Don't Miss!
- News
ಫೇಸ್ಬುಕ್ ಉದ್ಯೋಗಿಗಳಿಗೆ ಮತ್ತೆ ಕೆಟ್ಟ ಸುದ್ದಿ: ಮುಂಬರುವ ದಿನಗಳಲ್ಲಿ ಇನ್ನಷ್ಟು ವಜಾ- ಇಲ್ಲಿದೆ ವರದಿ, ಮಾಹಿತಿ
- Sports
WIPL 2023: ಮಹಿಳಾ IPLನಲ್ಲಿ ಆರ್ಸಿಬಿ ಪರ ಆಡುವ ಆಸೆ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್ ಪತ್ನಿ
- Lifestyle
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪು ಫ್ಯಾನ್ಸ್ ಮುತ್ತಿಗೆ ಬಳಿಕ ದರ್ಶನ್ ಜೊತೆ ಚರ್ಚೆಗೆ ಮುಂದಾದ ಫಿಲ್ಮ್ ಚೇಂಬರ್: ಮುಂದೇನು?
'ಕ್ರಾಂತಿ' ಸಿನಿಮಾದ ಹಾಡು ಬಿಡುಗಡೆ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಉಗ್ರ ಸ್ವರೂಪ ತಾಳುತ್ತಲೇ ಇದೆ. ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ನಡುವಿನ ತಿಕ್ಕಾಟ ಮುಂದುವರೆಯುತ್ತಲೇ ಇದೆ.
ನಿನ್ನೆ(ಡಿಸೆಂಬರ್ 29) ದೊಡ್ಮೆನೆ ಅಭಿಮಾನಿಗಳು ಫಿಲ್ಮ್ ಚೇಂಬರ್‌ಗೆ ಮುತ್ತಿಗೆ ಹಾಕಿದ್ದರು. ದರ್ಶನ್ ಅಭಿಮಾನಿಗಳು ಕೆಟ್ಟ ಪದಗಳನ್ನು ಬಳಸಿ ನಿಂದಿಸುತ್ತಿರುವುದರ ಖಂಡಿಸಿ, ಫಿಲ್ಮ್ ಚೇಂಬರ್ ವಿರುದ್ಧ ಕಿಡಿಕಾರಿದ್ದರು. ದೊಡ್ಡನೆ ಕುಟುಂಬದ ಬಗ್ಗೆ ಮಾನಸಿಕ ಹಲ್ಲೆ ಆಗುತ್ತಿದ್ದರೂ ಯಾಕೆ ಮಾತಾಡುತ್ತಿಲ್ಲ ಎಂದು ಫಿಲ್ಮ್ ಚೇಂಬರ್, ನಿರ್ಮಾಪಕರ ಸಂಘ ಸೇರಿದಂತೆ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
"ಉರಿಸಬೇಕು
ಅಂತಿದ್ರೆ,
ಒಳ್ಳೆ
ಕೆಲಸ
ಮಾಡಿ
ಉರಿಸುತ್ತಲೇ
ಇರ್ತೀವಿ":
ದರ್ಶನ್
ಹೇಳಿಕೆಗೆ
ಅಪ್ಪು
ಫ್ಯಾನ್ಸ್
ತಿರುಗೇಟು!
ಅಪ್ಪು ಅಭಿಮಾನಿಗಳು ಹಾಗೂ ಕನ್ನಡ ಪರಸಂಘಟನೆಗಳು ಫಿಲ್ಮ್ ಚೇಂಬರ್ ಮುಂದೆ ಬೇಡಿಕೆ ಇಟ್ಟಿದೆ. ದರ್ಶನ್ ಅವರನ್ನು ಚೇಂಬರ್‌ಗೆ ಕರೆಸಿ, ಅಭಿಮಾನಿಗಳಿಗೆ ಸಂದೇಶ ಕೊಡಿಸಬೇಕು ಅಂತ ಒತ್ತಡ ಹಾಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

'ದರ್ಶನ್ ಸಂದೇಶ ನೀಡಬೇಕು'
ಫಿಲ್ಮ್ ಚೇಂಬರ್ ಮುಂದೆ ಘೋಷಣೆಗಳನ್ನು ಕೂಡಗಿದ್ದ ಕನ್ನಡ ಪರ ಸಂಘಟನೆಗಳು ಹಾಗೂ ಅಪ್ಪು ಅಭಿಮಾನಿಗಳು ಕಿಡಿಕಾರಿದ್ದರು. ಅಣ್ಣಾವ್ರ ಹಾಗೂ ಪುನೀತ್ ರಾಜ್‌ಕುಮಾರ್ ಅವರ ವಿರುದ್ಧ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಕಿಡಿಕಾರಿದ್ದರು. ಇದೇ ವೇಳೆ ದರ್ಶನ್ ಅವರನ್ನು ಕರೆಸಿ ಅಭಿಮಾನಿಗಳಿಗೆ ಸಂದೇಶ ಕೊಡಿಸಬೇಕು ಅಂತ ಪಟ್ಟು ಹಿಡಿದ್ದರು. "ನಾಲ್ಕು ಜನ ಅವರ ಜೊತೆಯಲ್ಲಿಯೇ ಇರೋರು ಇದ್ದಾರೆ. ಈಗೇನು ಏನು ಮಾಡಬೇಕು ಅಂದ್ರೆ, ದರ್ಶನ್ ಅವರನ್ನು ಇಲ್ಲಿಗೆ ಕರೆಸಿ, ಅಭಿಮಾನಿಗಳಿಗೆ ಅವರ ಮೂಲಕ ಸಂದೇಶ ಕೊಡಿಸಬೇಕು ಅಷ್ಟೇ. ಕ್ಷಮಾಪಣೆ ಕೇಳಿ ಅಂತಲ್ಲ." ಎಂದು ಎನ್ ಆರ್ ರಮೇಶ್ ನಿನ್ನೆ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದಾರೆ.

