Darshan: "ರಚಿತಾ ಬಳಿಕ ಆ ಮಟ್ಟಕ್ಕೆ ಬೆಳೆಯೋ ನಟಿ ಆರಾಧನಾ".. ಮಾಲಾಶ್ರೀ ಪುತ್ರಿ ಓನ್ ಟೇಕ್ ನಟಿ ಎಂದು ದರ್ಶನ್!
ಕಳೆದ ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಮೂರು ವರ್ಷಗಳ ಬಳಿಕ ಮಾಧ್ಯಮಗಳ ಜೊತೆಗೆ ಸಂಧಾನ ಮಾಡಿಕೊಂಡು ಪ್ರತ್ಯಕ್ಷ ಆಗಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ 'ಕಾಟೇರ' ಸಿನಿಮಾದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮಗೊಂದಿಗೆ ತುಂಬಾ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಸಿನಿಮಾ ಶೂಟಿಂಗ್ ಅನುಭವ, ತಮ್ಮೊಂದಿಗೆ ನಟಿಸಿದ ಕಲಾವಿದರ ಬಗ್ಗೆನೂ ಮಾತಾಡಿದ್ದಾರೆ. ಹಾಗೇ ಈ ಸಿನಿಮಾಗೆ ಎಷ್ಟು ದಿನ ಕಾಲ್‌ಶೀಟ್ ಕೊಟ್ಟಿದ್ದೇನೆ ಎಂಬುದನ್ನು ಓಪನ್ ಆಗಿ ಹೇಳಿದ್ದಾರೆ.

ಇದೇ ವೇಳೆ 'ಕಾಟೇರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರೋ ಮಾಲಾಶ್ರೀ ಪುತ್ರಿ ಆರಾಧನಾರನ್ನು ಹಾಡಿ ಹೊಗಳಿದ್ದಾರೆ. ಮೊದಲ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದು ರಚಿತಾ ರಾಮ್‌ಗೆ ಹೋಲಿಕೆ ಮಾಡಿದ್ದಾರೆ.
'ಕಾಟೇರ' ದರ್ಶನ್ ಶೂಟ್ ಮಾಡಿದ್ದೆಷ್ಟು ದಿನ?
ದರ್ಶನ್ ಇನ್ನೂ 85 ದಿನ ಕಾಲ್‌ಶೀಟ್ ಪಾಲಿಸಿಯನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ತಂಡ ಎಷ್ಟೇ ದಿನ ಶೂಟ್ ಮಾಡಿದರೂ, ತಾನು ಕೊಡೋದೇ 85 ದಿನ ಕಾಲ್‌ಶೀಟ್ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. "ಎಲ್ಲರೂ ಕೇಳ್ತಾನೇ ಇದ್ದರು 100 ದಿನ ಅಂತ. ಅವತ್ತಿಂದ ಇವತ್ತಿನವರೆಗೂ ನಾನು ರೂಲ್ಸ್ ಮಾಡ್ತಾನೇ ಇದ್ದೀನಿ. ನೀಟಾಗಿ 85 ದಿನ ಅಷ್ಟೇನೆ. ಯಾಕಂದ್ರೆ, ಇವತ್ತು ನಂದು 71ನೇ ದಿನ. 30 ದಿನ ಅವರ ಕೆಲಸ ಇರುತ್ತೆ. ಇನ್ನು 5 ಸಾಂಗ್ ಮೂರು ಮೂರು ದಿನ ಅಂತ ಲೆಕ್ಕ ಹಾಕಿಕೊಂಡರೂ 15 ದಿನ ಆಗುತ್ತೆ. ಕರೆಕ್ಟ್ ಆಗಿ 85 ದಿನಕ್ಕೆ ನನ್ನ ಕೆಲಸ ಮುಗಿಯುತ್ತೆ."

