'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ರುಕ್ಮಿಣಿ ವಸಂತ್ ಫ್ಯಾನ್ಸ್ ಟೆನ್ಷನ್ ಆಗಿರೋದ್ಯಾಕೆ?

4 ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಸಿನಿಮಾ ರಿಲೀಸ್ ಆಗುತ್ತಿದೆ. 'ಟಾಕ್ಸಿಕ್' ಈಗಾಗಲೇ ದೇಶಾದ್ಯಂತೆ ಹವಾ ಸೃಷ್ಟಿಸಿದ್ದು, ಭರ್ಜರಿ ಪ್ರಚಾರ ಆರಂಭ ಆಗಿದೆ. ಈ ಬೆನ್ನಲ್ಲೇ ಇಂದು (ಫೆಬ್ರವರಿ 20) ಮತ್ತೊಂದು ಟೀಸರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ.

ಕೆಲವು ಯಶ್ ಡಬಲ್ ರೋಲ್ ಮಾಡುತ್ತಿದ್ದಾರೆ ಅಂತ ಚರ್ಚೆ ಮಾಡುತ್ತಿದ್ದರೆ, ಇನ್ನು ಕೆಲವರು ಆಕ್ಷನ್ ಸೀನ್‌ಗಳ ಬಗ್ಗೆ ಮಾತಾಡುತ್ತಿದ್ದಾರೆ. ಮತ್ತೆ ಕೆಲವರು ಸಿನಿಮಾ ಮೇಕಿಂಗ್ ಜಬರ್ದಸ್ತ್ ಆಗಿರುತ್ತೆ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಕೆಲವರು ಹಸಿಬಿಸಿ ಸೀನ್‌ಗಳ ಬಗ್ಗೆನೂ ಮಾತಾಡುತ್ತಿದ್ದಾರೆ. ಕೆಲವರಂತೂ ಹಸಿಬಿಸಿ ದೃಶ್ಯಗಳಲ್ಲಿ ಇರೋ ನಾಯಕಿ ಯಾರು ಅಂತ ಹುಡುಕುವುದಕ್ಕೆ ಮುಂದಾಗಿದ್ದಾರೆ.

After Yash Toxic teaser release Rukmini Vasanth fans worried on bold scenes

ಇನ್ನು ಈ ಸಿನಿಮಾದಲ್ಲಿ ಒಬ್ಬರಲ್ಲ ಇಬ್ಬರಲ್ಲ ಐದು ಮಂದಿ ನಾಯಕಿಯರು ಇದ್ದಾರೆ. ಇವರಲ್ಲಿ ಆ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದು ಯಾರು? ಅನ್ನೋ ಅಂತ ನೆಟ್ಟಿಗರು ತಲೆಕೆಡಿಸಿಕೊಂಡು ಕೂತಿದ್ದಾರೆ. ಅದೇ ಇನ್ನೊಂದು ಕಡೆ 'ಟಾಕ್ಸಿಕ್' ಟೀಸರ್ ರಿಲೀಸ್ ಆಗುತ್ತಿದ್ದಂತೆ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಟೆನ್ಷನ್ ಶುರುವಾಗಿದೆ. ಅಸಲಿಗೆ ಇವರ ಆತಂಕಕ್ಕೆ ಕಾರಣವೇ ಈ ಬೋಲ್ಡ್ ಸೀನ್.

'ಟಾಕ್ಸಿಕ್' ಯಶ್ ಅಭಿಮಾನಿಗಳಿಗಷ್ಟೇ ಅಲ್ಲ. ಸಿನಿ ಮಂದಿಗೆ ಅಚ್ಚರಿ ಮೂಡಿಸಿದೆ. ಇದೂವರೆಗೂ ಯಶ್ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಅವರ ಸಿನಿಮಾದಲ್ಲಿ ಹಸಿಬಿಸಿ ದೃಶ್ಯಗಳನ್ನು ನೋಡಿದ್ದಿಲ್ಲ. ಆದ್ರೀಗ ಬಿಡುಗಡೆಯಾಗಿರುವ ಎರಡೂ ಟೀಸರ್‌ನಲ್ಲಿಯೂ ಬೋಲ್ಡ್ ಸೀನ್‌ಗಳು ಇವೆ. ಇದು ಯಶ್ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ ಮಾಡಿರುವ ಸಿನಿಮಾ ಅನ್ನೋ ಸುಳಿವಂತೂ ಸಿಕ್ಕಿದೆ. ಆದರೆ, ಭಾರತದಲ್ಲಿ ಹೇಗೆ ಸ್ವೀಕರಿಸುತ್ತಾರೆ ಅನ್ನೋದೇ ಕುತೂಹಲ.

