'ರಿಚರ್ಡ್ ಆಂಟನಿ' ಬಗ್ಗೆ ಬಾಂಬ್ ಸಿಡಿಸಿದ ಅಜನೀಶ್ ಲೋಕನಾಥ್; ರಕ್ಷಿತ್ ಶೆಟ್ಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಯ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ರಿಚರ್ಡ್ ಆಂಟನಿ' (Richard Anthony) ಕೂಡ ಒಂದು. ಇದೊಂದು ಸಿನಿಮಾಗಾಗಿ ಕನ್ನಡಿಗರು ಕಾದೂ ಕಾದು ಸುಸ್ತಾಗಿದ್ದು ಬಿಟ್ಟರೆ, ರಕ್ಷಿತ್ ಶೆಟ್ಟಿಯಿಂದ ಯಾವುದೇ ಅಪ್‌ಡೇಟ್ ಇಲ್ಲ. ಕೆಲವು ವರ್ಷಗಳಿಂದ ಈ ಸಿನಿಮಾಗಾಗಿ ರಕ್ಷಿತ್ ಶೆಟ್ಟಿ ತೆರೆಮರೆಯಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ, ಅದ್ಯಾಕೋ ಇನ್ನೂ ಮುಹೂರ್ತವೇ ಕೂಡ ಬಂದಿಲ್ಲ. ಇತ್ತ ಸಿಂಪಲ್ ಸ್ಟಾರ್ ಸುಳಿವು ಕೂಡ ಇಲ್ಲ.

ಇದು ರಕ್ಷಿತ್ ಶೆಟ್ಟಿಯ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್. ಹೀಗಾಗಿ 'ರಿಚರ್ಡ್ ಆಂಟನಿ'ಗೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಕೆಲವು ವರ್ಷಗಳಿಂದ ಈ ಸಿನಿಮಾ ಸ್ಕ್ರಿಪ್ಟ್ ಮಾಡುತ್ತಾ ಕೂತಿದ್ದಾರೆ. ಆದರೆ, ಇನ್ನೂ ಎಷ್ಟು ದಿನ ಅನ್ನೋದು ಸಿನಿಪ್ರೇಮಿಗಳ ಪ್ರಶ್ನೆ ಆಗಿತ್ತು. ಅದಕ್ಕೆ ಸಿಂಪಲ್ ಸ್ಟಾರ್ ಕಡೆಯಿಂದ ಉತ್ತರ ಸಿಕ್ಕಿರಲಿಲ್ಲ. ಆದ್ರೀಗ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ 'ಬಾಂಬ್' ಅನ್ನೇ ಸಿಡಿಸಿದ್ದಾರೆ.

Ajaneesh Loknath gave update on Rakshith Shetty upcoming movie Richard Anthony

ಹೌದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಅಂದ್ಮೇಲೆ ಇದು ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಅನ್ನೋದು ಸುದ್ದಿ. ಆದ್ರೆ, ಇಷ್ಟು ದಿನ ಕಾದಿದ್ದಕ್ಕೆ ಉತ್ತರ ಸಿಗೋ ಸಮಯ ಬಂದು ಬಿಟ್ಟಿದೆ ಅನಿಸುತ್ತಿದೆ. ಕಾರ್ಯಕ್ರಮವೊಂದರಲ್ಲಿ ಅಜನೀಶ್ ಲೋಕನಾಥ್ 'ರಿಚರ್ಡ್ ಆಂಟನಿ' ಬಗ್ಗೆ ಅಪ್‌ಡೇಟ್ ಕೊಟ್ಟಿರೋದು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಅದರ ಡಿಟೈಲ್ಸ್ ಇಲ್ಲಿದೆ.

ಏನಿದೆ ಅಪ್‌ಡೇಟ್?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಹಳ ದಿನಗಳ ನಂತ್ರ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇನ್ನು 'ಸಪ್ತ ಸಾಗರದಾಚೆ ಎಲ್ಲೋ' ಅಂತಹ ಭಾವನಾತ್ಮಕ ಸಿನಿಮಾದಲ್ಲಿ ಅಳಿಸಿದ ಬಳಿಕ ಕಾಣೆಯಾದವರು ಇದೂವರೆಗೂ ತೆರೆಮೇಲೆ ಕಂಡಿಲ್ಲ. ಹೀಗಾಗಿ 'ರಿಚರ್ಡ್ ಆಂಟನಿ' ಸೆಟ್ಟೇರುತ್ತೋ ಇಲ್ವೋ ಅಂತ ಸಿನಿಪ್ರಿಯರು ಆತಂಕಕ್ಕೆ ಒಳಗಾಗಿದ್ದರು. ಆದ್ರೀಗ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಸೆಟ್ಟೇರುತ್ತೆ ಎಂಬ ಸುಳಿವು ನೀಡಿದ್ದಾರೆ.

English summary
Ajaneesh Loknath gave update on Rakshith Shetty upcoming movie Richard Anthony. Hombale Films is producing this most anticipated movie. Ajaneesh Loknath said Richard Anthony is like nuclear bomb.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X