ಕನ್ನಡ ಚಿತ್ರರಂಗಕ್ಕೂ ಬೀಸಿದ ಫೈಲ್ಸ್ ಗಾಳಿ: ಯಾರ ಚರಿತ್ರೆ ಬಿಚ್ಚಿಡುತ್ತೆ'ದಿ ಭವಾನಿ ಫೈಲ್ಸ್'?

'ದಿ ಕಾಶ್ಮೀರ್ ಫೈಲ್ಸ್' ಬಂದಿದ್ದೇ ಬಂದಿದ್ದು ಸಿನಿಮಾರಂಗದಲ್ಲಿ ಫೈಲ್ಸ್ ಕ್ರಿಯೇಟ್ ಮಾಡೋದಕ್ಕೆ ಮುಂದಾಗುತ್ತಿದ್ದಾರೆ. ವಿವಾದಾತ್ಮಕ ಸಿನಿಮಾ ಎಂದೇ ಜನಪ್ರಿಯರಾಗಿರುವ 'ದಿ ಕಾಶ್ಮೀರ್ ಫೈಲ್ಸ್ ಬಳಿಕ ಫೈಲ್‌ ಗಾಳಿ ಸ್ಯಾಂಡಲ್‌ವುಡ್‌ಗೂ ಬೀಸಿದೆ.

ವಿಶ್ವದಾದ್ಯಂತ 'ದಿ ಕಾಶ್ಮೀರ್ ಫೈಲ್ಸ್' ವಿವಾದಕ್ಕೆ ಸಿಲುಕಿದ್ದರೂ, ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಈ ಸಿನಿಮಾ ದೇಶಾದ್ಯಂತ ಕೋಟಿ ಕೋಟಿ ಹಣ ಲೂಟಿ ಮಾಡಿತ್ತು. ಈಗ ಕನ್ನಡದಲ್ಲೂ ಒಂದು ಫೈಲ್ಸ್ ಆಧರಿಸಿದ ಸಿನಿಮಾ ಸೆಟ್ಟೇರುವುದಕ್ಕೆ ಸಜ್ಜಾಗಿದೆ.

After The Kashmir Files, London Files Kannada movie titled as The Bhavani Files

ಅದ್ಹಾಂಗೆ, ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರುತ್ತಿರುವ ಫೈಲ್ಸ್‌ಗೆ 'ದಿ ಭವಾನಿ ಫೈಲ್ಸ್' ಅಂತ ಟೈಟಲ್ ಇಡಲಾಗಿದೆ. ಈ ಸಿನಿಮಾಗೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ಕೊಟ್ಟಿದ್ದಾರೆ. ಅಷ್ಟಕ್ಕೂ 'ದಿ ಭವಾನಿ ಫೈಲ್ಸ್' ಕಥೆಯೇನು? ಯಾರ ಚರಿತ್ರೆ ಹೇಳುತ್ತೆ ಸಿನಿಮಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕುತೂಹಲ ಕೆರಳಿಸಿದ 'ದಿ ಭವಾನಿ ಫೈಲ್ಸ್'

ಫೈಲ್ಸ್ ಟೈಟಲ್‌ ಇಟ್ಟ ಸಿನಿಮಾಗಳು ಅಂದರೇನೆ ವಿವಾದ ಸೃಷ್ಟಿಯಾಗುತ್ತೆ ಅನ್ನೋ ಭಾವನೆ ಮೂಡಿದೆ. 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಟ್ರೆಂಡ್ ಹೆಚ್ಚಾಗಿದ್ದು, ಕನ್ನಡಕ್ಕೂ ಆ ಟ್ರೆಂಡ್ ಶುರುವಾಗಿದೆ. ಸದ್ಯ ಸ್ಯಾಂಡಲ್‌ವುಡ್ ತಂಡವೊಂದು 'ದಿ ಭವಾನಿ ಫೈಲ್ಸ್' ಅಂತ ಟೈಟಲ್ ಇಟ್ಟು ಸಿನಿಮಾ ಮಾಡುವುದಕ್ಕೆ ಮುಂದಾಗಿದೆ.

