twitter
    For Quick Alerts
    ALLOW NOTIFICATIONS  
    For Daily Alerts

    'ಲವ್ ಯು ರಚ್ಚು' ಅವಘಡ: ಆರೋಪಗಳಿಗೆಲ್ಲ ಅಜಯ್ ರಾವ್ ಉತ್ತರ

    By ರಾಮನಗರ ಪ್ರತಿನಿಧಿ
    |

    'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರ ವಿಚಾರಣೆ ಎದುರಿಸಿದ ನಟ ಅಜಯ್ ರಾವ್, ''ನಾನು ಕಂಡ ವಿಚಾರವನ್ನು ಪೊಲೀಸರಿಗೆ ಹೇಳಿದ್ದೇನೆ'' ಎಂದಿದ್ದಾರೆ.

    ಬಿಡದಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಮೋಹನ್ ಎದುರು ವಿಚಾರಣೆಗೆ ಹಾಜರಾದ ನಟ ಅಜಯ್ ರಾವ್ ವಿಚಾರಣೆ ಮುಗಿಸಿ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಗ್ಗೆ ಎದ್ದಿದ್ದ ಚರ್ಚೆಗಗಳಿಗೆ ಉತ್ತರ ನೀಡಿದರು.

    ಘಟನೆಯಲ್ಲಿ ಗಾಯಗೊಂಡಿದ್ದ ರಂಜಿತ್, ''ನಟ ಅಜಯ್ ರಾವ್ ಅಲ್ಲಿಯೇ ಇದ್ದರು ನನಗೆ ಸಹಾಯ ಮಾಡಲಿಲ್ಲ'' ಎಂದಿದ್ದ ಬಗ್ಗೆ ಮಾತನಾಡಿದ ಅಜಯ್ ರಾವ್, ''ಐಸಿಯುನಲ್ಲಿದ್ದು ಹೇಳಿಕೆ ಕೊಟ್ಟ ರಂಜಿತ್‌ರದ್ದು ಖಂಡಿತ ತಪ್ಪಲ್ಲ. ಆದರೆ ಅವನಿಗೆ ಹೇಳಿಕೆ ಕೊಡುವಂತೆ, ಐಸಿಯುನಲ್ಲಿದ್ದರೂ ಖಾಸಗಿ ವಿಡಿಯೋ ಮಾಡುವಂತೆ ಪ್ರೇರಿಪಿಸಿದವರದ್ದು ತಪ್ಪು. ಮೊದಲಿಗೆ ಆ ಹುಡುಗಿನಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಜಯ್ ರಾವ್ ಸೆಟ್‌ನಲ್ಲಿರಲಿಲ್ಲ ಎಂದು ಹೇಳಿದ್ದಾರೆ ಎಂಬ ತಪ್ಪು ಮಾಹಿತಿ ನೀಡಿ ಆತನಿಂದ ವಿಡಿಯೋ ಪಡೆದಿದ್ದಾರೆ. ನಾನು ಸೆಟ್‌ನಲ್ಲಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ನಾನು ಸೆಟ್‌ನಲ್ಲಿಯೇ ಇದ್ದೆ, ನಾಯಕಿ ಇರಲಿಲ್ಲ'' ಎಂದಿದ್ದಾರೆ ಅಜಯ್ ರಾವ್.

    ಮುಂದುವರೆದು ಮಾತನಾಡಿ, ''ಸೆಟ್‌ನಲ್ಲಿ ನಾನೊಬ್ಬನೇ ಇರಲಿಲ್ಲ. ನಾನು ಮೊದಲೇ ಹೇಳಿರುವಂತೆ ಅವನು ಬಿದ್ದ ಶಬ್ದಕ್ಕೆ ನಾವು ಓಡಿ ಬಂದೆವು. ಆ ವೇಳೆಗಾಗಲೆ ಅಲ್ಲಿ ಸಾಕಷ್ಟು ಮಂದಿ ಅವರ ಸುತ್ತ ಗುಂಪು ಸೇರಿದ್ದರು. ನಾನು ಹೆಚ್ಚು ಓದಿಲ್ಲ ಆದರೆ ಸ್ಕೌಟ್ಸ್ ಮಾಡಿಕೊಂಡಿದ್ದೇನೆ. ಅಪಘಾತವಾದವರಿಗೆ ಯಾರಾದರೂ ಪ್ರಥಮ ಚಿಕಿತ್ಸೆ ಮಾಡುತ್ತಿದ್ದರೆ ಅಲ್ಲಿ ಗುಂಪು ಸೇರಬಾರದು ಎಂಬ ಕನಿಷ್ಟ ಜ್ಞಾನ ನನಗೆ ಇದೆ. ಬಿದ್ದವರಿಗೂ ಯಾರೂ ಸಹಾಯ ಮಾಡದೇ ಇದ್ದು, ನಾನೂ ಸಹ ಹಾಗೆಯೇ ಮಾಡಿದ್ದರೆ ಅವರು ಹೇಳುವುದು ಒಪ್ಪಬಹುದಿತ್ತು'' ಎಂದಿದ್ದಾರೆ ಅಜಯ್ ರಾವ್.

