ಅಪ್ಪು ಅಗಲಿ 8 ತಿಂಗಳ ಬಳಿಕ ಶಿವಣ್ಣನ ಸಿನಿಮಾ ರಿಲೀಸ್ : ದೊಡ್ಮನೆ ಫ್ಯಾನ್ಸ್‌ಗೆ ಸರ್ಪ್ರೈಸ್!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 7 ತಿಂಗಳಾಗಿವೆ. ಇನ್ನೂ ಅಭಿಮಾನಿಗಳಲ್ಲಿರುವ ಆ ದು:ಖ ಕಮ್ಮಿಯಾಗಿಲ್ಲ. ದೊಡ್ಡನೆ ಹೀರೊಗಳಲ್ಲಿ ಪವರ್‌ಸ್ಟಾರ್ ಫ್ಯಾನ್ಸ್ ಅಪ್ಪು ಕಾಣುತ್ತಿದ್ದಾರೆ. 'ಜೇಮ್ಸ್' ಸಿನಿಮಾ ಬಳಿಕೆ ದೊಡ್ಮನೆ ಕುಟುಂಬದಿಂದ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಈ ಕಾರಣಕ್ಕೆ ಅಣ್ಣಾವ್ರ ಕುಟುಂಬದ ಅಭಿಮಾನಿಗಳು ನಿರ್ಮಾಪಕರು ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ.
ಶಿವರಾಜ್‌ಕುಮಾರ್ ಅಭಿನಯದ 123ನೇ ಸಿನಿಮಾ 'ಬೈರಾಗಿ'. ಈಗಾಗಲೇ ಈ ಸಿನಿಮಾದ ಟೀಸರ್, ಶಿವಣ್ಣನ ಲುಕ್‌ನಿಂದ ಕುತೂಹಲವಂತೂ ದುಪ್ಪಟ್ಟಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಅಗಲಿ 8 ತಿಂಗಳಾದ ಮೇಲೆ ಶಿವಣ್ಣ ಅಭಿನಯದ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಅಭಿಮಾನಿಗಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನೂ ಸ್ಯಾಂಡಲ್‌ವುಡ್ ಎದುರು ನೋಡುತ್ತಿದೆ.
'ಬೈರಾಗಿ' ಸಿನಿಮಾ ಬಗ್ಗೆ ಸ್ವತ: ಶಿವರಾಜ್‌ಕುಮಾರ್ ಕೇರ್ ತೆಗೆದುಕೊಂಡಿದ್ದಾರೆ. ಸಿನಿಮಾ ಪ್ರಚಾರದ ವಿಷಯದಲ್ಲಿ ತಾವೇ ಮುಂದೆ ನಿಂತು ಸಿನಿಮಾದ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನೊಂದು ಕಡೆ ಅಪ್ಪು, ಶಿವಣ್ಣ ಹಾಗೂ ಅಣ್ಣಾವ್ರ ಅಭಿಮಾನಿಗಳಿಗಾಗಿ ನಿರ್ಮಾಪಕರು ಕೂಡ ಸರ್ಪ್ರೈಸ್ ನೀಡಲು ಮುಂದಾಗಿದ್ದಾರೆ.
Recommended Video


