ಅದೊಂದು ತಪ್ಪು ಮಾಡಬಾರದಿತ್ತು ಪುನೀತ್ ರಾಜ್‌ಕುಮಾರ್; ವೈದ್ಯರ ಮಾತು ಕೇಳಬೇಕಿತ್ತು ಅಪ್ಪು

ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳಾಗಿವೆ. ಪವರ್‌ ಸ್ಟಾರ್ ನಿಜ ಜೀವನದಲ್ಲೂ ಪವರ್‌ಸ್ಟಾರ್ ಆಗಿದ್ದವರೇ. ಕೇವಲ ಸಿನಿಮಾ ಅಷ್ಟೇ ಅಲ್ಲದೆ ರಿಯಲ್‌ ಲೈಫ್‌ನಲ್ಲೂ ಹೀರೋ ಆಗಿ ಬದುಕಿದ್ದ ಅಪ್ಪು ಈಗ ನೆನಪು ಮಾತ್ರ. ಅವರ ನೆನಪಿನಲ್ಲೇ ಅವರ ಸಮಾಜಮುಖಿ ಕೆಲಸಗಳಲ್ಲಿ ಅವರ ಅಭಿಮಾನಿಗಳು ಭಾಗಿಯಾಗುತ್ತಿದ್ದಾರೆ.

ಬದುಕಿದ್ದಾಗ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮಾಡಿದ ಸಮಾಜಮುಖಿ ಕೆಲಸಗಳು ಯಾರಿಗೂ ಗೊತ್ತಿರಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಅಪ್ಪು ನೋಡಿಕೊಂಡಿದ್ದರು. ಅವರು ಅಗಲಿದಾಗಲೇ ಪುನೀತ್ ರಾಜ್‌ಕುಮಾರ್ ಒಳ್ಳೆಯ ಕೆಲಸಗಳು ಬೆಳಕಿಗೆ ಬಂದಿದ್ದವು. ಈ ಮಧ್ಯೆ ಅಷ್ಟೊಂದು ಫಿಟ್ ಆಗಿದ್ದ ನಟ ದಿಢೀರೇ ಕಣ್ಮರೆಯಾದರೆ ಅವರ ಅಭಿಮಾನಿಗಳಿಗೆ ಹೇಗಾಗಬೇಡ. ಆಕಾಶವೇ ಕಳಚಿ ಬಿದ್ದಂತೆ ಆಗಿತ್ತು.

After Puneeth Rajkumar death doctors revealed he should not have done one big mistake

ಪುನೀತ್ ರಾಜ್‌ಕುಮಾರ್ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಏನೇ ತಪ್ಪಿದರೂ ವರ್ಕ್‌ಔಟ್ ಅನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಇವರ ಫಿಟ್ನೆಸ್‌ ಅನ್ನು ಅದೆಷ್ಟೋ ಮಂದಿ ಯುವಕರು ಸ್ಪೂರ್ತಿಯಾಗಿ ಪಡೆದು ಫಾಲೋ ಮಾಡುತ್ತಿದ್ದರು. ಅಪ್ಪು ಅಗಲಿದಾಗ, ಅದೊಂದು ತಪ್ಪು ಮಾಡಬಾರದಿತ್ತು ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಮಾಧ್ಯಮಗಳ ಜೊತೆ ಮಾತಾಡುವಾಗ ಅಪ್ಪು ಮಾಡಿದ ತಪ್ಪನ್ನು ಹೈಲೈಟ್ ಮಾಡಿದ್ದರು. ಅದೇನದು ಅಂತ ತಿಳಿಯಲು ಮುಂದೆ ಓದಿ.

ಪುನೀತ್ ರಾಜ್‌ಕುಮಾರ್ ಅಗಲುವುದಕ್ಕೂ ಮುನ್ನ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುನೀತ್ ರಾಜ್‌ಕುಮಾರ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಅಗಲುವ ಮೂರು ವಾರ ಹಿಂದೆ ಫಿಸಿಯೋಥೆರಪಿಸ್ಟ್ ಅನ್ನು ಭೇಟಿ ಮಾಡಿದ್ದರು. ಅಪ್ಪು ಬೆನ್ನು ನೋವು ಹಾಗೂ ಮಸಲ್ ಕ್ಯಾಚ್ (ಮೀನಖಂಡದ) ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಮಲ್ಲೇಶ್ವರಂನಲ್ಲಿ ಫಿಸಿಯೋಥೆರಪಿ ಪಡೆಯುತ್ತಿದ್ದರು.

