"ಶುಗರ್ ಇಡೋಣ ಅಂತ ರಕ್ಷಿತ್.. ಇರುವೆ ಇದ್ದಾವೆ ಅಂತ ರಿಷಬ್"; ಅಜನೀಶ್ ಹೇಳಿದ ಶುಗರ್ ಕಥೆಯೇನು?

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಶೆಟ್ಟರ ಹವಾ ನಡೀತಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ತಮ್ಮದೇ ವಿಶಿಷ್ಠ ಶೈಲಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜನರಿಗೆ ವಿಶಿಷ್ಠ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇವರಿಗೆ ಸಾಮಾನ್ಯವಾಗಿ ಮ್ಯೂಸಿಕ್ ಕೊಡೋದು ಅಜನೀಶ್ ಲೋಕನಾಥ್. ಅದರಲ್ಲೂ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಗೆ ಅಜನೀಶ್ ಅವರೇ ಬೇಕು.

ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಅಜನೀಶ್ ಅವರಿಂದ ಟ್ಯೂನ್ ಅನ್ನು ಹಾಕಿಸಿದ್ದಾರೆ. ಸಂಗೀತ ಅಂದ ಕೂಡಲೇ ಕೇವಲ ಹಾಡುಗಳು ಅಂತಷ್ಟೇ ಅಲ್ಲ. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಮುಖ್ಯ ಆಗುತ್ತೆ. ಅಜನೀಶ್ ಲೋಕನಾಥ್ ಹೇಳಿ-ಕೇಳಿ ಎಫೆಕ್ಟಿವ್ ಆಗಿ ಹಿನ್ನೆಲೆ ಸಂಗೀತವನ್ನು ನೀಡುವುದರಲ್ಲಿ ಎಕ್ಸ್‌ಪರ್ಟ್‌. ರಿಕ್ಷಿತ್ ಹಾಗೂ ರಿಷಬ್ ಇಬ್ಬರೂ ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹೀಗಾಗಿ ಅಜನೀಶ್ ಲೋಕನಾಥ್ ಅವರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್.

Ajaneesh Lokanth explained about Rakshit Shetty and Rishab Shetty music selection

ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡಿದ್ದರೂ ಮ್ಯೂಸಿಕ್ ಬಗ್ಗೆ ಇಬ್ಬರೂ ಆಲೋಚಿಸುವ ಪರಿಯೇ ಬೇರೆ. ಈ ವಿಷಯವನ್ನು ಅಜನೀಶ್ ಲೋಕನಾಥ್ ಇತ್ತೀಚೆಗೆ ಮೆಟ್ರೋಸಾಗದಲ್ಲಿ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇಬ್ಬರ ಬಗ್ಗೆ ಒಂದು ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಹಾಗೇ, ರಿಚರ್ಡ್ ಆಂಟನಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

ರಕ್ಷಿತ್-ಅಜನೀಶ್ ಮ್ಯೂಸಿಕ್ ಸ್ಟೈಲ್

ರಕ್ಷಿತ್ ಶೆಟ್ಟಿ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡೋದು ಬೇರೆ ರೀತಿ. ಅದು ರಕ್ಷಿತ್ ಹಾಗೂ ಅವರಿಗೆ ಮಾತ್ರ ಸೂಟ್ ಆಗುತ್ತೆ ಅನ್ನೋದ ಅಜನೀಶ್ ಅಭಿಪ್ರಾಯ. "ನನಗೆ ಹಾಗೂ ರಕ್ಷಿತ್ ಶೆಟ್ಟಿ ಒಂದು ಅಂಡರ್‌ಸ್ಟ್ಯಾಂಡಿಂಗ್ ಇದೆ. ಅಜು ನಮ್ ಸ್ಟೈಲ್‌ನಲ್ಲಿ ಮಾಡೋಣ ಅಂದಾಗ ಅದು ನನಗೆ ಅರ್ಥ ಆಗುತ್ತೆ. ರಕ್ಷಿತ್ ಶೆಟ್ಟಿಗೆ ಅರ್ಥ ಆಗುತ್ತೆ. ಅದು ಬೇರೆ ಯಾರಿಗೂ ಅರ್ಥ ಆಗಲ್ಲ. ಮಾತಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ನಾವು ಹೇಗೆ ಕೆಲಸ ಮಾಡುತ್ತೇವೆ ಅಂದರೆ, 'ಉಳಿದವರು ಕಂಡಂತೆ' ಸಿನಿಮಾವನ್ನು ನಾವು ಸೆಕೆಂಡ್ಸ್ ಲೆಕ್ಕದಲ್ಲಿ ಕೆಲಸ ಮಾಡಿದ್ದೇವೆ. 15 ಸೆಕೆಂಡ್‌ಗಳಿಗೆ ಅವರು ವಿಡಿಯೋ ಎಡಿಟ್ ಮಾಡಿಕೊಟ್ಟರೆ, ಆ 15 ಸೆಕೆಂಡ್‌ಗಳಿಗೆ ನಾನು ಮ್ಯೂಸಿಕ್ ಮಾಡಿ ಮುಂದಿನ 15 ಸೆಕೆಂಡ್‌ಗಳಿಗೆ ಮುಂದುವರೆಸುತ್ತಿದ್ದೆ. ಅವರು 30 ನಿಮಿಷಕ್ಕೆ ವಿಡಿಯೋ ಮಾಡಿಕೊಟ್ಟರೆ, ನಾನು 45 ಸೆಕೆಂಡ್‌ಗಳಿಗೆ ಮಾಡುತ್ತಿದ್ದೆ. ಅವರು 45 ಸೆಕೆಂಡ್‌ಗೆ ಮಾಡಿದರೆ, ನಾನು ಒಂದು ನಿಮಿಷಕ್ಕೆ ಎಡಿಟ್ ಮಾಡುತ್ತಿದ್ದೆ. ಈತರ ಸೆಕೆಂಡ್ ಸೆಕೆಂಡ್ ಲೆಕ್ಕದಲ್ಲಿ ಕೆಲಸ ಮಾಡಿದ್ದೇವೆ. ಇದು ನಮ್ಮ ನಡುವೆ ಹುಟ್ಟಿಕೊಂಡಿರೋ ಸ್ಟೈಲ್‌. ಬೇರೆ ಯಾರೊಂದಿಗೂ ಇದು ಸೆಟ್ ಆಗುವುದಿಲ್ಲ" ಎನ್ನುತ್ತಾರೆ ಅಜನೀಶ್ ಲೋಕನಾಥ್.

