For Quick Alerts
  ALLOW NOTIFICATIONS  
  For Daily Alerts

  'ಲವ್ ಯು ರಚ್ಚು' ಸಿನಿಮಾದ ಅಸಲಿ ನಿರ್ದೇಶಕ ಅಜಯ್ ರಾವ್: ಸಾಕ್ಷಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹಿ!

  |

  2021ರಲ್ಲಿ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾ 'ಲವ್ ಯು ರಚ್ಚು'. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಅಜಯ್ ರಾವ್ ಇದೇ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಸಿನಿಮಾದ ಹಾಡುಗಳು ಹಾಗೂ ಟ್ರೈಲರ್‌ನಿಂದ ಸದ್ದು ಮಾಡುತ್ತಿತ್ತು. ಆದರೆ, ಕೆಲವು ದಿನಗಳಿಂದ ಈ ಸಿನಿಮಾ ವಿವಾದಗಳಿಗೆ ಸಿಲುಕಿದೆ. ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಮಧ್ಯೆ ಎಲ್ಲವೂ ಸರಿಯಲ್ಲ ಅನ್ನುವುದು ಮತ್ತೆ ಸಾಬೀತಾಗುತ್ತಿದೆ.

  Recommended Video

  ಲವ್‌ ಯೂ ರಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿ ಆಗದ ಅಜಯ್ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.

  ಇಷ್ಟು ದಿನ ನಿರ್ಮಾಪಕ ಹಾಗೂ ನಟನ ಮುನಿಸಿನ ಹಿಂದೆ ನೂರೆಂಟು ಕಥೆಗಳು ಹುಟ್ಟಿಕೊಂಡಿತ್ತು. ಈಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪುರಾವೆ ಕೂಡ ಸಿಕ್ಕಿದೆ. 'ಲವ್ ಯು ರಚ್ಚು' ಸಿನಿಮಾ ನಿರ್ದೇಶನ ಮಾಡಿದ್ದು, ಶಂಕರ್ ಎಸ್ ರಾಜ್ ಅಲ್ಲ. ಬದಲಿಗೆ ಸ್ವತ: ಅಜಯ್ ರಾವ್ ಅನ್ನುವ ವಿಷಯ ಹೊರಬಿದ್ದಿದೆ. ಅಸಲಿಗೆ ಈ ಮಾತು ಎಷ್ಟು ಸತ್ಯ? ಇದಕ್ಕೆ ನಟಿ ರಚಿತಾ ರಾಮ್ ಕೂಡ ಸಹಿ ಹಾಕಿದ್ದೇಕೆ? ಇಂಥ ಒಂದಿಷ್ಟು ಗೊಂದಲಗಳಿಗೆ ಪತ್ರವೊಂದು ಎಡೆ ಮಾಡಿಕೊಟ್ಟಿದೆ.

  'ಲವ್ ಯು ರಚ್ಚು' ಡೈರೆಕ್ಟ್ ಮಾಡಿದ್ದು ಯಾರು?

  'ಲವ್ ಯು ರಚ್ಚು' ಡೈರೆಕ್ಟ್ ಮಾಡಿದ್ದು ಯಾರು?

  ರಚಿತಾ ರಾಮ್ ಹಾಗೂ ಅಜಯ್ ರಾವ್ ಸಿನಿಮಾ 'ಲವ್ ಯು ರಚ್ಚು' ದಿನದಿಂದ ದಿನಕ್ಕೆ ಒಂದೊಂದೇ ವಿವಾದಕ್ಕೆ ಸಿಲುಕುತ್ತಿದೆ. ಈಗ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಯಾರು? ಎನ್ನುವ ಪ್ರಶ್ನೆ ಎದ್ದಿದೆ ಇದಕ್ಕೆ ಕಾರಣ ಒಂದು ಕರಾರುಪತ್ರ. ಅಜಯ್ ರಾವ್ ಹಾಗೂ ಜಿ ಸಿನಿಮಾಸ್ ಮಾಲೀಕ ಗುರುದೇಶಪಾಂಡೆ ನಡುವೆ ನಡೆದ ಆದ ಒಂದು ಒಡಂಬಡಿಕೆ ಈಗ ಎಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ಈ ಒಡಂಬಡಿಕೆಯಲ್ಲಿ ಅಜಯ್ ರಾವ್ ಅವರಿಗೆ ತೆರೆಯ ಹಿಂದೆ ನಿರ್ದೇಶನ ಮಾಡಲು ಒಪ್ಪಿ ನೀಡಿರುವುದಾಗಿ ತಿಳಿಸಲಾಗಿದೆ. ಹಾಗಿದ್ದರೆ, ಅಸಲಿಗೆ 'ಲವ್ ಯು ರಚ್ಚು' ಸಿನಿಮಾ ನಿರ್ದೇಶನ ಮಾಡಿದ್ದು ಯಾರು? ಎನ್ನುವ ಪ್ರಶ್ನೆ ಎದ್ದಿದೆ.

  ಅಜಯ್ ಹಾಗೂ ಜಿ ಸಿನಿಮಾಸ್ ಒಡಂಬಡಿಕೆಯಲ್ಲೇನಿದೆ?

  ಅಜಯ್ ಹಾಗೂ ಜಿ ಸಿನಿಮಾಸ್ ಒಡಂಬಡಿಕೆಯಲ್ಲೇನಿದೆ?