ಪುನೀತ್ ರಾಜ್‌ಕುಮಾರ್ 'ಯುವರತ್ನ' ಸಿನಿಮಾ ಮಾಡುವ ಸಂದರ್ಭದಲ್ಲಿ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಹೀಗಾಗಿ ಅಪ್ಪು ಮಲ್ಲೇಶ್ವರಂನಲ್ಲಿರುವ ಖ್ಯಾತ ಫಿಸಿಯೋಥೆರಪಿಸ್ಟ್ ಡಾ.ಪಳನಿವೇಲ್ ಅವರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆ ವೇಳೆ ಪುನೀತ್ ರಾಜ್‌ಕುಮಾರ್ ಅವರಿಗೆ ವೈದ್ಯರು ಚಿಕಿತ್ಸೆ ನೀಡಿ ಕೆಲವು ಸಲಹೆಗಳನ್ನು ನೀಡಿದ್ದರು. ಅದನ್ನು ಪುನೀತ್ ರಾಜ್‌ಕುಮಾರ್‌ ಜೊತೆ ಚರ್ಚೆ ಕೂಡ ಮಾಡಿದ್ದರು.

After Puneeth Rajkumar death doctors revealed he should not have done one big mistake

ಅಪ್ಪುಗೆ ಬೆನ್ನು ನೋವಿಗೆ ಚಿಕಿತ್ಸೆಯನ್ನು ನೀಡುವಾಗ ವೈದ್ಯರು ಬೆನ್ನು ನೋವು ಸರಿ ಹೋಗುವವರೆಗೂ ಡ್ಯಾನ್ಸ್, ಫೈಟ್ ಮಾಡಬೇಡಿ ಎಂದು ಹೇಳಿದ್ದರು. ಆದರೆ, ಪುನೀತ್ ರಾಜ್‌ಕುಮಾರ್ ಅದನ್ನು ಕೇಳಿರಲಿಲ್ಲ. ಸಿನಿಮಾ ಶೂಟಿಂಗ್ ಮಾಡುವಾಗ ಡ್ಯಾನ್ಸ್, ಫೈಟ್ ಮಾಡಲ್ಲ ಎಂದು ಹೇಳಿದರೆ ಹೇಗೆ? ಶೂಟಿಂಗ್ ಸ್ಪಾಟ್‌ಗೆ ತೆರಳಿದಾಗ ಅಲ್ಲಿ ಇದೆಲ್ಲ ಕೆಲಸವನ್ನು ಮಾಡಬೇಕಾಗುತ್ತೆ ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರು ಎಂದು ಡಾ. ಪಳನಿವೇಲ್ ನ್ಯೂಸ್‌ 18 ಕನ್ನಡ ಜೊತೆ ವಿಷಯ ಹಂಚಿಕೊಂಡಿದ್ದರು.

ಅಪ್ಪು ಇದೊಂದು ತಪ್ಪು ಮಾಡಬಾರದಿತ್ತು. ಬೆನ್ನು ನೋವು ಸರಿ ಹೋಗುವವರೆಗೂ ಡ್ಯಾನ್ಸ್, ವರ್ಕ್‌ಔಟ್ ಮಾಡದೆ ರೆಸ್ಟ್ ಮಾಡಬೇಕಿತ್ತು ಎಂದು ಅಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರು. ಅದು ಬಿಟ್ಟರೆ ಅಪ್ಪು ಆರೋಗ್ಯವಂತ ವ್ಯಕ್ತಿಯಾಗಿದ್ದರು. ಬೆನ್ನು ನೋವು ಹಾಗೂ ಮಸಲ್ ಕ್ಯಾಚ್ ಬಿಟ್ಟರೆ ಆರೊಗ್ಯ ಸಮಸ್ಯೆಯಿರಲಿಲ್ಲ. ಆದರೆ, ದಿಢೀರನೇ ಹೃದಯಾಘಾತ ಆಗಿದ್ದು ವೈದ್ಯರಿಗೂ ಕೂಡ ಶಾಕ್ ಆಗಿತ್ತು.

More from Filmibeat

English summary
After Puneeth Rajkumar death doctors revealed he should not have done one big mistake. What was that
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X