ತಮಿಳುನಾಡಿನಲ್ಲಿ ವಿಜಯ್‌ಗೆ ಗೆಲುವು; ಕರ್ನಾಟಕದಲ್ಲೂ ಹೊಸ ರಾಜಕೀಯ ಪಕ್ಷ ಘೋಷಣೆ!

ತಮಿಳುನಾಡಿನ ಚುನಾವಣಾ ಫಲಿತಾಂಶ ದೇಶದ ರಾಜಕೀಯದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ವಿಜಯ್‌ಗೆ ಭರ್ಜರಿ ಯಶಸ್ಸು ಸಿಕ್ಕಿದೆ. ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷ 2026ರ ಚುನಾವಣೆಯಲ್ಲಿ ಗೆದ್ದು ಬೀಗಿದೆ. ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ಇದ್ದರೂ, ವಿಜಯ್ ಪಕ್ಷ ಸುಮಾರು 108 ಸ್ಥಾನಗಳನ್ನು ಪಡೆದುಕೊಂಡು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಡಿಎಂಕೆ, ಎಐಡಿಎಂಕೆ ಅಂತಹ ಪ್ರಬಲ ಪಕ್ಷಗಳನ್ನು ವಿಜಯ್ ಪಾರ್ಟಿ ಟಿವಿಕೆ ಹೊಡೆದುರುಳಿಸಿದೆ. ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷದ ದಿಗ್ಗಜರನ್ನೇ ಟಿವಿಕೆ ಪಕ್ಷದ ಮುಖಂಡರು ಸೋಲಿಸಿ ಅಚ್ಚರಿ ಮೂಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ವಿಜಯ್ ಪಾರ್ಟಿ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಮೊದಲ ಪ್ರಯತ್ನದಲ್ಲಿಯೇ ಸುಮಾರು 108 ಸ್ಥಾನಗಳಲ್ಲಿ ಗೆದ್ದು ಹೊಸ ಇತಿಹಾಸವನ್ನೇ ಬರೆದಿದೆ.

After Vijay TVK won in Tamil Nadu election Lawyer Jagadish to announce new political party in Karnataka

ನಿಜಕ್ಕೂ ವಿಜಯ್ ಟಿವಿಕೆ ಪಕ್ಷ ದೇಶದ ರಾಜಕೀಯಕ್ಕೆ ಹೊಸ ತಿರುವು ಅಂದರೆ ತಪ್ಪಾಗಲಿಕ್ಕಿಲ್ಲ. ವಿಜಯ್ ರಾಜಕೀಯ ನಡೆಯಿಂದ ಪ್ರೇರಣೆ ಹೊಂದಿರುವ ಬಿಗ್ ಬಾಸ್ ಸ್ಪರ್ಧಿ ಕರ್ನಾಟಕದಲ್ಲಿಯೂ ಹೊಸ ಪಕ್ಷವನ್ನು ಕಟ್ಟುವುದಕ್ಕೆ ಮುಂದೆ ಬಂದಿದ್ದಾರೆ. ಈಗಾಗಲೇ ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಅಲ್ಲದೇ ವಿಡಿಯೋ ಮಾಡಿ ಪೋಸ್ಟ್ ಕೂಡ ಮಾಡಿದ್ದಾರೆ.

ವಿಜಯ್ ಗೆಲುವು ಪ್ರಾದೇಶಿಕ ಪಕ್ಷಗಳಿಗೆ ಹೊಸ ಹುರುಪು ಕೊಟ್ಟಿದೆ. ಅದರಲ್ಲೂ ದಕ್ಷಿಣ ಭಾರತದ ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಉತ್ತೇಜನ ಸಿಕ್ಕಂತೆ ಆಗಿದೆ. ಇದರಿಂದ ಪ್ರೇರಣೆ ಹೊಂದಿರೋದು ಬಿಗ್ ಬಾಸ್‌ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಕೂಡ ಒಬ್ಬರು. ಈಗಾಗಲೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲಾಯರ್ ಜಗದೀಶ್ ಹೊಸ ಪಕ್ಷವನ್ನು ಅನೌನ್ಸ್ ಮಾಡುವುದಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ,

"ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸಹವಾಸ ಕರ್ನಾಟಕದ ಮತದಾರರಿಗೆ ಸಾಕಾಗಿದೆ. ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಬೆಲೆ ಏರಿಕೆ ವಿರುದ್ಧ ಜನರ ಜೊತೆ ನಿಲ್ಲುವ, ಸಾಮಾನ್ಯ ಜನರ ನಿಲ್ಲಿಸಿ ಗೆಲ್ಲಿಸಿ ಸರ್ಕಾರ ರಚಿಸುವ ಅವಶ್ಯಕತೆ ಮುಂದಿನ ಕರ್ನಾಟಕ MLA (ವಿಧಾನಸಭಾ)ಚುನಾವಣೆಯಲ್ಲಿ ಮಾಡಬೇಕೆಂದು ಪ್ರಯತ್ನ ನಡೆಯುತ್ತಿದೆ. ಹತ್ತಾರು political ಪಾರ್ಟಿ ಇರುವ ಕರ್ನಾಟಕಕ್ಕೆ, ಈ ಮೂರು ಪಕ್ಷಗಳ ಭ್ರಷ್ಟ ರಾಜಕಾರಣಿಗಳಿಗೆ ತೊಡೆ ತಟ್ಟಿ ನಿಲ್ಲುವ ಒಬ್ಬ Leader ಹಾಗೂ ಸಾಮಾನ್ಯ ವರ್ಗದ ಜನರ ಜೊತೆ ನಿಲ್ಲುವ ಒಂದು ರಾಜಕೀಯ party ಅವಶ್ಯಕತೆ ಇದೆ. ಶೀಘ್ರವೇ ಪಾರ್ಟಿ ಹಾಗೂ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ" ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗೆ ಇನ್ನು 2 ವರ್ಷಗಳು ಇವೆ. ಹೀಗಾಗಿ ಹೊಸ ರಾಜಕೀಯ ಪಕ್ಷ ಕಟ್ಟಿ ಈಗಿನಿಂದಲೇ ಜನರಿಗೆ ಅರಿವು ಮೂಡಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಲಾಯರ್ ಜಗದೀಶ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಹಾಗೇ ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ. "ಪಕ್ಕದ ರಾಜ್ಯದಲ್ಲಿ ರಾಜಕೀಯ ಸಂಚಲವನ್ನು ನೋಡಿ ನೂರಾರು ವಿಡಿಯೋಗಳು, ಪೋಸ್ಟ್‌ಗಳು ಬಂದಿವೆ. ಅದರಲ್ಲಿ ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಬೇಕು ಅಂತ ಸಾಕಷ್ಟು ಚರ್ಚೆಯಾಗುತ್ತಿದೆ. ಡಿಎಂಕೆ ಹಾಗೂ ಎಐಡಿಎಂಕೆ ಇಬ್ಬರೇ ಅಧಿಕಾರಕ್ಕೆ ಬರುತ್ತಿದ್ದರು. ಈ ಪಕ್ಷಗಳಿಂದ ತಮಿಳುನಾಡಿನ ಜನತೆ ಬೇಸತ್ತು ಹೋಗಿದ್ದರು. ಇದಕ್ಕೆ ವಿಜಯ್ ಅವರು ಒಂದು ಆಯ್ಕೆಯನ್ನು ಕೊಟ್ಟರು. ದಿಟ್ಟತನದಿಂದ ನಿಂತುಕೊಂಡು ಜನರಿಗೆ ರೀಚ್ ಆದರು." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ವಿಜಯ್ ನಿಜಕ್ಕೂ ರಾಜಕೀಯ ಪಕ್ಷವನ್ನು ನಿರ್ಮಾಣ ಮಾಡಬಹುದೇ? ಇಲ್ಲವೇ ಕೇವಲ ಜೋಷ್‌ನಲ್ಲಿ ಅಷ್ಟೇ ಲಾಯರ್ ಜಗದೀಶ್ ಹೇಳುತ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ. ಆದರೆ, ವಿಡಿಯೋದಲ್ಲೂ ಲಾಯರ್ ಜಗದೀಶ್ ಪಕ್ಷವನ್ನು ಕಟ್ಟುವ ಬಗ್ಗೆ ಪುರುಚ್ಚರಿಸಿದ್ದಾರೆ. ಕರ್ನಾಟಕದಲ್ಲಿ ಖಂಡಿತವಾಗಿಯೂ ಬದಲಾವಣೆ ಮಾಡುತ್ತೇವೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

English summary
After Vijay TVK won in Tamil Nadu election Lawyer Jagadish to announce new political party in Karnataka.
Read more about: vijay bigg boss kannada politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X