Sapta Sagaradaache Ello: "ನೀಲಿ ಸಮುದ್ರದಲ್ಲಿ ಎರಡು ಮೀನುಗಳ ಕಥೆ".. ಸಪ್ತ ಸಾಗರ ದಾಟಿದ ತಾರೆಯರು ಭಾವುಕ!

ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಜೋಡಿ ಪ್ರೇಕ್ಷಕರನ್ನು, ತಾರೆಯರನ್ನು ಭಾವನಾಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ರಿಲೀಸ್‌ಗೆ ಒಂದು ದಿನ ಮುನ್ನ ಕನ್ನಡ ಚಿತ್ರರಂಗದ ತಾರೆಯರಿಗೆ ತೋರಿಸಲಾಗಿತ್ತು. ಚಿತ್ರರಂಗದ ತಾರೆಯರು ಈ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ.

ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಿ, ನಿರ್ದೇಶಕರಾದ ಸಿಂಪಲ್ ಸುನಿ, ಅನುಪ್ ಭಂಡಾರಿ ಸೇರಿದಂತೆ ಹಲವು ಮಂದಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ನೋಡಿ ಪ್ರಕ್ರಿಯೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇದೊಂದು ವಿಶಿಷ್ಠ ಪ್ರಯತ್ನ ಅನ್ನೋದನ್ನು ಇವರೆಲ್ಲೂ ಒಪ್ಪಿದ್ದಾರೆ. ಭಾವನೆಗಳ ಅಲೆಯಲ್ಲಿ ಈಜಿ ಬಂದು ದಡ ಸೇರಿದ್ದಾರೆ. ಆ ಬಳಿಕ ನೀಡಿದ ರಿಯಾಕ್ಷನ್ ಹೀಗಿದೆ.

After Watching Sapta Sagaradaache Yello Movie here is the celebrity reaction

"ರಕ್ಷಿತ್ ಶೆಟ್ಟಿಯ ಬೆಸ್ಟ್ ಸಿನಿಮಾ"

"ಪದಗಳಲ್ಲಿ ಈ ಸಿನಿಮಾವನ್ನು ವರ್ಣಿಸುವುದು ತುಂಬಾನೇ ಕಷ್ಟ. ಕನ್ನಡ ಚಿತ್ರರಂಗದ ಒಂದು ಅಪ್ಪಟ ಸಿನಿಮಾ ಅಂತ ಹೇಳಬಹುದು. ಭಾವನೆಗಳನ್ನು ಆರಂಭದಿಂದ ಕೊನೆವರೆಗೂ ತೆಗೆದುಕೊಂಡು ಹೋಗಿದ್ದಾರೆ. ನಮ್ಮಲ್ಲಿ ಇಂತಹ ಪ್ಯೂರ್ ಲವ್‌ಸ್ಟೋರಿಯನ್ನು ನೋಡೇ ಇಲ್ಲ ಅಂತ ಹೇಳಬಹುದು. ತುಂಬಾ ಹೇಳುವುದಕ್ಕೆ ಆಗುತ್ತಿಲ್ಲ. ಎದೆ ಭಾರ ಅಂತ ಅನಿಸುತ್ತಿದೆ. ನಾನು ಇದೂವರೆಗೂ ನೋಡಿರುವ ರಕ್ಷಿತ್ ಸಿನಿಮಾಗಳಲ್ಲಿ ಇದು ಬೆಸ್ಟ್ ಸಿನಿಮಾ ಅಂತ ಹೇಳಬಹುದು." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

"ಸಪ್ತಸಾಗರದಾಚೆ ಒಂದು ಕಾದಂಬರಿ ಓದಿದಂತೆ ಇತ್ತು"

"ನಾನು ಫಾರಿನ್‌ ಸಿನಿಮಾಗಳನ್ನು ನೋಡುವಾಗ ನನಗೊಂದು ಕವಿತೆಯಂತೆ ಕಾಣುತ್ತಿತ್ತು. ಕವಿತೆಯಲ್ಲಿ ಒಂದಿಷ್ಟು ಎಮೋಷನ್ಸ್ ಇದ್ದರೆ ಹೇಗಿರುತ್ತೋ ಅಂತಹ ಎಕ್ಸ್‌ಪಿರಿಯನ್ಸ್ ಇತ್ತು. ಸಪ್ತಸಾಗರದಾಚೆ ಒಂದು ಕಾದಂಬರಿ ಓದಿದಂತೆ ಇತ್ತು. ಒಂದು ಕವಿತೆ ಓದಿದಂತೆ ಇತ್ತು" ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.