ಶಿವಣ್ಣನ 'ಬೈರಾಗಿ' ಬಿಡುಗಡೆಗೆ ರೆಡಿ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೊಸ ಸಿನಿಮಾ 'ಬೈರಾಗಿ' ರಿಲೀಸ್‌ಗೆ ರೆಡಿಯಾಗಿದೆ. ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೂ ಮುನ್ನವೇ ಸಿನಿಮಾ ಬಿಡುಗಡೆಯಾಗಲಿದೆ. ಅಪ್ಪು ಅಗಲಿದ 8 ತಿಂಗಳ ಬಳಿಕ ದೊಡ್ಮನೆ ಕುಟುಂಬದ ಒಂದು ಸಿನಿಮಾ ರಿಲೀಸ್ ಆಗುತ್ತಿದೆ. ನೋವನ್ನೆಲ್ಲಾ ಒಳಗಿಟ್ಟುಕೊಂಡು ಶಿವಣ್ಣ ಮತ್ತೆ ತಮ್ಮ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ. ಶಿವಣ್ಣನಿಗೆ ಡಾಲಿ ಧನಂಜಯ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್. ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದೊಡ್ಮೆನ ಫ್ಯಾನ್ಸ್‌ಗೆ ಸರ್ಪ್ರೈಸ್
ಅಪ್ಪು ಕಳೆದುಕೊಂಡು ದು:ಖಿತರಾಗಿರುವ ದೊಡ್ಮನೆ ಫ್ಯಾನ್ಸ್‌ಗೆ 'ಬೈರಾಗಿ' ನಿರ್ಮಾಪಕ ಕೃಷ್ಣ ಸಾರ್ಥಕ್ ಸರ್ಪ್ರೈಸ್ ನೀಡುತ್ತಿದ್ದಾರೆ. ಶಿವಣ್ಣ ಅಭಿನಯದ 123ನೇ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಮಾಡುವ ಮೂಲಕ ನೊಂದ ಅಭಿಮಾನಿಗಳಿಗೆ ಖುಷಿ ಪಡಿಸುವುದಕ್ಕೆ ಮುಂದಾಗಿದ್ದಾರೆ. ಶೀಘ್ರದಲ್ಲಿಯೇ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತೆ? ಹೇಗೆ ರಿಲೀಸ್ ಆಗುತ್ತೆ? ಅನ್ನುವ ಸ್ವರೂಪ ಸಿಗಲಿದೆ.

'ಭಜರಂಗಿ 2' ಬಳಿಕ 'ಬೈರಾಗಿ' ರಿಲೀಸ್
ಶಿವರಾಜ್‌ಕುಮಾರ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಭಜರಂಗಿ 2' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಶಿವಣ್ಣನ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಹಾಕಲಾಗಿತ್ತು. ಫ್ಯಾನ್ಸ್ ಶೋ ಮುಗಿಸಿ ಬಂದಿದ್ದ ಶಿವಣ್ಣನಿಗೆ ಸಹೋದರ ಅಪ್ಪು ನಿಧನದ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಆ ದಿನ ಸಿನಿಮಾ ಶೋವನ್ನೇ ರದ್ದು ಮಾಡಲಾಗಿತ್ತು. ಬಳಿಕ ಶಿವಣ್ಣ ನೋವಿನಲ್ಲಿಯೂ ಅಭಿಮಾನಿಗಳಿಗೆ ಥಿಯೇಟರ್‌ಗೆ ಬಂದು ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.

ನೋವು ಮರೆಸುತ್ತಾ 'ಬೈರಾಗಿ'?
ಶಿವಣ್ಣನ 'ಬೈರಾಗಿ' ಸಿನಿಮಾದಲ್ಲಿ ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಅವತಾರ ದೊಡ್ಮನೆ ಅಭಿಮಾನಿಗಳಿಗೆ ಖುಷಿ ಕೊಡುತ್ತೆ ಅನ್ನುವ ಮಾತು ಕೇಳಿ ಬರುತ್ತಿದೆ. ನೋವಿನಲ್ಲಿರುವ ಶಿವಣ್ಣ ಹಾಗೂ ಅಪ್ಪು ಫ್ಯಾನ್ಸ್ ನೋವನ್ನು 'ಬೈರಾಗಿ' ಸಿನಿಮಾ ಮರೆಸುತ್ತಾ? 'ಭಜರಂಗಿ 2' ನಂತೆ ಶಿವಣ್ಣ 'ಬೈರಾಗಿ'ಯಾಗಿ ಗೆಲ್ಲುತ್ತಾರಾ? ಅನ್ನುವ ಪ್ರಶ್ನೆ ಎದುರಾಗಿದೆ.


Click it and Unblock the Notifications











