Exclusive: ಶ್ರೀನಗರ ಕಿಟ್ಟಿ–ನಾಗಶೇಖರ್ ಚರ್ಚೆ.. 'ಸಂಜು ವೆಡ್ಸ್ ಗೀತಾ 2' ಬರೋದು ಫಿಕ್ಸ್? ಇರ್ತಾರಾ ರಮ್ಯಾ?

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಆರಂಭ ಆಗಿದೆ. ಮೊದಲ ಸಂಚಿಕೆಯಲ್ಲೇ ಮೋಹಕ ತಾರೆ ರಮ್ಯಾ ಸಾಧಕರ ಸೀಟ್‌ನಲ್ಲಿ ಕೂತಿದ್ದಾರೆ. ತಮ್ಮ ಬಾಲ್ಯದಿಂದ ಆರಂಭ ಆಗಿ ಸಿನಿಮಾದವರೆಗೂ ಬಂದು ನಿಂತಿದೆ. ಎರಡು ದಿನಗಳ ಕಾಲ ರಮ್ಯಾ ಎಪಿಸೋಡ್ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

ನಿನ್ನೆ (ಮಾರ್ಚ್ 25) 'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಮೊದಲ ಸಂಚಿಕೆ ಪ್ರಸಾರ ಆಗಿದೆ. ಮೋಹಕತಾರೆ ರಮ್ಯಾ ತಮ್ಮ ಸಿನಿಮಾ ಬದುಕಿನ ಅನುಭವಗಳನ್ನು, ಚಿತ್ರರಂಗದ ಅದ್ಭುತ ಕ್ಷಣಗಳನ್ನು ಕಿರುತೆರೆ ಮೇಲೆ ತಂದಿದ್ದಾರೆ. ಈ ವೇಳೆ ರಮ್ಯಾ ವೃತ್ತಿ ಬದುಕಿನಲ್ಲಿ ಸೂಪರ್‌ ಹಿಟ್ ಕೊಟ್ಟ ಸಿನಿಮಾ 'ಸಂಜು ವೆಡ್ಸ್ ಗೀತಾ' ಬಗೆಗಿನ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ.

After Weekend With Ramesh Ramya Episode Srinagara Kitty Nagashekar Discussing Sanju Weds Geetha 2

'ಸಂಜು ವೆಡ್ಸ್ ಗೀತಾ' ಬಗ್ಗೆ ರಮ್ಯಾ ಮಾತಾಡುತ್ತಿದ್ದಂತೆ ಗಾಂಧಿನಗರದಲ್ಲಿ ಬಿರುಸಿನ ಬೆಳವಣಿಗೆ ನಡೆಯುತ್ತಿದೆ. ಶ್ರೀನಗರ ಕಿಟ್ಟಿ, ನಾಗಶೇಖರ್ 'ವೀಕೆಂಡ್ ವಿತ್ ರಮೇಶ್' ವೇದಿಕೆ ಹತ್ತಿ ಬರುತ್ತಿದ್ದಂತೆ 'ಸಂಜು ವೆಡ್ಸ್ ಗೀತಾ' ಪಾರ್ಟ್ 2 ಬಗ್ಗೆ ಚರ್ಚೆ ಶುರುವಾಗಿದೆ. ಈ ಬಗ್ಗೆ ಗಾಂಧಿನಗರದಲ್ಲೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

'ಸಂಜು ವೆಡ್ಸ್ ಗೀತಾ 2' ಸೆಟ್ಟೇರುವುದು ಫಿಕ್ಸ್?

ಶ್ರೀನಗರ ಕಿಟ್ಟಿ ಹಾಗೂ ನಿರ್ದೇಶಕ ನಾಗಶೇಖರ್ ಇಬ್ಬರೂ 'ಸಂಜು ವೆಡ್ಸ್ ಗೀತಾ 2' ಸಿನಿಮಾ ಬಗ್ಗೆ ಆಸಕ್ತಿ ತೋರಿದ್ದಾರಂತೆ. 'ವೀಕೆಂಡ್ ವಿತ್ ರಮೇಶ್' ವೇದಿಕೆ ಮೇಲೆ 'ಸಂಜು ವೆಡ್ಸ್ ಗೀತಾ' ಬಗ್ಗೆ ಚರ್ಚೆಯಾಗುತ್ತಿದ್ದಂತೆ ಪಾರ್ಟ್ 2 ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

'ವೀಕೆಂಡ್ ವಿತ್ ರಮೇಶ್' ರಮ್ಯಾ ಎಪಿಸೋಡ್‌ ಚಿತ್ರೀಕರಣದಿಂದ ಮರಳುತ್ತಿದ್ದಂತೆ 'ಸಂಜು ವೆಡ್ಸ್ ಗೀತಾ 2' ಮಾಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ. ಇದೇ ವಿಚಾರದ ಬಗ್ಗೆ ಚರ್ಚೆ ಮಾಡುವುದಕ್ಕೆ ಇತ್ತೀಚೆಗೆ ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಇಬ್ಬರೂ ಒಟ್ಟಿಗೆ ಸೇರಿದ್ದರು ಎನ್ನಲಾಗಿದೆ. ಒಂದ್ವೇಳೆ ಈ ಸಿನಿಮಾ ಟೇಕಾಫ್ ಆದರೆ, 12 ವರ್ಷಗಳ ಬಳಿಕ 'ಸಂಜು ವೆಡ್ಸ್ ಗೀತಾ' ಸೀಕ್ವೆಲ್‌ ಅನ್ನು ತೆರೆಮೇಲೆ ನೋಡಬಹುದು.