ಇನ್ನು ಸಿನಿಮಾದ ಟೀಸರ್ ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡುತ್ತಿದೆ. ಅದರಲ್ಲೂ ಈ ಟೀಸರ್ ನೋಡಿದ ಮೇಲೆ ರುಕ್ಮಿಣಿ ವಸಂತ್ ಅಭಿಮಾನಿಗಳು ಟೆನ್ಷನ್ ಮಾಡಿಕೊಂಡಿದ್ದಾರೆ. ಹೌದು, ಟೀಸರ್ ರಿಲೀಸ್ ಆದಲ್ಲಿಂದ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಸೀನ್‌ನಲ್ಲಿ ಇರುವ ನಟಿ ರುಕ್ಮಿಣಿ ವಸಂತ್ ಅಂತಲೇ ಚರ್ಚೆ ಮಾಡುತ್ತಿದ್ದಾರೆ. ಇದು ಅವರ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

ಯಾಕಂದ್ರೆ, ಇದೂವರೆಗೂ ರುಕ್ಮಿಣಿ ವಸಂತ್ ಬೋಲ್ಡ್ ಸೀನ್‌ಗಳಲ್ಲಿ ನಟಿಸಿಲ್ಲ. 'ಸಪ್ತ ಸಾಗರದಾಚೆ ಎಲ್ಲೋ', 'ಕಾಂತಾರ ಚಾಪ್ಟರ್ 1'ನಂತಹ ಸಿನಿಮಾಗಳಲ್ಲಿ ನಟಿಸಿರುವ ನಟಿಗೆ ದೇಶಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರ ಟ್ರೆಡಿಷನಲ್ ಲುಕ್‌ಗೆ ಫಿದಾ ಆಗಿದ್ದಾರೆ. ಹೀಗಾಗಿ ಬೋಲ್ಡ್ ಸೀನ್‌ಗಳಲ್ಲಿ ಅವರನ್ನು ನೋಡುವುದಕ್ಕೆ ಕಷ್ಟ ಪಡುತ್ತಿದ್ದಾರೆ. ಆದರೆ, ಟೀಸರ್ ರಿಲೀಸ್ ಆದಲ್ಲಿಂದ ಓಡಾಡುತ್ತಿರುವ ಪೋಸ್ಟ್ ಅವರನ್ನು ಗಾಬರಿ ಬೀಳಿಸಿದೆ.

ಇನ್ನು ಟಾಕ್ಸಿಕ್‌ನಲ್ಲಿ ಒಬ್ಬರೇ ಹೀರೋಯಿನ್ ಇಲ್ಲ. ಸೌತ್ ಸೂಪರ್‌ಸ್ಟಾರ್ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಇದ್ದಾರೆ. ಹೀಗಾಗಿ ಇವರಲ್ಲಿ ಯಾರೆಲ್ಲ ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದಾರೆ ಅನ್ನೋ ಇನ್ನೊಂದು ಕುತೂಹಲವೂ ಹುಟ್ಟಿಕೊಂಡಿದೆ. ಏನೇ ಇದ್ದರೂ ಸಿನಿಮಾ ಇನ್ನೇನು ಮಾರ್ಚ್ 19ಕ್ಕೆ ರಿಲೀಸ್ ಆಗುತ್ತಿದೆ. ಆಗ ಈ ಎಲ್ಲಾ ಸೀಕ್ರೆಟ್ ರಿವೀಲ್ ಆಗಲಿದೆ.

More from Filmibeat

English summary
After Yash Toxic teaser release Rukmini Vasanth fans worried on bold scenes.
Read more about: yash rukmini vasanth toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X