    ಘಟನೆ ನಡೆದಾಗ ನಾನು ತುಸು ದೂರದಲ್ಲಿದ್ದೆ: ಅಜಯ್ ರಾವ್

    ಘಟನೆ ನಡೆದಾಗ ನಾನು ತುಸು ದೂರದಲ್ಲಿದ್ದೆ: ಅಜಯ್ ರಾವ್

    ''ಘಟನೆ ನಡೆದಾಗ ನಾನು ತುಸು ದೂರದಲ್ಲಿದ್ದೆ. ನಾನು ಅಲ್ಲಿಗೆ ಬಂದಾಗ ಯಾರಿಗೆ ಏನಾಗಿದೆ. ಘಟನೆಯ ತೀವ್ರತೆ ಎಷ್ಟು ಏನೊಂದೂ ಗೊತ್ತಿರಲಿಲ್ಲ. ಫೈಟ್ ಅಸಿಸ್ಟೆಂಟ್‌ಗಳು ಮಾಸ್ಟರ್ ಎಲ್ಲರೂ ವಿವೇಕ್ ಹಾಗೂ ರಂಜಿತ್ ಸುತ್ತ ಇದ್ದರು. ಆಗ ನಾನು ಏನು ಮಾಡಬಹುದಿತ್ತು. ಸಹಾಯ ಎಂದರೆ ಏನು ಸಹಾಯವನ್ನು ನಾನು ಆ ಸಂದರ್ಭದಲ್ಲಿ ಮಾಡಬಹುದಿತ್ತು. ನಾನು ಬರುವ ವೇಳೆಗಾಗಲೆ ಪ್ರಥಮ ಚಿಕಿತ್ಸೆ ಬಗ್ಗೆ ಜ್ಞಾನ ಇರುವ ವ್ಯಕ್ತಿ ಹಾಗೂ ಫೈಟ್ ಮಾಸ್ಟರ್ ಅವರನ್ನು ಅಟೆಂಡ್ ಮಾಡುತ್ತಿದ್ದರು. ಆ ಸಮಯದಲ್ಲಿ ನಾನು ಮೂಗು ತೂರಿಸುವುದು ಯಾವ ಕಾರಣಕ್ಕೂ ಸೂಕ್ತವಲ್ಲ'' ಎಂದರು ಅಜಯ್ ರಾವ್.

    ''ಹೀರೋನೆ ಮೊದಲು ಕಾಪಾಡಲು ಬರಬೇಕು ಎಂಬ ನಿಯಮ ಮಾಡಿಬಿಡೋಣ''

    ''ಹೀರೋನೆ ಮೊದಲು ಕಾಪಾಡಲು ಬರಬೇಕು ಎಂಬ ನಿಯಮ ಮಾಡಿಬಿಡೋಣ''

    ನಿಮ್ಮ ತೇಜೋವಧೆ ಮಾಡಲು ರಂಜಿತ್‌ ಕೈಲಿ ವಿಡಿಯೋ ಮಾಡಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅಜಯ್ ರಾವ್, ''ಹಾಗೆ ಹೇಳುವುದು ಸಹ ಸೂಕ್ತವಲ್ಲ ಎನಿಸುತ್ತದೆ. ಒಳ್ಳೆಯದ್ದು, ಕೆಟ್ಟದ್ದು ಎರಡೂ ರೀತಿ ಬಿಂಬಿಸುವ ವ್ಯಕ್ತಿಗಳು ಇರುತ್ತಾರೆ. ಹೀರೋ ಸಹಾಯಕ್ಕೆ ಬರಲಿಲ್ಲ ಎಂಬುದು ಅವನ (ರಂಜಿತ್) ಅಭಿಪ್ರಾಯ. ಇನ್ನು ಮುಂದೆ ಫೈಟ್ ದೃಶ್ಯಗಳನ್ನು ಹೀಗೆಯೇ ತೆಗೆಯಬೇಕು ಎಂಬ ನಿಯಮವನ್ನು ಫಿಲಂ ಚೇಂಬರ್‌ನವರು ಹೊರಡಿಸಿದ್ದಾರೆ. ಅದರಲ್ಲಿಯೇ ಇನ್ನೂ ಒಂದು ನಿಯಮ ಸೇರಿಸಿಬಿಡೋಣ, ಸೆಟ್‌ನಲ್ಲಿ ಏನೇ ಅವಘಡ ಆದರು ಹೀರೋ ಮೊದಲು ಬರಬೇಕು ಹೀರೊ ಮೊದಲು ಸಹಾಯ ಮಾಡಬೇಕು. ಹೀರೊ ಸೆಟ್‌ನಲ್ಲಿ ಇರಲಿ, ಕ್ಯಾರಾವ್ಯಾನ್‌ನಲ್ಲಿರಲಿ ಎಲ್ಲೇ ಇರಲಿ ಹೀರೋ ಮೊದಲು ಬಂದು ಕಾಪಾಡಬೇಕು ಎಂಬ ನಿಯಮ ಮಾಡಿಬಿಡೋಣ ಎಂದು ಬೇಸರದಿಂದಲೇ ಹೇಳಿದರು ಅಜಯ್ ರಾವ್.