Also Read
Rakshit Shetty:
Rakshit Shetty: "ಆ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.. ಎಲ್ಲರಿಗೂ ಗೌರವ ಕೊಡೋಣ"; ರಕ್ಷಿತ್ ಹಳೇ ವಿಡಿಯೋ ವೈರಲ್
Ajaneesh Lokanth explained about Rakshit Shetty and Rishab Shetty music selection

'ರಿಚರ್ಡ್ ಆಂಟನಿ' ಡಿಕೋಡ್

ಅಜನೀಶ್ ಲೋಕನಾಥ್ 'ರಿಚರ್ಡ್ ಆಂಟನಿ' ಟೀಸರ್‌ ಅನ್ನು ಡಿಕೋಡ್ ಮಾಡಿದ್ದಾರೆ. ಅದು ಕೂಡ ಇಂಟ್ರೆಸ್ಟಿಂಗ್ ಆಗಿದೆ. "ಕಾಗೆ ಬಂದಾಗ, ಆ ಗೋರಿಯಲ್ಲಿ ಬರೆದಿರೋದು, ಅಚ್ಯುತ್ ಅಣ್ಣ ಯಾರು ಬೇಕಾದರೂ ಬರಲಿ, ಇವನು ಮಾತ್ರ ಬರೋದು ಬೇಡ ಅಂತ ಹೇಳುವ ಡೈಲಾಗ್ ಇದೆ. ಅಂದರೆ, ಏನೋ ಆಗುತ್ತಿದೆ ಅಂತ ಅಲ್ವ? ಅದನ್ನು ನೆನೆಪಿಸಬೇಕು ಅಂದರೆ, ಉಳಿದರು ಕಂಡಂತೆ ಸಿನಿಮಾದ ಕೋರ್ ಮ್ಯೂಸಿಕ್ ತೆಗೆದುಕೊಳ್ಳಬೇಕು. ಅದಕ್ಕೆ ಆ ಥೀಮ್ ಅನ್ನು ಬಳಕೆ ಮಾಡಿದ್ದೇವೆ. ಆದರೆ, ನೋಡಿದರೆ ಆ ತರ ಇರೋದಿಲ್ಲ. ಇನೋ ಒಂದು ಕಾದಿದೆ ಅನ್ನೋ ತರ ಇರುತ್ತೆ. ಅದಕ್ಕೆ ಅಲ್ಲೂ ಕಾಗೆ ಇದೆ, ರಿಚರ್ಡ್ ಆಂಟನಿ ಅಂತ ಬರೆದಿದೆ. ಅಲ್ಲೂ ಅಚ್ಯುತ್ ಅಣ್ಣ ಇದ್ದಾರೆ." ಎನ್ನುತ್ತಾರೆ.

ಸಮುದ್ರದಲ್ಲಿ ಈಜುತ್ತಿರೋದ್ಯಾರು?

"ಟೀಸರ್‌ನಲ್ಲಿ ಒಂದು ಸಮುದ್ರ ಇದೆ. ಅಲ್ಲೊಂದು ಹಡುಗು ಇರುತ್ತೆ. ಒಬ್ಬ ಈಜಿಕೊಂಡು ಇರುತ್ತಾನೆ. ಇದೆಲ್ಲದಕ್ಕೂ ಕನೆಕ್ಷನ್ ಇದೆ. ಉಳಿದವರು ಕಂಡಂತೆ ಸಿನಿಮಾವನ್ನು ಹೇಗೆ ಕನೆಕ್ಟ್ ಮಾಡಿಕೊಳ್ಳುತ್ತಿರೋ, ಹಾಗೇ ರಿಚರ್ಡ್ ಆಂಟನಿಯನ್ನು ಹಾಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ. ಅದೇ ರಿಚರ್ಡ್‌ ಆಂಟೋನಿ ಥೀಮ್ ಅಂದರೆ ರಿಚ್ಚಿ, ಅದಕ್ಕೊಂದು ಜೀವನೇ ಇದೆ." ಎಂದು ಅಜನೀಶ್ ಲೋಕನಾಥ್ ಹೇಳಿದ್ದಾರೆ.

English summary
Ajaneesh Lokanth explained about Rakshit Shetty and Rishab Shetty music selection .
Read more about: rakshit shetty rishab shetty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X