ರಿಷಬ್ ಶೆಟ್ಟಿ ಆಯ್ತು.. ಪವನ್, ಶೈನ್ ಆಯ್ತು.. ಮತ್ತೊಂದು ಸ್ಟಾರ್ ನಟನ ಎಂಟ್ರಿ? ಯಾರವರು?

ಪ್ಯಾನ್ ಇಂಡಿಯಾ ಸಿನಿಮಾ ಅಬ್ಬರಗಳ ಮಧ್ಯೆ ಹೊಸಬರ ಸಿನಿಮಾಗಳು ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಇನ್ನೊಂದ್ಕಡೆ ಚುನಾವಣೆ, ಐಪಿಎಲ್‌ ಅಂತ ಸೈಲೆಂಟ್‌ ಆಗಿದ್ದ ಸಿನಿಮಾಗಳೂ ಕೂಡ ನಿಧಾನವಾಗಿ ಆಚೆ ಬರೋಕೆ ಮನಸ್ಸು ಮಾಡುತ್ತಿವೆ.

ಇಲ್ಲೊಂದು ಸಿನಿಮಾ ಅನೌನ್ಸ್ ಆದ ದಿನದಿಂದ ಸದ್ದು ಮಾಡುವುದಕ್ಕೆ ಶುರುಮಾಡಿದೆ. ಬಹುತೇಕ ಹೊಸಬರೇ ಸೇರಿಕೊಂಡು ಸಿನಿಮಾ ಮಾಡುತ್ತಿದ್ದರೂ, ಇವರ ಹವಾವೇನು ಕಮ್ಮಿಯಿಲ್ಲ. ಪೋಸ್ಟರ್, ಟೀಸರ್ ಬಿಟ್ಟು ಸ್ಯಾಂಡಲ್‌ವುಡ್ ಮಂದಿಗೆ ಹೊಸ ಭರವಸೆ ಮೂಡಿಸಿವೆ.

After Rishab Shetty, Pawan Kumar, Diganth entered Hostel Hudugaru Bekagiddare Movie

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪೋಸ್ಟರ್ ರಿಲೀಸ್ ಮಾಡಿದ್ದಲ್ಲಿಂದ ಇಲ್ಲಿವರೆಗೂ ಹೊಸ ಹೊಸ ಕಂಡೆಂಟ್ ಕೊಟ್ಟು ಕಿಕ್ ಕೊಡುತ್ತಲೇ ಇದೆ. ಈಗ ಮತ್ತೊಂದು ಸುದ್ದಿಯೊಂದಿಯೊಂದಿಗೆ ಸದ್ದು ಮಾಡುವುದಕ್ಕೆ ಹೊರಟಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಹಾಸ್ಟೆಲ್ ಹುಡುಗರ ಜೊತೆ ರಿಷಬ್, ಪವನ್, ಶೈನ್

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಶೀರ್ಷಿಕೆನೇ ಇದೊಂದು ಯೂತ್ ಸಿನಿಮಾ ಅನ್ನೋದನ್ನು ಪ್ರೂವ್ ಮಾಡುತ್ತೆ. ಹೊಸಬರೇ ಸೇರಿಕೊಂಡಿರುವ ಈ ಸಿನಿಮಾ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ವಿಶೇಷ ಅಂದ್ರೆ, ಈ ಸಿನಿಮಾಗೆ ಸ್ಯಾಂಡಲ್‌ವುಡ್‌ನ ಸೀನಿಯರ್‌ಗಳು ಸಾಥ್ ಕೊಟ್ಟಿದ್ದಾರೆ.

'ಕಾಂತಾರ'ದಂತಹ ಮೆಗಾ ಹಿಟ್ ಕೊಟ್ಟ ಬಳಿಕ ರಿಷನ್ ಶೆಟ್ಟಿ ಇದೇ ಸಿನಿಮಾದಲ್ಲಿ ದರ್ಶನ ಕೊಡುತ್ತಿದ್ದಾರೆ. ಹಾಸ್ಟಲ್‌ನ ಓಲ್ಡ್ ಸ್ಟುಡೆಂಟ್ ಆಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಲೂಸಿಯಾ ಪವನ್ ಕುಮಾರ್ ಹಾಗೂ ಶೈನ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಈ ಗ್ಯಾಪ್‌ನಲ್ಲೇ ಹಾಸ್ಟೆಲ್ ಹುಡುಗರು ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ.

After Rishab Shetty, Pawan Kumar, Diganth entered Hostel Hudugaru Bekagiddare Movie

ಹಾಸ್ಟೆಲ್ ಹುಡುಗರ ಜೊತೆ ದೂದ್ ಪೇಡಾ

ರಿಷಬ್ ಶೆಟ್ಟಿ ಆಯ್ತು.. ಪವನ್ ಕುಮಾರ್ ಆಯ್ತು.. ಶೈನ್‌ ಶೆಟ್ಟಿನೂ ಆಯ್ತು.. ಈಗ ಹಾಸ್ಟೆಲ್ ಹುಡುಗರು ಸಿನಿಮಾಗೆ ಹೊಸ ಸೇರ್ಪಡೆ ದೂದ್‌ ಪೇಡಾ ದಿಗಂತ್. ಹೌದು, ದಿಗಂತ್ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ವಿಷಯ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ದಿಗಂತ್ ಪಾತ್ರವೇನು? ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಾ? ಇಲ್ಲಾ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಾರಾ? ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಆದರೆ, ದಿಗಂತ್ ಈ ಯುವಕರ ತಂಡವನ್ನು ಸೇರಿಕೊಂಡಿದ್ದು ಮಾತ್ರ ಅಷ್ಟೇ ಸತ್ಯ.

ಹಾಸ್ಟೆಲ್ ಹುಡುಗರಿಗೆ ದಿಗ್ಗಜರ ಬೆಂಬಲ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ದಿಗ್ಗಜರೇ ಸಾಥ್ ಕೊಟ್ಟಿದ್ದಾರೆ. ಆರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪೋಸ್ಟರ್‌ ಲಾಂಚ್‌ನಿಂದ ಹಿಡಿದು ಈ ತಂಡದ ಜೊತೆಯಲ್ಲಿ ಇದ್ದರು. ಬಳಿಕ ರಕ್ಷಿತ್ ಶೆಟ್ಟಿ ಕೂಡ ಪ್ರೋಮೊದಲ್ಲಿ ಭಾಗಿಯಾಗಿದ್ದರು.

ಮೋಹಕ ತಾರೆ ರಮ್ಯಾ ಕೂಡ ಪ್ರೋಮೊ ವಿಡಿಯೋದಲ್ಲಿ ನಟಿಸಿದ್ದರು. ಜೊತೆ ಅಜನೀಶ್ ಬಿ ಲೋಕನಾಥ್ ಟ್ಯೂನ್‌ಗಳನ್ನು ಹಾಕುತ್ತಿದ್ದು, ಈಗಾಗಲೇ ರಿಲೀಸ್ ಆಗಿರೋ ಒಂದು ಹಾಡು ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ದಿಗಂತ್ ಕೂಡ ಜೊತೆಯಾಗಿರೋದು ಹಾಸ್ಟೆಲ್ ಹುಡುಗರಿಗೆ ಮತ್ತಷ್ಟು ಬಲ ಬಂದಂತಾಗಿದೆ.

More from Filmibeat

English summary
After Rishab Shetty, Pawan Kumar, Diganth entered Hostel Hudugaru Bekagiddare Movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X