ಕುಮಾರ್ ಗೋವಿಂದ್ ಸಿನಿಮಾದಲ್ಲಿ ಲೈಟ್ ಬಾಯ್
'ಕಾಟೇರ' ಸಿನಿಮಾದಲ್ಲಿ ಕುಮಾರ್ ಗೋವಿಂದ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ವೇದಿಕೆ ಮೇಲೆ ಕುಮಾರ್ ಗೋವಿಂದ್ ಕೂಡ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಸಿನಿಮಾ ಲೈಟ್ ಬಾಯ್ ಆಗಿದ್ದೆ ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ. "ಕುಮಾರ್ ಗೋವಿಂದ್ ಅವರು ಚಿಕ್ಕ ಸಿನಿಮಾ ಮಾಡುವಾಗ ನಾನು ಲೈಟ್ ಬಾಯ್ ನಾನು.. ಗೌರಿ ಶಂಕರ್ ಕ್ಯಾಮರಾಮ್ಯಾನ್ ಅದಕ್ಕೆ. ಆಗ ನಾನು ಲೈಟ್ ಬಾಯ್ ಆಗಿದ್ದೆ." ಎಂದಿದ್ದಾರೆ.
ರಚಿತಾ ರಾಮ್‌ರಂತೆ ಆರಾಧನಾ ಎಂದ ದರ್ಶನ್
ದರ್ಶನ್ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾಟೇರ ಪತ್ರಿಕಾಗೋಷ್ಠಿಯಲ್ಲಿ ದರ್ಶನ್ ಆರಾಧನಾ ನಟನೆಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಹೋಲಿಕೆ ಮಾಡಿದ್ದಾರೆ. ದರ್ಶನ್ ಜೊತೆ ರಕ್ಷಿತಾ ಹಾಗೂ ರಚಿತಾ ರಾಮ್ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ರಚಿತಾ ರಾಮ್, ದರ್ಶನ್ ಸಿನಿಮಾದಿಂದಲ್ಲೇ ಎಂಟ್ರಿ ಕೊಟ್ಟಿದ್ದರು. ಹೀಗಾಗಿ ರಚಿತಾ ರಾಮ್ ಸ್ಟ್ಯಾಂಡರ್ಡ್‌ಗೆ ಆರಾಧನಾ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.
ಆರಾಧನಾ ಬಗ್ಗೆ ದರ್ಶನ್ ಹೇಳಿದ್ದೇನು?
"ರಕ್ಷಿತಾ ಅವರು ನನ್ನ ಜೊತೆ ನಟಿಸುವಾಗ ತುಂಬಾ ಸಿನಿಮಾ ಮಾಡಿದ್ದರು. ಆದರೆ, ನನ್ನ ಜೊತೆ ಹೊಸದಾಗಿ ಮೊದಲು ಸಿನಿಮಾ ಮಾಡಿದ್ದು ರಚಿತಾ ರಾಮ್. ಅವ್ರೀಗ 10 ವರ್ಷ ಸಿನಿಮಾರಂಗದಲ್ಲಿ ಯಶಸ್ವಿಯಾಗಿದ್ದಾರೆ. ಆ ಲೆವೆಲ್‌ಗೆ ನಮ್ಮ ಹೀರೊಯಿನ್ (ಆರಾಧನಾ) ನಿಂತುಕೊಳ್ಳುತ್ತಾರೆ. ಇಲ್ಲಿವರೆಗೂ ನಾನು ಕೆಲಸ ಮಾಡಿದ್ದೇನೆ. ಅವರು ಒನ್ ಟೇಕ್ ಆರ್ಟಿಸ್ಟ್. ನಾನು ಹೇಳಿದ್ದೆ, ಬೆರಳು ಕೊಟ್ಟರೆ ಹಸ್ತ ನುಂಗಿಕೊಳ್ಳುತ್ತಾರೆ ಅಂತ." ಆರಾಧನಾರನ್ನು ಹಾಡಿ ಹೊಗಳಿದ್ದಾರೆ.


Click it and Unblock the Notifications











