For Quick Alerts
  ALLOW NOTIFICATIONS  
  For Daily Alerts

  'ಲವ್ ಯು ರಚ್ಚು' ಟೈಟಲ್ ಹುಟ್ಟಿದ್ದಕ್ಕೆ ಕಾರಣ ಮೋಹಕತಾರೆ ರಮ್ಯಾ: ಹೇಗದು?

  |

  ಅಜಯ್ ರಾವ್ ಹಾಗೂ ರಚಿತಾರಾಮ್ ಸಿನಿಮಾ ಕಳೆದ ಕೆಲವು ದಿನಗಳಿಂದ ವಿವಾದಗಳಿಂದ ಸುದ್ದಿಯಲ್ಲಿದೆ. ಅಜಯ್ ರಾವ್ ಹಾಗೂ ನಿರ್ಮಾಪಕ ಗುರುದೇಶಪಾಂಡೆ ನಡುವೆ ಮೈಮನಸ್ಸು ಇರುವುದು ಬಹಿರಂಗವಾಗಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಇರುವಾಗಲೇ ಇಬ್ಬರ ನಡುವಿನ ಮುನಿಸು ಇಬ್ಬರ ಅಭಿಮಾನಿಗಳಿಗೂ ಇರಿಸು ಮುರಿಸಾಗಿದೆ. ಕೆಲವರು ನಟ-ನಿರ್ಮಾಪಕರ ನಡುವಿನ ಮುನಿಸಿಗೆ ಕಾರಣ ಹುಡುಕಲು ಮುಂದಾಗಿದ್ದಾರೆ.

  Recommended Video

  ಲವ್‌ ಯೂ ರಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿ ಆಗದ ಅಜಯ್ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.

  ನಿರ್ಮಾಪಕ ಗುರುದೇಶಪಾಂಡೆ ಜೊತೆ ಭಿನ್ನಾಭಿಪ್ರಾಯವಿದ್ದರೂ ಅಜಯ್ ರಾಮ್ ಸಿನಿಮಾ ಪ್ರಮೋಷನ್ ಮಾಡುವುದಾಗಿ ಹೇಳಿದ್ದಾರೆ. ತಂಡ ಜೊತೆ ಹೋಗದೆ, ಸ್ವತಂತ್ರ್ಯವಾಗಿ ಪ್ರಚಾರ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಇದೇ ಮೊದಲ ಬಾರಿಗೆ 'ಲವ್ ಯು ರಚ್ಚು' ಟೈಟಲ್ ಹುಟ್ಟಿದ್ದು ಹೇಗೆ? ಈ ಟೈಟಲ್ ಅನ್ನೇ ಇಟ್ಟಿದ್ದು ಯಾಕೆ? ಅನ್ನುವುದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಮೊದಲು ರಚಿತಾ ಹೆಸರು ಟೈಟಲ್‌ನಲ್ಲಿ ಇರಲಿಲ್ಲ. ಮೋಹಕತಾರೆ ರಮ್ಯಾ ಹೆಸರಿನಿಂದ ಟೈಟಲ್ ಪ್ರಕ್ರಿಯೆ ಆರಂಭ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

  'ಲವ್ ಯು ರಚ್ಚು' ಟೈಟಲ್ ಹುಟ್ಟಿದ್ದೇಗೆ?

  'ಲವ್ ಯು ರಚ್ಚು' ಟೈಟಲ್ ಹುಟ್ಟಿದ್ದೇಗೆ?

  ಶಶಾಂಕ್ ಕೊಟ್ಟ ಕಥೆಗೆ ಟೈಟಲ್ ಹುಡುಕುವ ಪ್ರಕ್ರಿಯೆ ಆರಂಭ ಆಗಿತ್ತು. ಕಥೆಗಾರ ಶಶಾಂಕ್, ನಟ ಅಜಯ್ ರಾವ್ ಹಾಗೂ ನಿರ್ಮಾಪಕ ಗುರುದೇಶಪಾಂಡೆ ಟೈಟಲ್‌ ಬಗ್ಗೆ ಚರ್ಚೆ ಮಾಡುವಾಗ, ಶಶಾಂಕ್ ಮೊದಲು ಶೀರ್ಷಿಕೆ ಬಗ್ಗೆ ಚರ್ಚೆ ಆರಂಭಿಸಿದ್ದರು. "ಶಶಾಂಕ್ ಸರ್ ಹೇಳಿದ್ರು, ಕೃಷ್ಣನ್ ಲವ್ ಸ್ಟೋರಿ ಅಂತ ಟೈಟಲ್ ಇದೆ. ಅದೇ ತರಹ ಲವ್ ಇಮೇಜ್ ಇರುವಂತಹ ಟೈಟಲ್ ಇಟ್ಟುಕೊಳ್ಳೋಣ ಅಂತ. ಉದಾಹರಣೆಗೆ ಯಾವುದೋ ಒಂದು ಹುಡುಗಿ ಹೆಸರು. ಕೃಷ್ಣನ್ ಲವ್ ಸ್ಟೋರಿ ಅಂದರೆ, ಕೃಷ್ಣನ್ ಲವ್ ಆಗುತ್ತೆ. ಅದೇ ರೀತಿ ಈ ಹುಡುಗ, ಈ ಹುಡುಗಿಯನ್ನು ಎಷ್ಟು ಪ್ರೀತಿಸುತ್ತಾನೆ ಎನ್ನುವುದಕ್ಕೆ ಏನಾದರೂ ವ್ಯಕ್ತಪಡಿಸಬೇಕಲ್ಲಾ? ಹೀಗಾಗಿ ಒಂದು ಹುಡುಗಿ ಹೆಸರು ಇಡೋಣ ಅಂತ. ಹಳೇ ಗರ್ಲ್‌ಫ್ರೆಂಡ್ ಹೆಸರು, ನಿಮ್ಮ ಹುಡುಗಿನ ನೆನೆಸಿಕೋ ಅಂತ ತಮಾಷೆ ಮಾಡುತ್ತಾ ಮಾಡುತ್ತಾ? ಶುರುವಾಗಿತ್ತು."

