ಸಿನಿಮಾದಲ್ಲಿ ಶೃಂಗೇರಿ ನಟಿಯರ ಹವಾ ಬಲು ಜೋರು: ನಭಾ, ಸಂಗೀತ ಬಳಿಕ ಮಿಂಚುತ್ತಿರೋ ಈ ನಟಿ ಯಾರು?

ಕನ್ನಡ ಚಿತ್ರರಂಗಕ್ಕೆ ರಾಜ್ಯದ ಮೂಲೆ ಮೂಲೆಯಿಂದ ನಾಯಕಿಯರ ಆಗಮನ ಆಗುತ್ತಲೇ ಇರುತ್ತೆ. ಹೊಸ ಹೊಸ ಪ್ರತಿಭೆಗಳು ಸಿನಿಮಾಗಳಲ್ಲಿ ನಾಯಕಿಯಾಗಬೇಕು ಅಂತ ಕನಸು ಕಟ್ಟಿಕೊಂಡು ಬರುತ್ತಾರೆ. ಕೆಲವರಿಗೆ ಅದೃಷ್ಟು ಒಲಿದು ಬರುತ್ತೆ. ಮತ್ತೆ ಕೆಲವರಿಗೆ ನಿರಾಸೆ ಕಾದಿರುತ್ತೆ.

ಆದರೆ, ಶಾರದೆಯ ನೆಲದಿಂದ ಬಂದ ಮೂವರು ನಾಯಕಿಯರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಒಳ್ಳೊಳ್ಳೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಕಲೆಯ ಅಧಿದೇವತೆ ಶಾರದಾಂಬೆ. ಶೃಂಗೇರಿಯಲ್ಲಿ ನೆಲೆಸಿರೋ ಈ ದೇವತೆ ಕರುಣೆ ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಇದೆ.

After Nabha Natesh, Sangeetha another actress Nagashree Begar from Sringeri shining in Sandalwood

ಹೌದು, ಶೃಂಗೇರಿಯಿಂದ ತಮ್ಮ ಪ್ರತಿಭೆಯನ್ನೇ ನಂಬಿಕೊಂಡು ಬಂದ ಮೂವರು ನಟಿಯರು ನಾಯಕಿಯರಾಗಿ ಮಿಂಚುತ್ತಿದ್ದಾರೆ. ಈಗಾಗಲೇ 'ವಜ್ರಕಾಯ' ಸಿನಿಮಾದ ಮೂಲಕ ನಾಯಕಿಯಾಗಿ ಮಿಂಚಿದ್ದ ನಭಾ ನಟೇಶ್ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನೊಂದು ಕಡೆ ಸಂಗೀತ ಶೃಂಗೇರಿ ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'ಯಲ್ಲಿ ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಇದೇ ಶೃಂಗೇರಿಯಿಂದ ಮತ್ತೊಬ್ಬ ನಟಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅವರೇ ನಾಗಶ್ರೀ ಬೇಗಾರ್.

After Nabha Natesh, Sangeetha another actress Nagashree Begar from Sringeri shining in Sandalwood

ನಾಗಶ್ರೀ ಬೇಗಾರ್ ಮೂಲತ: ಶೃಂಗೇರಿಯವರು. 'ಜಲಪಾತ' ಅನ್ನುವ ಸಿನಿಮಾದಲ್ಲಿ ಈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಟಾಕ್ ಶುರುವಾಗಿದೆ. ಅಲ್ಲದೇ ನಾಗಶ್ರೀ ಬೇಗಾರ್ ಪ್ರತಿಭೆಯನ್ನು ನೋಡುವುದಕ್ಕೆ ಸಿನಿಮಾ ಮಂದಿ ಕಾದು ಕೂತಿದ್ದಾರೆ.

'ಜಲಪಾತ' ಸಿನಿಮಾದ ನಟಿ ನಾಗಶ್ರೀ ಬೇಗಾರ್ ಪ್ರತಿಭಾವಂತೆ. ಬಾಲ್ಯದಿಂದಲೂ ಯಕ್ಷಗಾನ , ನಾಟಕ , ನೃತ್ಯ ಮಾಡುವುದರಲ್ಲಿ ಎಕ್ಸ್‌ಪರ್ಟ್. ಅಲ್ಲದೆ ಕಿರುತೆರೆಯಲ್ಲೂ ಇವರು ಹೆಸರು ಮಾಡಿದ್ದಾರೆ. 'ಹುಚ್ಚುಕ್ಕಿ' ಎಂಬ ಕಿರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದು ಇವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅಲ್ಲದೆ 'ವೈಶಂಪಾಯನ ತೀರ' ಅನ್ನೋ ಸಿನಿಮಾದಲ್ಲಿ ಟಾಮ್ ಬಾಯ್ ಅವತಾರದಲ್ಲಿ ನಟಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸಿದ್ದರು.

ನಾಗಶ್ರೀ ಬೇಗಾರ್ ಈಗಾಗಲೇ ಹಲವು ನಾಟಕೋತ್ಸವದಲ್ಲಿ ಭಾಗವಹಿಸಿದ್ದಾರೆ. ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಬಾಚಿಕೊಂಡ ರಂಗಭೂಮಿ ಪ್ರತಿಭೆಯಾಗಿ ನಾಗಶ್ರೀ ಹೊರಹೊಮ್ಮಿದ್ದಾರೆ.

ಸದ್ಯ 'ಜಲಪಾತ' ಅನ್ನುವ ಸಿನಿಮಾದಲ್ಲಿ ನಟಿಸಿದ್ದು 3 ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಮಲೆನಾಡಿನ ಪ್ರಾದೇಶಿಕ ಭಾಷೆಯನ್ನು ನಾಗಶ್ರೀ ಸಮರ್ಪಕವಾಗಿ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಮತ್ತೊಂದು ಪ್ರತಿಭಾನ್ವಿತ ನಟಿಯ ನಿರೀಕ್ಷೆಯಲ್ಲಿ ಚಿತ್ರರಂಗವಿದೆ.

"ತನ್ನ ಕಲಾ ಚಟುವಟಿಗೆ ಶೃಂಗೇರಿಯಲ್ಲಿಯೇ ಆಸರೆ ಸಿಕ್ಕಿತ್ತು. ಬಾಲ್ಯದಲ್ಲಿ ಸಿಕ್ಕ ಪರಿಸರ, ಊರಿನ ಸಾಂಸ್ಕೃತಿಕ ಹಿನ್ನೆಲೆ ನನಗೆ ವರದಾನವಾಯಿತು" ಎಂದು 'ಜಲಪಾತ'ದ ನಟಿ ನಾಗಶ್ರೀ ಬೇಗಾರ್ ಹೇಳುತ್ತಾರೆ. ಈ ಮೂಲಕ ಸದಾ ವಿಭಿನ್ನವಾದ ಪಾತ್ರಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಈಗಾಗಲೇ ಮತ್ತೆ 'ಮಾಯಮೃಗ' ಧಾರಾವಾಹಿ , 'ಬ್ಯಾಚುಲರ್ಸ್ ಪಾರ್ಟಿ', 'ಊರಿನ ಗ್ರಾಮಸ್ಥರಲ್ಲಿ ವಿನಂತಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಗಶ್ರೀ ಕೇವಲ ನಟಿಯಷ್ಟೇ ಅಲ್ಲ ಸ್ವತಃ ಗಾಯಕಿ ಕೂಡ ಹೌದು. ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆಯೂ ಹೌದು.

More from Filmibeat

English summary
After Nabha Natesh, Sangeetha another actress Nagashree Begar from Sringeri shining in Sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X