'KGF 2' ಸಿನಿಮಾ ನೋಡಿದ ಬಾಲಕನಿಗೆ ರಾಕಿ ಭಾಯ್ ನೋಡುವ ಆಸೆ: ಯಶ್ ಪ್ರತಿಕ್ರಿಯೆ ಏನಿತ್ತು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದೆಲ್ಲಡೆ ತನ್ನ ಆರ್ಭಟವನ್ನು ಮುಂದುವರೆಸಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದ್ದರೂ, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಈ ನಡುವೆ 'ಕೆಜಿಎಫ್ 2' ನೋಡಿ ಬಂದವರು ರಾಕಿ ಭಾಯ್‌ಗೆ ಫ್ಯಾನ್ ಆಗಿಬಿಟ್ಟಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲೂ ಯಶ್ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ರಾಕಿ ಭಾಯ್ ಖದರ್, ಆರ್ಭಟ, ಬಟ್ಲರ್ ಇಂಗ್ಲಿಷ್ ಇವೆಲ್ಲವೂ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಕೆಜಿಎಫ್ 2 ಸಿನಿಮಾ ಬಗ್ಗೆ ಎಷ್ಟು ಮಾತಾಡುತ್ತಾರೋ, ಅಷ್ಟೇ ರಾಕಿ ಭಾಯ್ ಬಗ್ಗೆನೂ ಮಾತಾಡುತ್ತಾರೆ. ಇಲ್ಲೊಬ್ಬ ಬಾಲಕ ಕೂಡ 'ಕೆಜಿಎಫ್ 2' ಸಿನಿಮಾ ನೋಡಿ ರಾಕಿ ಬೇಕು ಅಂತ ಹಠ ಹಿಡಿದು ಕೂತಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಈ ಕಡೆಯಿಂದ ರಾಕಿ ಭಾಯ್ ತನ್ನದೇ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಅಸಲಿ ಮ್ಯಾಟರ್ ಏನು ಅಂತ ತಿಳಿಯಲು ಮುಂದೆ ಓದಿ.

ರಾಕಿ ಬಾಯ್ ಬೇಕು ಅಂತ ಹಠ ಹಿಡಿದ ಬಾಲಕ

'ಕೆಜಿಎಫ್ 2' ಸಿನಿಮಾ ಸೌಂಡ್ ಮಾಡುತ್ತಿರುವ ರೀತಿಗೆ ಇಡೀ ವಿಶ್ವವೇ ಬೆರಗಾಗಿದೆ. ಸಿನಿಮಾ ರಿಲೀಸ್ ಆದ ಕಡೆಯಲ್ಲೆಲ್ಲಾ ಅದ್ಧೂರಿಯಾಗಿ ಕಲೆಕ್ಷನ್ ಮಾಡಿದೆ. ರಾಕಿ ಭಾಯ್ ಅಬ್ಬರ, ಪ್ರಶಾಂತ್ ನೀಲ್ ಕಲ್ಪನೆಗೆ ಪ್ರೇಕ್ಷಕರು ತಲೆಕೆಡಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಇದು ಗ್ಯಾಂಗ್‌ಸ್ಟರ್ ಸ್ಟೋರಿ ಆಗಿದ್ದರೂ, ಕುಟುಂಬ ಸಮೇತ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಾಷೆಯ ಭೇದವನ್ನು ಮರೆತು, ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

After watching KGF 2 boy wants to meet Rakhi Bhai here it is Yash Replay

ಇಲ್ಲೊಬ್ಬ ಬಾಲಕ ತನ್ನ ಪೋಷಕರೊಂದಿಗೆ 'ಕೆಜಿಎಫ್ 2' ಸಿನಿಮಾ ನೋಡಿದ್ದಾನೆ. ಆ ಸಿನಿಮಾ ನೋಡಿದ ಬಳಿಕ ರಾಕಿ ಭಾಯ್ ಅನ್ನು ಭೇಟಿ ಮಾಡಬೇಕು ಅಂತ ಹಠ ಹಿಡಿದು ಕೂತಿದ್ದಾನೆ. ಯಶ್ ನೋಡಬೇಕು ಅಂತ ಹಠ ಹಿಡಿದು ಕೂತಿರುವ ಆ ಬಾಲಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಇತ್ತ ರಾಕಿಂಗ್ ಸ್ಟಾರ್ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಕಣ್ಣೀರಿಟ್ಟ ಬಾಲಕನಿಗೆ ಯಶ್ ಹೇಳಿದ್ದೇನು?

ಯಶ್ ಪುಟ್ಟ ಅಭಿಮಾನಿ ರಾಕಿ ಭಾಯ್ ನೋಡ್ಬೇಕು ಅಂತ ಹಠ ಹಿಡಿದಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ವಿಡಿಯೋವನ್ನು ಯಶ್‌ಗೆ ಟ್ಯಾಗ್ ಕೂಡ ಮಾಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಯಶ್, ರಾಕಿ ಭಾಯ್ ಸ್ಟೈಲ್‌ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು " ಯಶ್ ಈ ಬಾಲಕ ರಾಕಿ ಭಾಯ್ ಅನ್ನು ಭೇಟಿ ಮಾಡಬೇಕಂತೆ. ಕೆಜಿಎಫ್ ಸಿನಿಮಾ ನೋಡಿದಾಗಿನಿಂದ ಈ ಮಾತನ್ನು ಹೇಳುತ್ತಿದ್ದಾನೆ. ಅವನು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದು, ಒಮ್ಮೆಯಾದರೂ ರಾಕಿ ಬಾಯ್ ಅನ್ನು ನೋಡಬೇಕು ಅಂತಿದ್ದಾನೆ." ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು.

ಟ್ವಿಟರ್‌ನಲ್ಲಿ ಬಾಲಕನ ವಿಡಿಯೋ ನೋಡಿದ ಬಳಿಕ " ಚಿನ್ ಅಪ್.. ಸನ್ನಿ ಬಾಯ್, ನಿಮ್ಮ ರಾಕಿ ಭಾಯ್ ನೋಡುತ್ತಿದ್ದಾನೆ. ನೀನು ದು:ಖದಲ್ಲಿ ಇರುವುದು ನನಗೆ ಇಷ್ಟವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಯಶ್ ಮಾಡಿದ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ.

ಇನ್ನು 'ಕೆಜಿಎಫ್ 2' ಬಿಡುಗಡೆಯಾಗಿ ಎರಡು ವಾರ ಕಳೆದಿದ್ದರೂ, ಇನ್ನೂ ಬಾಕ್ಸಾಫೀಸ್‌ನಲ್ಲಿ ಅದರ ಹವಾ ಕಡಿಮೆಯಾಗಿಲ್ಲ. ಹಿಂದಿ ಬೆಲ್ಟ್ ಹಾಗೂ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ದಿನಕ್ಕೊಂದು ದಾಖಲೆ ಸೃಷ್ಟಿಸುತ್ತಾ ಮುಂದೆ ಸಾಗುತ್ತಲೇ ಇದೆ.

More from Filmibeat

English summary
After watching KGF 2 boy wants to meet Rakhi Bhai here it is Yash Replay, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X