ಈ ಸಿನಿಮಾಗೆ ಭವಾನಿ ಫೈಲ್ಸ್ ಅಂತಾನೇ ಯಾಕಿಟ್ಟರು? ಈ ಭವಾನಿ ಯಾರು? ಅನ್ನೋ ಗೊಂದಲ ಶುರುವಾಗಿದೆ. ಈ ಮಧ್ಯೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬೇರೆ 'ದಿ ಭವಾನಿ ಫೈಲ್ಸ್' ಟೈಟಲ್ ಅನ್ನು ಲಾಂಚ್ ಮಾಡಿದ್ದಾರೆ. ಇಲ್ಲಿಂದ ಮತ್ತಷ್ಟು ಕಾತುರ, ಕೌತುಕ ಹೆಚ್ಚಾಗಿದೆ.

After The Kashmir Files, London Files Kannada movie titled as The Bhavani Files

'ದಿ ಭವಾನಿ ಫೈಲ್ಸ್' ಹಿಂದಿರೋದ್ಯಾರು?

ಈಗಾಗಲೇ 'ನೂರು ಜನ್ಮಕ್ಕೂ', 'ಡಿಯರ್ ಸತ್ಯ' ಅಂತಹ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಆರ್ಯನ್ ಈಗ 'ದಿ ಭವಾನಿ ಫೈಲ್ಸ್' ಸಿನಿಮಾವನ್ನು ಘೋಷಿಸಿದ್ದಾರೆ. ಈ ಸಿನಿಮಾದಲ್ಲಿ ಆರ್ಯನ್ ನಟನೆ ಜೊತೆಗೂ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ದಿ ಭವಾನಿ ಫೈಲ್ಸ್' ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಆರಂಭ ಆಗಿವೆ. ಆರ್ಯನ್ ತಮ್ಮ ಸ್ನೇಹಿತರೊಂದಿಗೆ ಸೇರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೋಹನ್ ಮೆನನ್, ಜೇಕಬ್ ವರ್ಗೀಸ್ ಹಾಗೂ ಸ್ವತ: ಆರ್ಯನ್ ಈ ಸಿನಿಮಾಗೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ.

'ದಿ ಭವಾನಿ ಫೈಲ್ಸ್' ಕಥೆಯೇನು?

'ದಿ ಭವಾನಿ ಫೈಲ್ಸ್' ಸಿನಿಮಾದ ಟೈಟಲ್ ಅನೌನ್ಸ್ ಆಗಿತ್ತಿದ್ದಂತೆ ಕೌತಕ ಹೆಚ್ಚಾಗುವುದಕ್ಕೆ ಕಾರಣವಿದೆ. ಕರ್ನಾಟಕದಲ್ಲಿ ಈ ಹೆಸರನ್ನಿಟ್ಟುಕೊಂಡು ಜನಪ್ರಿಯ ವ್ಯಕ್ತಿಯ ಮೇಲೆ ಸಿನಿಮಾ ಮಾಡುತ್ತಿರಬಹುದಾ? ಅನ್ನೋ ಅನುಮಾನ ಮಾಡುವುದು ಸಹಜ. ಆದರೆ, ಚಿತ್ರತಂಡ ಇದು 14ನೇ ಶತಮಾನದ ಕಥೆಯೆಂದು ಹೇಳಿದೆ.

ವೈಟ್ ಹಾರ್ಸ್ ಪ್ರೊಡಕ್ಷನ್ ಬ್ಯಾನರ್‌ನಿಂದ 'ದಿ ಭವಾನಿ ಫೈಲ್ಸ್' ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾದ ನಿರ್ಮಾಣಕ್ಕೆ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಜೊತೆಯಾಗಿದೆ. ಇದೊಂದು ಕಲ್ಟ್ ಜಾನರ್ ಎಂದು ತಂಡ ಹೇಳಿಕೊಂಡಿದೆ. ಆದರೆ, ಸಿನಿಮಾ ಕಥೆ, ಸ್ಟಾರ್ ಕಾಸ್ಟ್ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ.

More from Filmibeat

English summary
After The Kashmir Files, London Files Kannada movie titled as The Bhavani Files, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X