"ಹಂದಿಗಳ ಹತ್ರ ಬೈಸಿಕೊಳ್ಳಂಗ್ ಆಗೋಯ್ತಲ್ಲ ಗುರು.. ನಿವೃತ್ತಿ ತೆಗೊಳ್ಳಿ ಪ್ಲೀಸ್";'ಕೆಡಿ' ಪ್ರೇಮ್ ವಿರುದ್ಧ ಆಕ್ರೋಶ

ಜೋಗಿ ಪ್ರೇಮ್ ನಿರ್ದೇಶನ 'ಕೆಡಿ ದಿ ಡೆವಿಲ್' ಬಿಡುಗಡೆಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಬಾಲಿವುಡ್‌ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಹಾಗೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಜೋಗಿ ಪ್ರೇಮ್ ಸಿನಿಮಾದ ಹಾಡುಗಳು ಕ್ರೇಜ್ ಅನ್ನೇ ಹುಟ್ಟಾಕುತ್ತವೆ. ಅವರು ನಿರ್ದೇಶಿಸುವ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷವಾದ ಕಾಳಜಿ ಇರುತ್ತೆ. ಆದರೆ, ಇದ್ಯಾಕೋ ಮೊದಲ ಬಾರಿಗೆ ಗಡಿರೇಖೆಯನ್ನು ದಾಟಿದಂತೆ ಬಾಸವಾಗುತ್ತಿದೆ. 'ಕೆಡಿ' ಸಿನಿಮಾದ ನಾಲ್ಕನೇ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ "ಸರಸೆ ನಿನ್ನ ಸೆರಗ.." ಹಿಂದಿ ವರ್ಷನ್‌ಗೆ ವಿರೋಧ ವ್ಯಕ್ತವಾಗುತ್ತಿದೆ.

After Sarse Ninna seraga song from KD The Devil movie Jogi Prem heavy trolling

'ಕೆಡಿ ದಿ ಡೆವಿಲ್' ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಜೋಗಿ ಪ್ರೇಮ್ ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಹಾಡುಗಳನ್ನು ತೀರಾ ಕಮರ್ಷಿಯಲ್ ಮಾಡುವುದಕ್ಕೆ ಹೋಗಿ ಜನರ ಆಕ್ರೋಶವನ್ನು ಎದುರಿಸಬೇಕಾಗಿದೆ. ಸಿನಿಮಾದ ಸಾಹಿತ್ಯ ಹಾಗೂ ನಟಿ ನೂರಾ ಫತೇಹಿಯ ಕಾಸ್ಟ್ಯೂಮ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಜೋಗಿ ಪ್ರೇಮ್‌ಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಹಾಡಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜನರು ಏನು ಹೇಳುತ್ತಿದ್ದಾರೆ? ಅಂತ ತಿಳಿಯುವುದಕ್ಕೆ ಮುಂದೆ ಓದಿ.

"ಹಂದಿಗಳ ಹತ್ರ ಬೈಸಿಕೊಳ್ಳಂಗ್ ಆಗೋಯ್ತಲ್ಲ"

"ಹಂದಿಗಳ ಹತ್ರ ಬೈಸಿಕೊಳ್ಳಂಗ್ ಆಗೋಯ್ತಲ್ಲ ಗುರು ನಮ್ ಕತೆ. #KDTheDevil ನಿಮಗೆ ಸಿನಿಮಾ ಮಾಡಕ್ ಬರಲ್ಲ ಅಂದ್ರೆ ಹೆಂಗಾದ್ರೂ ತೋಟ ಇದೆ. ಆರಾಮ ನೋಡಿಕೊಂಡು ಇರಪ್ಪ ನಿಮ್ಗಳಿಂದ ಇಡೀ ಕನ್ನಡ ಚಿತ್ರರಂಗದ ಮರ್ಯಾದೆ ತೆಗಿಬೇಡಿ" ಎಂದು ನೆಟ್ಟಿಗರೊಬ್ಬರು ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ವಿರುದ್ಧ ಆರೋಶ ಹೊರ ಹಾಕಿದ್ದಾರೆ. ಇಂತಹ ಸಾಂಗ್‌ಗಳಿಂದ ಕನ್ನಡ ಚಿತ್ರರಂಗದ ಮರ್ಯಾದೆ ಹಾಳಾಗುತ್ತಿದೆ ಎಂದು ಸಿಟ್ಟಿಗೆದ್ದಿದ್ದಾರೆ.

ನಿವೃತ್ತಿ ತೆಗೊಳ್ಳಿ ಪ್ಲೀಸ್

ಶೋಮ್ಯಾನ್ ಅಂತ ಕರೆಸಿಕೊಳ್ಳುತ್ತಿರುವ ಪ್ರೇಮ್ ಅವರೇ 'ಕೆಡಿ ದಿ ಡೆವಿಲ್' ಸಿನಿಮಾದಿಂದ ನಮ್ಮ ಚಿತ್ರರಂಗಕ್ಕೆ ನೀವೇನು ಮಾಡುತ್ತಿದ್ದೀರಾ? ದಯವಿಟ್ಟು ನೀವು ನಿವೃತ್ತಿ ತೆಗೆದುಕೊಂಡು ಚಿತ್ರರಂಗವನ್ನು ಕಾಪಾಡಿ. ಎಲ್ಲಾ ಸಿನಿಮಾಗಳು ಕೆಜಿಎಫ್, ಕಾಂತಾರದ ಹಾಗೆ ಪ್ಯಾನ್ ಇಂಡಿಯಾ ಕ್ರೇಜ್ ಅನ್ನು ಚೇಸ್ ಮಾಡುವುದಕ್ಕೆ ಆಗುವುದಿಲ್ಲ. ಇಂತಹ ಭಯದಿಂದ ಹೊರ ಬರುವುದಕ್ಕೆ ಲೋಕಲ್ ಸ್ಟೋರಿಗಳನ್ನು ಆಯ್ಕೆ ಮಾಡಿಕೊಳ್ಳಿ" ಎಂದು ಇಬ್ಬರು ನೆಟ್ಟಿಗರ ನಿರ್ದೇಶಕ ಪ್ರೇಮ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಅರ್ಮಾನ್ ಮಲಿಕ್ ಬೇಸರ

ಹಾಗಂತ ಕೇವಲ ನೆಟ್ಟಿಗರಷ್ಟೇ ಅಲ್ಲ. ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಕೂಡ ಬೇಸರ ಹೊರ ಹಾಕಿದ್ದಾರೆ. " ಇದು ನನ್ನ ಟೈಮ್‌ ಲೈನ್‌ನಲ್ಲಿ ತೋರಿಸಿದಾಗ, ನಾನು ಸರಿಯಾಗಿ ಕೇಳಿಸಿಕೊಂಡಿದ್ದಕ್ಕೆ ಪ್ರತಿಕ್ರಿಯೆ ನೀಡಲೇಬೇಕಾಯ್ತು. ಕಮರ್ಷಿಯಲ್ ಹಾಡುಗಳಿಗೆ ಸಾಹಿತ್ಯ ಬರೆಯುವುದು ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ನನಗೆ ಬೇಸರ ತರಿಸಿದೆ" ಎಂದು ಅರ್ಮಾನ್ ಮಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

More from Filmibeat

English summary
After Sarse Ninna seraga song from KD The Devil movie Jogi Prem heavy trolling.
Read more about: jogi prem kannada movie troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X