"ಈ ಸಿನಿಮಾವನ್ನು ಒಂದು ಪೇಟಿಂಗ್ ರೀತಿಯಲ್ಲಿ ಚಿತ್ರಿಸಿದ್ದಾರೆ. ಹೇಮಂತ್ ಅವರಿಗೆ ನಾನು ಕ್ರೆಡಿಟ್ ಕೊಡುತ್ತೇನೆ. ಇಂತಹದ್ದೊಂದು ಸಿನಿಮಾ ಮಾಡುವುದಕ್ಕೆ ತುಂಬಾನೇ ಧೈರ್ಯ ಬೇಕು. ರಕ್ಷಿತ್ ಕೂಡ ಸ್ಟಾರ್‌ಡಮ್ ಇದ್ದರೂ ರಿಸ್ಕ್ ತೆಗೆದುಕೊಂಡು ಯಶಸ್ಸು ಕಂಡಿದ್ದಾರೆ. ರುಕ್ಷಿಣಿ ಚೆನ್ನಾಗಿ ನಟಿಸಿದ್ದಾರೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಅದ್ಭುತ." ಎಂದು ಅನುಪ್ ಭಂಡಾರಿ ಹೇಳಿದ್ದಾರೆ.

After Watching Sapta Sagaradaache Yello Movie here is the celebrity reaction

"ಮತ್ತೆ ಸಿನಿಮಾ ನೋಡುತ್ತೇನೆ"

" ಈ ಸಿನಿಮಾದಲ್ಲಿ ಚಿಕ್ಕ ಚಿಕ್ಕದನ್ನು ತೋರಿಸಿದ್ದಾರೆ. ಅಂದರೆ, ನಟರ ಉಗುರು ಏನಿದೆ ಅದನ್ನೂ ತೋರಿಸಿದ್ದಾರೆ. ಅದನ್ನೆಲ್ಲ ನೋಡಿದಾಗ ಬಹಳ ಖುಷಿ ಆಯ್ತು. ಮತ್ತೆ ಮತ್ತೆ ಈ ಸಿನಿಮಾವನ್ನು ನೋಡುತ್ತೇನೆ." ಎಂದು ರಿಷಿ ಹೇಳಿದ್ದಾರೆ.

"ನೀಲಿ ಸಮುದ್ರದಲ್ಲಿ ಎರಡು ಮೀನಿಗಳ ಕಥೆ"

" ಸಪ್ತ ಸಾಗರದಾಚೆ ಎಲ್ಲೋ ಒಂದು ನೀಲಿ ಸಮುದ್ರದಲ್ಲಿ ಎರಡು ಮೀನಿಗಳ ಕಥೆ ಅಂತಾನೇ ಹೇಳಬಹುದು. ತುಂಬಾ ಭಾವನಾತ್ಮಕವಾಗಿ ಪ್ಲ್ಯಾನ್ ಮಾಡಿ ಶೂಟ್ ಮಾಡಿದ್ದಾರೆ. ಈ ಸಿನಿಮಾ ನಿಮ್ಮನ್ನು ಆವರಿಸಿಕೊಳ್ಳುತ್ತೆ. ಈ ಸಿನಿಮಾ ನಿಮ್ಮ ಕಾಡುತ್ತೆ. ಜಾಸ್ತಿ ಪದಗಳು ಬರುತ್ತಿಲ್ಲ. ಸಿನಿಮಾ ತುಂಬಾನೇ ಫೀಲ್ ಆಯ್ತು. ಭಾವನಾತ್ಮಕ ಸಮುದ್ರದಲ್ಲಿ ಮುಳುಗಿ. ಪಾರ್ಟ್ 2 ನೋಡುವುದಕ್ಕಾದರೂ ಪಾರ್ಟ್ ಒನ್‌ಗೆ ಬರಲೇ ಬೇಕು" ಎಂದು ಸಿಂಪಲ್ ಸುನಿ ಹೇಳಿದ್ದಾರೆ.

More from Filmibeat

English summary
Rakshit Shetty Rukmini Vasanth movie Sapta Sagaradaache Yello celebrity review:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X