    ಪರಿಹಾರವನ್ನೂ ನಾಯಕ ನಟನೇ ಮೊದಲು ಕೊಡಬೇಕೆ: ಅಜಯ್ ರಾವ್

    ಪರಿಹಾರವನ್ನೂ ನಾಯಕ ನಟನೇ ಮೊದಲು ಕೊಡಬೇಕೆ: ಅಜಯ್ ರಾವ್

    ''ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಎಲ್ಲರೂ ಸಹಾಯ ಮಾಡಿದ್ದಾರೆ. ಸಾಕ್ಷ್ಯ ನಾಶ ಮಾಡಲು ಚಿತ್ರೀಕರಣ ಬಂದ್ ಮಾಡಿದರು ಎಂಬುದು ಸುಳ್ಳು'' ಎಂದ ಅಜಯ್ ರಾವ್, ''ನಿರ್ಮಾಣ ಸಂಸ್ಥೆಯಿಂದ ಪರಿಹಾರ ಕೊಡಬೇಕು ಎಂಬ ಒತ್ತಾಯವಿತ್ತು. ನಿರ್ಮಾಣ ಸಂಸ್ಥೆ ಓಡಿಹೋಗುವಂತೆ ಸಂಸ್ಥೆಯಲ್ಲ ಅವರು ಖಂಡಿತ ಕೊಡುತ್ತಾರೆ. ಸಹಾಯಕ್ಕೂ ನಾಯಕ ನಟನೇ ಬರಬೇಕು, ಪರಿಹಾರವನ್ನೂ ನಾಯಕ ನಟನೇ ಕೊಡಬೇಕು ಎಂದರೆ ಕಷ್ಟವಾಗುತ್ತದೆ ಎಂದ ಅಜಯ್ ರಾವ್, ನಿರ್ಮಾಪಕರು ಈಗ ಕೈಗೆ ಸಿಗದೇ ಇರಬಹುದು ಆದರೆ ಅಗತ್ಯ ಕಾರ್ಯವನ್ನು ಮಾಡಿದ್ದಾರೆ'' ಎಂದರು.

    ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಅಜಯ್ ರಾವ್

    ನಿರ್ಮಾಪಕರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಅಜಯ್ ರಾವ್

    ''ಅದೊಂದು ಅಪಘಾತ ಉದ್ದೇಶಿತ ಕೃತ್ಯವಲ್ಲ. ಎಚ್ಚರದಿಂದಿರಬೇಕಿತ್ತು ಎಂಬುದು ನಿಜ. ಆದರೆ ಅಪಘಾತಗಳು ಘಟಿಸಿ ಹೋಗುತ್ತವೆ ಅವಕ್ಕೆ ಏನೂ ಮಾಡಲಾಗುವುದಿಲ್ಲ. ಆದರೆ ಅದರಿಂದ ಒಂದು ಪ್ರಾಣ ನಷ್ಟವಾಗಿದೆ ಎಂಬುದು ದೊಡ್ಡ ಬೇಸರ'' ಎಂದ ಅಜಯ್ ರಾವ್, ''ಇಂದಿನ ವಿಚಾರಣೆಯಲ್ಲಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ಪ್ರಕರಣದಲ್ಲಿ ಮುಂದೆ ನನ್ನ ಅವಶ್ಯಕತೆ ಕಂಡು ಬಂದರೆ ಮತ್ತೆ ಅವರಿಗೆ ಲಭ್ಯವಿರುತ್ತೇನೆ ಎಂದರು. ನಂತರ ನಿರ್ಮಾಪಕರ ಕುರಿತ ಪ್ರಶ್ನೆಗೆ ಉತ್ತರಿಸಿದ ಅಜಯ್ ರಾವ್, ನಾನು ಸಾಕಷ್ಟು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದೇನೆ ಆದರೆ ಅವರು ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರು.

    English summary
    Actor Ajay Rao talked to media after attending interrogation in Bidadi police station about Love You Rachu movie incident in which fight artist Vivek died.
    Friday, August 27, 2021, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X