ಮಂಸೋರೆ ನಿರ್ದೇಶಿಸಿದ 'ದೂರ ತೀರ ಯಾನ'ದಲಿ ನಾತಿಚರಾಮಿಯ 'ಗೌರಿ';ಮತ್ತೊಂದು ವಿಶೇಷ ಪಾತ್ರದ ಶ್ರುತಿ ಹರಿಹರನ್

ಶ್ರುತಿ ಹರಿಹರನ್ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ವಿವಾಹದ ಬಳಿಕ ಕೊಂಚ ಸಮಯದ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದರು. ಸಂಸಾರ, ಮಗಳು ಅಂತ ಸಿನಿಮಾ ನಟನೆಯಿಂದ ದೂರವಿದ್ದರು. ಆದರೆ, ತಮ್ಮ ಅಭಿಮಾನಿಗಳ ಜೊತೆ ಯಾವಾಗಲೂ ಸಂಪರ್ಕದಲ್ಲಿ ಇದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು.

ಜಿಮ್, ವರ್ಕ್‌ಔಟ್, ಪೋಟೊಶೂಟ್ ಅಂತ ಬ್ಯುಸಿಯಾಗಿದ್ದ ಶ್ರುತಿ ಹರಿಹರನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಈಗ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆಷ್ಟೇ 'ದಿ ವರ್ಡಿಕ್ಟ್' ಎಂಬ ತಮಿಳು ಸಿನಿಮಾ ಝಲಕ್ ಹೊರಬಿದ್ದಿತ್ತು. ಎಂಟು ವರ್ಷಗಳ ಬಳಿಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈಗ ಮತ್ತೊಂದು ಸಿನಿಮಾದಲ್ಲಿ ಸದ್ದಿಲ್ಲದೆ ನಟಿಸಿದ್ದಾರೆ.

After Nathicharami Sruthi Hariharan is again appearing in the Doora Thira Yaana film directed by Manso Re

ಮಂಸೋರೆ ನಿರ್ದೇಶಿಸಿರುವ 'ದೂರ ತೀರ ಯಾನ' ಸಿನಿಮಾದಲ್ಲಿ ಶ್ರುತಿ ಹರಿಹರನ್ ಪ್ರಮುಖವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ನಿರ್ದೇಶಕ ಮಂಸೋರೆ ಶ್ರುತಿ ಹರಿಹರನ್ ವಿಶೇಷ ಪಾತ್ರದಲ್ಲಿ ನಟಿಸಿರುವ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಹಾಗಿದ್ದರೆ, ಶ್ರುತಿ ಹರಿಹರನ್ ನಟಿಸುತ್ತಿರುವ ಪಾತ್ರ ಯಾವುದು? ತಿಳಿಯುವುದಕ್ಕೆ ಮುಂದೆ ಓದಿ.

'ನಾತಿಚರಾಮಿ'ಯಂತಹ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಸಿನಿಮಾವನ್ನು ನಿರ್ದೇಶಿಸಿದ್ದ ಮಂಸೋರೆ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅದುವೇ 'ದೂರ ತೀರ ಯಾನ'. ಈ ಸಿನಿಮಾ ಇದೇ ಜುಲೈ 11 ರಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರತಂಡ ಸಿನಿಮಾದ ಪ್ರಚಾರವನ್ನು ಆರಂಭಿಸಿದೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಎರಡು ಹಾಡುಗಳು ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿವೆ. ಮತ್ತೊಂದು ವಿಭಿನ್ನ ಸಿನಿಮಾವನ್ನು ನೀಡುವ ತವಕದಲ್ಲಿ ಮಂಸೋರೆ ಇದ್ದಾರೆ.

'ದೂರ ತೀರ ಯಾನ' ಸಿನಿಮಾ ಶುರುವಾದ ದಿನದಿಂದ ನಾಯಕಿ ಮತ್ತು ನಾಯಕನ ಪಾತ್ರಗಳನ್ನಷ್ಟೇ ರಿವೀಲ್ ಮಾಡಲಾಗಿತ್ತು. ಸಿನಿಮಾದಲ್ಲಿರುವ ಉಳಿದ ಪಾತ್ರಗಳ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ಉಳಿದ ಪಾತ್ರಗಳ ಪರಿಚಯವನ್ನು ಮಾಡಿಕೊಡುತ್ತಿದೆ. ಅದರಲ್ಲಿ ಮೊದಲ ಪಾತ್ರವೇ ಗೌರಿ. ಈ ಪಾತ್ರದಲ್ಲಿ ಶೃತಿ ಹರಿಹರನ್ ಕಾಣಿಸಿಕೊಳ್ಳುತ್ತಿದ್ದಾರೆ.