  ಅಜಯ್ ರಾವ್ ಇಟ್ಟ ಮೊದಲು ಟೈಟಲ್ 'ಲವ್ ಯು ರಮ್ಯಾ'

  ಅಜಯ್ ರಾವ್ ಇಟ್ಟ ಮೊದಲು ಟೈಟಲ್ 'ಲವ್ ಯು ರಮ್ಯಾ'

  ಶಶಾಂಕ್ ಜೊತೆ ಅಜಯ್ ರಾವ್ ಶೀರ್ಷಿಕೆ ಬಗ್ಗೆ ಚರ್ಚೆ ಮಾಡುವಾಗ ಮೊದಲು 'ಲವ್ ಯು ರಮ್ಯಾ' ಅಂತ ಇಡಲಾಗಿತ್ತು. " ನಿನ್ನ ಜೊತೆ ಟ್ರಾವೆಲ್ ಆಗಿರುವಂತಹ ಅಷ್ಟೂ ಜನ ಹೀರೋಯಿನ್ ಹೆಸರು ಹೇಳುತ್ತಾ ಹೋಗೋಣ. ಅಲ್ಲಿ ಹೋಗ್ತಾ ಹೋಗ್ತಾ, ಸೌಂಡಿಂಗ್‌ಗೆ ರಚ್ಚು ಅನ್ನುವುದು ಚೆನ್ನಾಗಿ ಬಂತು. ತಪ್ಪೇನಿಲ್ಲ. ಫಸ್ಟ್ ಹೀರೋಯಿನ್ ರಮ್ಯಾನೂ ತಲೆಗೆ ಬಂದಿತ್ತು. ಲವ್ ಯು ರಮ್ಯಾ, ಐ ಲವ್ ಯು ರಮ್ಯಾ, ಇವೆಲ್ಲಾ ಒಂದು ಉದಾಹರಣೆ. ಹೇಳ್ತಾ ಹೋದಾಗಲೆಲ್ಲಾ ರಚ್ಚು ಅನ್ನುವುದು ತುಂಬಾ ಸಮಂಜಸವಾಗಿದೆ ಅಂತ ಅನಿಸಿತ್ತು." ಅಂತ ಅಜಯ್ ರಾವ್ ಹೇಳಿದ್ದಾರೆ.

   ರಚಿತಾ ರಾಮ್‌ಗಾಗಿ ರಚ್ಚು ಟೈಟಲ್ ಇಟ್ಟಿದ್ದಲ್ಲ!

  ರಚಿತಾ ರಾಮ್‌ಗಾಗಿ ರಚ್ಚು ಟೈಟಲ್ ಇಟ್ಟಿದ್ದಲ್ಲ!

  "ರಚ್ಚು ಅಂದ ಕೂಡಲೇ ಫ್ಲ್ಯಾಶ್ ಆಗಿದ್ದು, ಹೇಗಿದ್ರೂ ಇಂಡಸ್ಟ್ರಿಯಲ್ಲಿ ರಚಿತಾ ಇದ್ದಾರಲ್ಲಾ ಅಂತ. ಕ್ಯಾರೆಕ್ಟರ್‌ಗೂ ತುಂಬಾನೇ ಸೂಟ್ ಆಗುತ್ತಾರೆ. ಅವರಿಗೂ ಕೇಳಿದ್ವಿ. ಕಥೆ ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಹೇಳಿದ್ವಿ. ಅವರು ಕಥೆಯನ್ನು ತುಂಬಾನೇ ಇಷ್ಟಪಟ್ಟರು. ಹಾಗೇ ಹೀರೋಯಿನ್ ಆಯ್ಕೆ ಆದರು." ಎಂದು ಅಜಯ್ ರಾವ್ ಹೇಳಿದ್ದಾರೆ.

  ಡಿಸೆಂಬರ್ 31ಕ್ಕೆ 'ಲವ್ ಯು ರಚ್ಚು' ರಿಲೀಸ್

  ಡಿಸೆಂಬರ್ 31ಕ್ಕೆ 'ಲವ್ ಯು ರಚ್ಚು' ರಿಲೀಸ್

  ಅಜಯ್ ರಾವ್ ಹಾಗೂ ರಚಿತಾ ರಾಮ್ ಮೊದಲ ಕಾಂಬಿನೇಷನ್ ಸಿನಿಮಾ ಸದ್ಯ ವಿವಾದದಿಂದ ಸದ್ದು ಮಾಡುತ್ತಿದೆ. ಆದರೆ, ನಿರ್ಮಾಪಕ ಗುರುದೇಶಪಾಂಡೆ ಹಾಗೂ ಅಜಯ್ ರಾವ್ ಇಬ್ಬರೂ ಪ್ರತ್ಯೇಕವಾಗಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ 31ಕ್ಕೆ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದ್ದು, ಅಜಯ್ ಹಾಗೂ ರಚಿತಾ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡಿ ಪ್ರೇಕ್ಷಕರು ಏನಂತಾರೆ ಕುತೂಹಲ ದುಪ್ಪಟ್ಟಾಗಿದೆ.

  English summary
  Ajay Rao took reference of Ramya and Rachita Ram name for the title Love You Rachchu. Shashank, Gurudeshpande, Ajay Rao together decided to take Love You Rachchu title.
  Wednesday, December 22, 2021, 13:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X