  ಅಜಯ್ ರಾವ್ ಹಾಗೂ ಜಿ ಸಿನಿಮಾಸ್ ನಡುವೆ ನಡೆದ ಒಡಂಬಡಿಕೆಯ ಪತ್ರ ಹೀಗೆ ನಮೂದಿಸಲಾಗಿದೆ. " ಜಿ ಸಿನಿಮಾಸ್ ಸಂಸ್ಥೆಯಡಿಯಲ್ಲಿ ಗುರುದೇಶಪಾಂಡೆ ನಿರ್ಮಿಸುತ್ತಿರುವ ' ಲವ್ ಯು ರಚ್ಚು' ಕನ್ನಡ ಚಿಲನಚಿತ್ರಕ್ಕೆ ಅಜಯ್ ರಾವ್ ನಾಯಕನಾಗಿ ಹಾಗೂ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ತೆರೆಯ ಹಿಂದೆ ನಿರ್ದೇಶನ ಮಾಡಲು ಅಜಯ್ ರಾವ್ ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಅಧಿಕೃತವಾಗಿ ಒಪ್ಪಿಗೆ ನೀಡಿರುತ್ತೇವೆ. ಆದರೆ ತೆರೆಯ ಮೇಲೆ ಶಂಕರ್ ಎಸ್ ರಾಜ್ ಅವರ ಹೆಸರನ್ನು ನಿರ್ದೇಶಕ ಎಂದು ಇಡಲಾಗುವುದು. ಚಿತ್ರದ ಮೊದಲ ಪ್ರತಿ ಬರುವವರಗೂ ಎಲ್ಲಾ ತಾಂತ್ರಿಕ ಕಾರ್ಯ ನಿರ್ವಹಣೆಯನ್ನು ಅಜಯ್ ರಾವ್ ಅವರ ನೇತೃತ್ವದಲ್ಲಿ ಮುಂದುವರೆಸಲು ಒಪ್ಪಿರುತ್ತೇವೆ." ಎಂದು ತಿಳಿಸಲಾಗಿದೆ.

   ಈ ಒಡಂಬಡಿಕೆಗೆ ರಚಿತಾ ರಾಮ್ ಸಹಿ

  ಈ ಒಡಂಬಡಿಕೆಗೆ ರಚಿತಾ ರಾಮ್ ಸಹಿ

  'ಲವ್ ಯು ರಚ್ಚು' ಸಿನಿಮಾವನ್ನು ಅಜಯ್ ರಾವ್ ಅವರೇ ನಿರ್ದೇಶನ ಮಾಡುತ್ತಾರೆ ಎನ್ನುವ ಪತ್ರಕ್ಕೆ ಇಬ್ಬರು ಸಾಕ್ಷಿಗಳು ಸಹಿ ಹಾಕಿದ್ದಾರೆ. ಇದು ಅಜಯ್ ರಾವ್ ಹಾಗೂ ಜಿ ಸಿನಿಮಾಸ್ ನಡುವೆ ನಡೆದ ಕರಾರು ಪತ್ರ. ಇದಕ್ಕೆ 'ಲವ್ ಯು ರಚ್ಚು' ಸಿನಿಮಾ ನಾಯಕಿ ರಚಿತಾ ರಾಮ್ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ. ಶಂಕರ್ ಎನ್ನುವ ಮತ್ತೊಬ್ಬರು ಸಹಿ ಮಾಡಿದ್ದಾರೆ. ಹೀಗಾಗಿ 'ಲವ್ ಯು ರಚ್ಚು' ಅಸಲಿ ನಿರ್ದೇಶಕ ಯಾರು ಎನ್ನುವ ಬಗ್ಗೆ ಚರ್ಚೆ ಆರಂಭ ಆಗಿದೆ.

  ಜಿ ಸಿನಿಮಾಸ್ ಮಾಲೀಕ ಏನಂತಾರೆ?

  ಜಿ ಸಿನಿಮಾಸ್ ಮಾಲೀಕ ಏನಂತಾರೆ?

  ಅಜಯ್ ರಾವ್ ಹಾಗೂ ಜಿ ಸಿನಿಮಾಸ್ ಮಾಲೀಕರ ನಡುವೆ ನಡೆದ ಈ ಒಡಂಬಡಿಕೆ ಬಗ್ಗೆ ಗುರುದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಒಂದು ಸಿನಿಮಾ ತಂಡದೊಳಗೆ ಇರಬೇಕಾಗಿತ್ತು. ಇದು ಹೇಗೆ ಲೀಕ್ ಆಗಿದೆ ಅನ್ನುವುದು ಗೊತ್ತಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಯಾರು ಈ ಪತ್ರವನ್ನು ನೀಡಿದ್ದಾರೋ ಅವರ ಬಳಿಯೇ ಮಾಹಿತಿ ಪಡೆದುಕೊಳ್ಳಿ." ಎಂದು ನಿರ್ಮಾಪಕ ಗುರು ದೇಶಪಾಂಡೆ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಒಡಂಬಡಿಕೆ ಪತ್ರದ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಇರುವುದರಿಂದ 'ಲವ್ ಯು ರಚ್ಚು' ಸಿನಿಮಾದ ಅಸಲಿ ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲೇಬೇಕಿದೆ.

  English summary
  Ajay Rao is the real director for Rachita Ram starrer Love You Rachchu Movie. There is later roaming around that the Rachita Ram is the real director.
  Tuesday, December 21, 2021, 13:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X