After Nathicharami Sruthi Hariharan is again appearing in the Doora Thira Yaana film directed by Manso Re

ಮಂಸೋರೆ ನಿರ್ದೇಶನ ಮಾಡಿದ್ದ 'ನಾತಿಚರಾಮಿ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಇದೊಂದೇ ಸಿನಿಮಾಗೆ ಬರೋಬ್ಬರಿ ಐದು ರಾಷ್ಟ್ರ ಪ್ರಶಸ್ತಿಗಳು ಬಂದಿದ್ದವು. ಪ್ರಶಸ್ತಿಯಷ್ಟೇ ಅಲ್ಲ, ಸಿನಿಮಾದ ಕಂಟೆಂಟ್ ಬಗ್ಗೆನೂ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆದಾಗ ದೇಶ, ವಿದೇಶದಿಂದ ಸಿನಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಗೌರಿ ಪಾತ್ರದಲ್ಲಿ ನಟಿಸಿದ್ದರು. ಈಗ ಮತ್ತೆ ಮಂಸೋರೆ ನಿರ್ದೇಶಿಸಿದ 'ದೂರ ತೀರ ಯಾನ' ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಚಿತ್ರರಂಗದ ಐಕಾನಿಕ್ ಸಿನಿಮಾ ಎನ್ನಬಹುದಾದ 'ನಾತಿಚರಾಮಿ' ಸಿನಿಮಾದಲ್ಲಿ ಶ್ರುತಿ ಹರಿಹರನ್ ಅವರದ್ದು ದಿಟ್ಟ ಮಹಿಳೆಯ ಪಾತ್ರ. 'ಗೌರಿ' ಪಾತ್ರದಲ್ಲಿ ನಟಿಸಿದ್ದ ಶ್ರುತಿ ಹರಿಹರನ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಕನ್ನಡ ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮದೇ ಸಿನಿಮಾದ ಪಾತ್ರಗಳನ್ನು ಮತ್ತೊಂದು ಸಿನಿಮಾದಲ್ಲಿ ತರುವ ಮೂಲಕ ತಮ್ಮದೇ ಸಿನಿಮಾ ಪ್ರಪಂಚವನ್ನು ಸೃಷ್ಟಿಸಿರುವುದು ಅಪರೂಪ. ಅಂತಹ ಅಪರೂಪದ ಜಗತ್ತನ್ನು ನಿರ್ದೇಶಕ ಮಂಸೋರೆ ತಮ್ಮ 'ದೂರ ತೀರ ಯಾನ'ದಲ್ಲಿ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ.

'ನಾತಿಚರಾಮಿ' ಸಿನಿಮಾ ಮೂಲಕ ಮೆಚ್ಚುಗೆ ಗಳಿಸಿದ್ದ ಮಂಸೋರೆ ಹಾಗೂ ಗೌರಿ ಕಾಂಬಿನೇಷನ್ ಅನ್ನು ಮತ್ತೆ ತೆರೆಮೇಲೆ ನೋಡಬಹುದು. 'ದೂರ ತೀರ ಯಾನ' ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟು ಹಾಕಬಹುದಾ? ಎಂಬ ಪ್ರಶ್ನೆ ಎದ್ದಿದೆ. 'ದೂರ ತೀರ ಯಾನ' ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಿದ್ದು ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇದೇ ಜೂನ್ 28ರಂದು ಕಿಚ್ಚ ಸುದೀಪ್ ಬೆಳಗ್ಗೆ 11 ಗಂಟೆಗೆ ಈ ಸಿನಿಮಾದ ಟ್ರೈಲರ್ ಅನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ರಿವೀಲ್ ಮಾಡಲಿದ್ದಾರೆ.

More from Filmibeat

English summary
After Nathicharami, Sruthi Hariharan is again appearing in the Doora Thira Yaana film directed by Manso Re.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X