Exclusive: ಸೂರಪ್ಪ ಬಾಬು ಸಿನಿಮಾಗೆ ಜೈ ಎಂದ 'ಯಜಮಾನ': ಶೀಘ್ರದಲ್ಲೇ ಬ್ರೇಕಿಂಗ್ ನ್ಯೂಸ್?

ಕಡ್ಡಿ ಮುರಿದಂತೆ ಮಾತಾಡೋ ವ್ಯಕ್ತಿತ್ವ ಇರೋ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸೇರಿ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಇಬ್ಬರದ್ದೂ ರೆಬೆಲ್ ಕ್ಯಾರೆಕ್ಟರ್. ಹಾಗಂತ ಇವರಿಬ್ಬರೂ ಸೂಪರ್‌ಸ್ಟಾರ್‌ಗಳೇನಲ್ಲ. ಒಬ್ಬರು ಸೂಪರ್‌ಸ್ಟಾರ್. ಇನ್ನೋ ಸ್ಟಾರ್ ಪ್ರಡ್ಯೂಸರ್. ಇವರಿಬ್ಬರೂ ಸೇರಿ ಒಂದು ಸಿನಿಮಾ ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.

ಅಂದ್ಹಾಗೆ ಸ್ಯಾಂಡಲ್‌ವುಡ್‌ನ ಆ ರೆಬೆಲ್ ಕ್ಯಾರೆಕ್ಟರ್‌ಗಳು ಯಾರು ಅಂದ್ರೆ, ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೊಬ್ಬರು ರೆಬೆಲ್ ಪ್ರಡ್ಯೂಸರ್ ಸೂರಪ್ಪ ಬಾಬು. ಇಬ್ಬರೂ ಜೊತೆ ಸೇರಿ ಸಿನಿಮಾ ಮಾಡಿದ್ರೆ ಹೇಗಿರುತ್ತೆ? ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಜೋಡಿಯ ಮುಂದಿನ ಸಿನಿಮಾ ಬಗ್ಗೆನೇ ಸುದ್ದಿಯಾಗುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡೋದಿಲ್ಲ ಅಂತ ಹೇಳಿದ್ದರೂ, ಬೇಡಿಕೆಯೇನು ಕಮ್ಮಿಯಾಗಿಲ್ಲ. ದರ್ಶನ್ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ಅದರಲ್ಲೊಬ್ಬರು ಸೂರಪ್ಪ ಬಾಬು. ಹಾಗಿದ್ದರೆ, ಸೂರಪ್ಪ ಬಾಬು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡೋದು ನಿಜವೇ? ಇಲ್ಲಿದೆ ಡಿಟೈಲ್ಸ್.

'ಯಜಮಾನ'ನಿಗೆ ದರ್ಶನ್ ಸಿನಿಮಾ

'ಯಜಮಾನ'ನಿಗೆ ದರ್ಶನ್ ಸಿನಿಮಾ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕರಲ್ಲಿ ಸೂರಪ್ಪ ಬಾಬು ಕೂಡ ಒಬ್ಬರು. ಈ ಹಿಂದೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಕಿಚ್ಚ ಸುದೀಪ್‌ ನಟಿಸಿದ್ದ 'ಕೋಟಿಗೊಬ್ಬ 3' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ನಿರೀಕ್ಷೆ ಮಾಡಿದ್ದಷ್ಟು ಯಶಸ್ಸು ಕಾಣಲಿಲ್ಲ. ಈಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರೋ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಗುಲ್ಲೆದ್ದಿದೆ. ಸ್ಯಾಂಡಲ್‌ವುಡ್ 'ಯಜಮಾನ' ದರ್ಶನ್‌ಗೆ ಸಿನಿಮಾ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಸೂರಪ್ಪ ಬಾಬು ಸಿನಿಮಾಗೆ ದರ್ಶನ್ ಹೀರೊ?

ಸೂರಪ್ಪ ಬಾಬು ಸಿನಿಮಾಗೆ ದರ್ಶನ್ ಹೀರೊ?

ಸೂರಪ್ಪ ಬಾಬು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ. ಇಬ್ಬರೂ ಒಟ್ಟಿಗೆ ಸೇರಿ ಸಿನಿಮಾ ಮಾಡುವುದಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿದ್ದಾರಂತೆ. ದರ್ಶನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರದಲ್ಲೇ ಈ ಸಿನಿಮಾ ಬಗ್ಗೆ ಅನೌನ್ಸ್‌ಮೆಂಟ್ ಆಗಲಿದೆ. ಹೀಗೊಂದು ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ.

ಸೂರಪ್ಪ ಬಾಬು–ದರ್ಶನ್ ಸಿನಿಮಾ ಫಿಕ್ಸ್

ಸೂರಪ್ಪ ಬಾಬು–ದರ್ಶನ್ ಸಿನಿಮಾ ಫಿಕ್ಸ್

ಸೂರಪ್ಪ ಬಾಬು ಹಾಗೂ ದರ್ಶನ್ ಸಿನಿಮಾ ಸೆಟ್ಟೇರೋದು ಬಹುತೇಕ ಖಚಿತ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಅನೌನ್ಸ್‌ಮೆಂಟ್ ಕೂಡ ಆಗಲಿದೆಯಂತೆ. " ದರ್ಶನ್ ಅವರ ಹುಟ್ಟುಹಬ್ಬದವರೆಗೂ ಕಾಯಿರಿ. ಅಲ್ಲಿವರೆಗೂ ಎಲ್ಲವೂ ಸೀಕ್ರೆಟ್" ಎಂದು ಬಲ್ಲ ಮೂಲಗಳು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಮೂಲಗಳ ಪ್ರಕಾರ, ಸೂರಪ್ಪ ಬಾಬು ಹಾಗೂ ದರ್ಶನ್ ಕಾಂಬಿನೇಷನ್‌ ಸಿನಿಮಾ ಫೆಬ್ರವರಿ 16ರಂದು ಅನೌನ್ಸ್‌ ಆಗಲಿದೆ ಅನ್ನೋ ಸುಳಿವು ಸಿಕ್ಕಿದೆ.

2 ಸಿನಿಮಾ ಬಳಿಕ ಸೂರಪ್ಪ ಬಾಬುಗೆ ಕಾಲ್‌ಶೀಟ್

2 ಸಿನಿಮಾ ಬಳಿಕ ಸೂರಪ್ಪ ಬಾಬುಗೆ ಕಾಲ್‌ಶೀಟ್

ಸೂಪರ್ ಬಾಬು ಹಾಗೂ ದರ್ಶನ್ ಕಾಂಬಿನೇಷನ್‌ ಸಿನಿಮಾ ದಿಢೀರನೇ ಅನೌನ್ಸ್ ಆಗಿದ್ರೂ, ಸೆಟ್ಟೇರುವುದಕ್ಕೆ ತಡವಾಗುತ್ತೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕವೇ ದರ್ಶನ್ ಹೊಸ ಸಿನಿಮಾಗೆ ಕೈ ಹಾಕಲಿದ್ದಾರೆ. ಸದ್ಯ ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ 'D56'ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ 57ನೇ ಸಿನಿಮಾ ಕೂಡ ಫಿಕ್ಸ್ ಆಗಿದೆ. ಈ ಎರಡು ಸಿನಿಮಾ ಮುಗಿದ ಬಳಿಕ ಸೂರಪ್ಪ ಬಾಬು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಅನ್ನೋದು ಸದ್ಯಕ್ಕಿರೋ ಖಬರ್.

More from Filmibeat

English summary
After Sudeep's Kotigobba 3 Soorappa Babu Will Be Producing Movie For Darshan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X