Vijay Surya: 'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಈಗ 'ವೀರಪುತ್ರ'.. ಮಾಸ್ ಲುಕ್ ಕೊಟ್ಟ ಚಾಕೊಲೇಟ್ ಹೀರೊ!

ಕನ್ನಡ ಕಿರುತೆರೆಯ ಸ್ಟಾರ್ ನಟ ವಿಜಯ್ ಸೂರ್ಯ. 'ಅಗ್ನಿಸಾಕ್ಷಿ'ಯಂತಹ ಮೆಗಾ ಧಾರಾವಾಹಿಯಿಂದ ಕಿರುತೆರೆ ವೀಕ್ಷಕರ ಫೇವರಿಟ್ ನಟನಾಗಿದ್ದಾರೆ. ಧಾರಾವಾಹಿ ಜೊತೆ ಜೊತೆಗೆ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇದುವರೆಗೂ ಸಿನಿಮಾದಲ್ಲಿ ಬಿಗ್ ಬ್ರೇಕ್ ಸಿಕ್ಕಿಲ್ಲ.

ಇದುವರೆಗೂ ಸಿನಿಮಾಗಳಲ್ಲಿ ಹೆಚ್ಚಾಗಿ ಚಾಕೊಲೇಟ್ ಬಾಯ್ ಆಗಿ ಕಂಡಿದ್ದ ವಿಜಯ್ ಸೂರ್ಯ ಈಗ ಮಾಸ್ ಅವತಾರವೆತ್ತಲು ರೆಡಿಯಾಗಿದ್ದಾರೆ. ಇಂದು( ಸೆಪ್ಟೆಂಬರ್ 8) ವಿಜಯ್ ಸೂರ್ಯ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮಾಸ್ ಲುಕ್ ಕೊಟ್ಟಿರೊ ಹೊಚ್ಚ ಹೊಸ ಸಿನಿಮಾ 'ವೀರಪುತ್ರ'ದ ಫಸ್ಟ್ ಲುಕ್ ರಿವೀಲ್ ಆಗಿದೆ.

Agnisakshi fame Vijay Surya new movie Veeraputra First Look out

'ಅಗ್ನಿಸಾಕ್ಷಿ' ಧಾರಾವಾಹಿ ಬಳಿಕ ವಿಜಯ್ ಸೂರ್ಯಗೆ ಕಿರುತೆರೆಯಲ್ಲೇ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ಒಂದೊಳ್ಳೆ ಸಿನಿಮಾ ಸಿಕ್ಕಿದ್ದಿದ್ದರೆ, ಇಷ್ಟೊತ್ತಿಗಾಗಲೇ ಸ್ಯಾಂಡಲ್‌ವುಡ್‌ನಲ್ಲೂ ದೊಡ್ಡ ಸಕ್ಸಸ್ ಸಿಕ್ಕಿರುತ್ತಿತ್ತು. ಅದಕ್ಕಾಗಿಯೇ ಈ ಬಾರಿ ಮಾಸ್ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಿದ್ದರೆ, 'ವೀರಪುತ್ರ' ಕಥೆಯೇನು? ಯಾರೆಲ್ಲಾ ಇದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಗಡ್ ಅವತಾರದಲ್ಲಿ ಚಾಕೊಲೇಟ್ ಹೀರೊ

ಇದುವರೆಗೂ ಚಾಕೊಲೇಟ್ ಹೀರೊ ಎನಿಸಿಕೊಂಡಿದ್ದ ವಿಜಯ್ ಸೂರ್ಯ ಮಾಸ್ ಲುಕ್ ಕೊಟ್ಟಿದ್ದಾರೆ. ಉದ್ದ ಕೂದಲು ಬಿಟ್ಟು, ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಇಂತಹದ್ದ ಮಾಸ್ ಅವತಾರದಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡಿರಲಿಲ್ಲ. ಇಂದು (ಸೆಪ್ಟೆಂಬರ್ 8) ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವೀರಪುತ್ರ ತಂಡ ವಿಜಯ್ ಸೂರ್ಯ ಮಾಸ್ ಅವತಾರದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ.

'ವೀರಪುತ್ರ'ನ ಕಥೆಯೇನು?

ಫಸ್ಟ್ ಲುಕ್‌ನಲ್ಲಿ ರಿವೀಲ್ ಆದಂತೆ 'ವೀರಪುತ್ರ' ಸಿನಿಮಾದ ಕಥೆಯಲ್ಲೂ ಅಷ್ಟೇ ಮಾಸ್ ಎಲಿಮೆಂಟ್‌ಗಳಿವೆ. ಈ ಸಿನಿಮಾದಲ್ಲಿ ಮೆಡಿಕಲ್ ಮಾಫಿಯಾ ಜೊತೆ ಜೊತೆಗೆ ಫ್ಯಾಮಿಲಿ ರಿವೇಜ್ ಸ್ಟೋರಿಯನ್ನು ತೋರಿಸಲಾಗುತ್ತಿದೆ. ಈ ಹಿಂದೆ 'ಸಂಪ್ಲಿಮೆಂಟರಿ' ಅನ್ನೋ ಸಿನಿಮಾವನ್ನು ನಿರ್ದೇಶಿಸಿದ್ದ ದೇವರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಜಯ್ ಸೂರ್ಯಗೆ ಜೋಡಿಯಾಗಿ ಲೇಖಚಂದ್ರ ನಟಿಸುತ್ತಿದ್ದಾರೆ. ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Agnisakshi fame Vijay Surya new movie Veeraputra First Look out

'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಬ್ಯುಸಿ

'ವೀರಪುತ್ರ' ಸಿನಿಮಾದ ಶೇ.60ರಷ್ಟು ಶೂಟಿಂಗ್ ಈಗಾಗಲೇ ಮುಗಿದಿದೆ. ಇನ್ನು ಉಳಿದ ಭಾಗದ ಚಿತ್ರೀಕರಣ ಮುಂದಿನ ತಿಂಗಳಿನಿಂದ ಆರಂಭ ಆಗುತ್ತಿದೆ. ಸದ್ಯ ಕಿರುತೆರೆ ನಟ ವಿಜಯ್ ಸೂರ್ಯ 'ನಮ್ಮ ಲಚ್ಚಿ' ಅನ್ನೋ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಇದರ ಜೊತೆಗೆ 'ವೀರಪುತ್ರ'ನಾಗಿ ತೆರೆಮೇಲೆ ಮಾಸ್ ಅವತಾರದಲ್ಲಿ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.

More from Filmibeat

English summary
Agnisakshi fame Vijay Surya new movie Veeraputra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X