಡಿದ್ದ ಸುಕೇಶ್ ಶೆಟ್ಟಿ 'ಪೀಟರ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಇಂಡಸ್ಟ್ರಿಯಲ್ಲಿ ಈ ಸಿನಿಮಾ ಬಗ್ಗೆ ಟಾಕ್ ಶುರುವಾಗಿದೆ. ಸುಕೇಶ್ ಶೆಟ್ಟಿ ಈ ಬಾರಿ ಮತ್ತೊಂದು ಗಟ್ಟಿ ಕಥೆಯನ್ನು ರಚಿಸಿ, ಸಿನಿಮಾ ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಸರಿಯಾಗಿ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಹಾಗೂ ಕನ್ನಡ ನಟ ರಾಕ್ಷಸ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ.

After Love Mocktail 3 Rajesh Dhruva Sukesh Shetty movie Peter will give success to Sandalwood

'ಪೀಟರ್' ಕರಾವಳಿ ಭಾಗದ ಮಣ್ಣಿನ ಸೊಗಡಿನ ಕಥೆ. ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳ ಇಲ್ಲಿ ಪ್ರಮುಖ ವಿಷಯವಾಗಿ ಬಳಸಿಕೊಳ್ಳಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಹೀಗೆ ಎಲ್ಲವನ್ನೂ ಒಳಗೊಂಡಿರುವ ಸಿನಿಮಾ 'ಪೀಟರ್' ಮೇಲೆ ಸ್ಯಾಂಡಲ್‌ವುಡ್ ಮಂದಿ ಕಣ್ಣಿಟ್ಟಿದ್ದಾರೆ.

ಅಷ್ಟಕ್ಕೂ ಈ ಸಿನಿಮಾ ಇಷ್ಟೊಂದು ಚರ್ಚೆಯಲ್ಲಿ ಇರುವುದಕ್ಕೆ ಪ್ರಮುಖ ಕಾರಣ ಕೆವಿಎನ್ ಪ್ರೊಡಕ್ಷನ್ಸ್. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾವನ್ನು ವಿತರಿಸಿ ಗೆದ್ದಿರೋ ಕೆವಿಎನ್ ಪ್ರೊಡಕ್ಷನ್ಸ್ 'ಪೀಟರ್' ಸಿನಿಮಾವನ್ನೂ ಕರ್ನಾಟಕದಾದ್ಯಂತ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ. ಇಂತಹ ದೊಡ್ಡ ಸಂಸ್ಥೆ 'ಪೀಟರ್' ವಿತರಣೆ ಮಾಡುತ್ತಿರುವುದರಿಂದ ಸಹಜವಾಗಿ ಕುತೂಹಲ ದುಪ್ಪಟ್ಟಾಗಿದೆ.

Also Read
ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ
ಶ್ರೀರಾಮನವಮಿ ಸಂಭ್ರಮದಲ್ಲಿ ಜೋಗಿ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಹೊಸ ಅಧ್ಯಾಯ

ಅಂದ್ಹಾಗೆ ಈ ಸಿನಿಮಾ ಹೈಲೈಟ್ ಏನು ಅಂತ ನೋಡುವುದಾರೇ, ಮೊದಲಿಗೆ ಸುಕೇಶ್ ಶೆಟ್ಟಿ 'ದೂರದರ್ಶನ'ದ ಬಳಿಕ ಯಾವ ರೀತಿಯ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಕುತೂಹಲವಿದೆ. ಇನ್ನು ಈ ಸಿನಿಮಾವನ್ನು ರವಿ ಹಿರೇಮಠ್ ಮತ್ತು ವೃದ್ಧಿ ಸ್ಟುಡಿಯೋಸ್‌ನ ರಾಕೇಶ್ ಹೆಗಡೆ ಮಾಡಿದ್ದಾರೆ. ರವಿ ಹಿರೇಮಠ್ ಈಗಾಗಲೇ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

After Love Mocktail 3 Rajesh Dhruva Sukesh Shetty movie Peter will give success to Sandalwood

'ಪೀಟರ್' ಸಿನಿಮಾಗೆ ರಿತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್, ಲವ್, ಎಮೋಷನ್ ಇವರು ಈ ಸಿನಿಮಾ ಇವರ ಸಂಗೀತವೇ ದೊಡ್ಡ ಹೈಲೈಟ್ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಅಜಯ್ ಗೊಗಾವಲೆ ಅವರು ಹಾಡಿರುವ ​"ಜೋಶಿಕಿ ಜವಾನಿ.." ಅನ್ನೋ ಈ ಫ್ರೆಂಡ್ ಶಿಪ್ ಸಾಂಗ್ ಸಂಗೀತ ಪ್ರಿಯರ ಗಮನ ಸೆಳೆದಿದೆ. ಹಾಗೇ ನಾಯಕ-ನಾಯಕಿಯರ ಡ್ಯೂಯೆಟ್ ಸಾಂಗ್ "ಸುಂದರಿ ಸುಂದರಿ.." ಕೂಡ ಸಿನಿಪ್ರಿಯರ ಮನ ಗೆದ್ದಿದೆ.

ಅಂದ್ಹಾಗೆ, 'ಪೀಟರ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಜೇಶ್ ಧ್ರುವ ಮತ್ತು ರವೀಕ್ಷಾ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ​ರಾಜೇಶ್ ಧ್ರುವ ಅವರ ಆಟಿಟ್ಯೂಡ್ ಮತ್ತು ಪ್ರೆಸೆನ್ಸ್ ತುಂಬಾನೇ ಇಂಟರೆಸ್ಟಿಂಗ್ ಆಗಿದೆ. ಇನ್ನು ರವೀಕ್ಷಾ ಶೆಟ್ಟಿ ಈ ಸಿನಿಮಾ ಮೂಲಕ ಗಟ್ಟಿಯಾಗಿ ನೆಲೆಯುತ್ತಾರೆಂದು ಹೇಳಲಾಗಿದೆ. 'ಪೀಟರ್' ಸಿನಿಮಾ ಏಪ್ರಿಲ್ 10 ರಂದು ರಿಲೀಸ್ ಆಗಲಿದೆ.

More from Filmibeat

English summary
After Love Mocktail 3 Rajesh Dhruva Sukesh Shetty movie Peter will give success to Sandalwood?
Read more about: kannada movie new movie release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X