After Weekend With Ramesh Ramya Episode Srinagara Kitty Nagashekar Discussing Sanju Weds Geetha 2

'ಸಂಜು ವೆಡ್ಸ್ ಗೀತಾ 2'ನಲ್ಲಿ ರಮ್ಯಾ ಇರುತ್ತಾರಾ?

'ಸಂಜು ವೆಡ್ಸ್ ಗೀತಾ' ಸಿನಿಮಾದಲ್ಲಿ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈ ಸಿನಿಮಾದ ಹಾಡುಗಳನ್ನು ಇಂದಿಗೂ ಸಿನಿಪ್ರಿಯರು ಗುನುಗುತ್ತಾರೆ. ಹೀಗಾಗಿ 'ಸಂಜು ವೆಡ್ಸ್ ಗೀತಾ 2' ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಇಬ್ಬರೂ ಒಟ್ಟಿಗೆ ಸೇರಿದ್ಮೇಲೆ ರಮ್ಯಾ ಇರುತ್ತಾರಾ? ಅನ್ನೋ ಪ್ರಶ್ನೆನೂ ಮೂಡಿದೆ.

ಸದ್ಯ ಫಿಲ್ಮಿಬೀಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ, ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ. 'ಸಂಜು ವೆಡ್ಸ್ ಗೀತಾ 2' ಕಿಟ್ಟಿನೂ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನಾಗಶೇಖರ್ ಕಥೆ ಹೆಣೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಆದರೆ, ರಮ್ಯಾ ಅವರೇ ಪಾರ್ಟ್‌ 2ನಲ್ಲಿ ಇರುತ್ತಾರಾ? ಇಲ್ಲಾ ಬೇರೆ ನಾಯಕಿ ಬರುತ್ತಾರಾ? ಅನ್ನೋ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ರಮ್ಯಾ ಸೀಕ್ವೆಲ್‌ನಲ್ಲಿ ನಟಿಸಲು ಒಪ್ಪುತ್ತಾರಾ? ಅನ್ನೋದು ಇನ್ನೋದು ಇನ್ನೂ ನಿಗೂಢವಾಗಿಯೇ ಇದೆ.

ಅರ್ಧಕ್ಕೆ ನಿಂತಿದ್ದ ಸಿನಿಮಾ ರಮ್ಯಾ ಸಹಾಯಹಸ್ತ

2011ರಲ್ಲಿ ಸೆಟ್ಟೇರಿದ್ದ 'ಸಂಜು ವೆಡ್ಸ್ ಗೀತಾ' ಅರ್ಧಕ್ಕೆ ನಿಂತಿತ್ತು. ಹಣಕಾಸಿನ ಸಮಸ್ಯೆ ಎದುರಾಗಿತ್ತು. ಇನ್ನೇನು ಸಿನಿಮಾ ನಿಂತೇ ಹೋಯ್ತು. ರಿಲೀಸ್ ಮಾಡೋಕೆ ಆಗೋದಿಲ್ಲ ಅಂತ ನಿರ್ದೇಶಕ ನಾಗಶೇಖರ್ ಸಿನಿಮಾ ಬಿಟ್ಟು ಕೂತಿದ್ದರು. ಈ ವೇಳೆ ಸ್ವತ: ರಮ್ಯಾ ಸಹಾಯಕ್ಕೆ ಮುಂದಾಗಿದ್ದರು. ಬರೋಬ್ಬರು 60 ಲಕ್ಷ ಹಣ ನೀಡಿದ್ದರು ಎಂದು ಕಿಟ್ಟಿ ಹಾಗೂ ನಾಗಶೇಖರ್ ಹೇಳಿಕೊಂಡಿದ್ದಾರೆ.

'ಸಂಜು ವೆಡ್ಸ್ ಗೀತಾ' ಮ್ಯೂಸಿಕ್ ಹಾಗೂ ಕಥೆ ಎರಡರಿಂದಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಬಾಕ್ಸಾಫೀಸ್‌ನಲ್ಲೂ ಸಿನಿಮಾ ಸೂಪರ್‌ ಹಿಟ್ ಆಯ್ತು. ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಜೋಡಿ ಸ್ಯಾಂಡಲ್‌ವುಡ್‌ನಲ್ಲಿ ಸೂಪರ್‌ ಹಿಟ್ ಆಗಿತ್ತು. ಈಗ ಮತ್ತೆ ಶ್ರೀನಗರ ಕಿಟ್ಟಿ ಹಾಗೂ ನಾಗಶೇಖರ್ ಇಬ್ಬರೂ ಸೀಕ್ವೆಲ್‌ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಕಥೆ, ಸ್ಟಾರ್ ಕಾಸ್ಟ್ ಎಲ್ಲಾ ಓಕೆ ಆದರೆ, ಆದಕ್ಕೆ ಸಿನಿಪ್ರಿಯರಿಗೆ ಗುಡ್ ನ್ಯೂಸ್ ಸಿಗೋದು ಗ್ಯಾರಂಟಿ.

More from Filmibeat

English summary
Sanju Weds Geetha 2 Discussion Going On Srinagara Kitty And Nagashekar seen together After Weekend With Ramya Episode, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X