'ದರ್ಶನ್ ಅವರೊಂದಿಗೆ ಮಾತಾಡಲು ಯತ್ನಿಸುತ್ತೇವೆ'
ಅಪ್ಪು ಅಭಿಮಾನಿಗಳ ಬೇಡಿಕೆಯನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಿದೆ. ದರ್ಶನ್ ಅವರನ್ನು ಸಂಪರ್ಕಿಸಿ, ಚರ್ಚೆ ಮಾಡಲಾಗುತ್ತೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಮಾಹಿತಿ ನೀಡಿದ್ದಾರೆ. " ಪುನೀತ್ ರಾಜ್‌ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು. ದರ್ಶನ್ ಅವರನ್ನು ಫಿಲ್ಮ್ ಚೇಂಬರ್‌ಗೆ ಕರೆಸಿ, ಅವರ ಫ್ಯಾನ್‌ಗೆ ಹೀಗೆ ಮಾಡದೆ ಇರುವಂತೆ ಹೇಳಿಕೆ ಕೊಡಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ದರ್ಶನ್ ಅವರೊಂದಿಗೆ ಮಾತನಾಡಲು ಯತ್ನಿಸುತ್ತೇವೆ. ಹಾಗೇ ಗೃಹ ಮಂತ್ರಿಗಳೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡವನ್ನು ತರುತ್ತೇವೆ." ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಹೇಳಿದ್ದಾರೆ.

ಒಬ್ಬೊಬ್ಬರ ಮೇಲೆ 50 ಕೇಸ್
ನಿನ್ನೆ (ಡಿಸೆಂಬರ್ 29) ಕನ್ನಡಪರ ಸಂಘಟನೆಗಳು ದೊಡ್ಮೆನೆ ಕುಟುಂಬದ ಮೇಲೆ ನಡೆಯುತ್ತಿರುವ ಮಾನಸಿಕ ಹಲ್ಲೆಯನ್ನು ಖಂಡಿಸಿದ್ದಾರೆ. ಅಲ್ಲದೆ ಇಂತಹ ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. "ಯಾರು ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಅವರ ಅಪ್ಪ ಅಮ್ಮ ಮಾಡಿರುವಷ್ಟು ಆಸ್ತಿ ಕರಗಬೇಕು ಅಷ್ಟು ಕೇಸ್ ಫೈಲ್ ಮಾಡಿದ್ದೇವೆ. ಹುಬ್ಬಳ್ಳಿ, ಮೈಸೂರು, ಬೆಂಗಳೂರು, ಮಂಗಳೂರಿನ ಮೇಲೆ ಒಬ್ಬೊಬ್ಬರ ಮೇಲೆ 50ಕ್ಕೂ ಹೆಚ್ಚು ಕೇಸ್ ಅನ್ನು ಹಾಕುತ್ತಿದ್ದೇವೆ." ಎಂದು ಎನ್ ಆರ್ ರಮೇಶ್ ಫಿಲ್ಮ್ ಚೇಂಬರ್ ಸದಸ್ಯರ ಮುಂದೆ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ಮುಂದಿನ ಕಥೆಯೇನು?
ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ಮಾತಿನ ಫೈಟ್ ಶುರುವಾಗಿದೆ. ಇದು ಇಂದಿಗೂ ನಡೆಯುತ್ತಲೇ ಇದೆ. ಉದ್ಯಮದ ದೃಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದಲ್ಲ. ಈ ಕಾರಣಕ್ಕೆ ಫಿಲ್ಮ್ ಚೇಂಬರ್ ಮುಂದೆ ನಿಂತು ಈ ಪ್ರಕರಣಕ್ಕೆ ಅಂತ್ಯ ಹಾಡಲೇಬೇಕಿದೆ. ಸದ್ಯ ಫಿಲ್ಮ್ ಚೇಂಬರ್ ಮುಂದೆ ಇಡುವ ಹೆಜ್ಜೆಯ ಮೇಲೆ ಎಲ್ಲವೂ ನಿರ್ಧಾರಿತವಾಗಿದೆ.