ತಂದೆ-ಮಗನ ಬಾಂಧವ್ಯದ ಕಥೆಯಲ್ಲಿ 'ಶ್ರೀರಸ್ತು ಶುಭಮಸ್ತು'ವಿನ ಮಾಧವ;'ಫಾದರ್ಸ್ ಡೇ' ಸ್ಪೆಷಲ್ ಏನು?

ಕನ್ನಡದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಬರೋದು ಹೊಸದೇನು ಅಲ್ಲ. ಅದೆಷ್ಟೇ ದೊಡ್ಡ ಸಿನಿಮಾ ಬಂದರೂ ಇನ್ನೊಂದು ಕಡೆ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆ ಪ್ರಯತ್ನಗಳಿಗೆ ಕೆಲವು ಸಿನಿಮಾಗಳಿಗೆ ಸಕ್ಸಸ್ ಸಿಕ್ಕರೆ, ಮತ್ತೆ ಕೆಲವು ಸೋಲನ್ನು ಕಾಣುತ್ತವೆ. ಕನ್ನಡದಲ್ಲಿ ಇಂತಹದ್ದೇ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆ ಸಿನಿಮಾವೇ 'ಫಾದರ್ಸ್‌ ಡೇ'.

ಸಿನಿಮಾದ ಟೈಟಲ್ ಕೇಳಿದ ಕೂಡಲೇ ಸೆಂಟಿಮೆಂಟ್ ಸಿನಿಮಾ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಟ್ರಾವೆಲ್ ಸಿನಿಮಾ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬೈಕರ್ ಹಿನ್ನೆಲೆಯನ್ನು ಇಟ್ಟಿಕೊಂಡು ನಿರ್ಮಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದರ ಜೊತೆಗೆ ಅಪ್ಪ ಹಾಗೂ ಮಗನ ಸಂಬಂಧದ ಕಥೆಯನ್ನು ಈ ಸಿನಿಮಾ ಹೇಳುತ್ತಿದೆ. ಈ ಸಿನಿಮಾದಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧನ ಪಾತ್ರದಲ್ಲಿ ನಟಿಸುತ್ತಿರುವ ಅಜಿತ್ ಹಂಡೆ ಇಲ್ಲಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Ajith Hande from Shrirasthu Shubamasthu Stars in Fathers Day Movie

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಜಿತ್ ಹಂಡೆ ಹಾಗೂ ಸುಧಾರಾಣಿಯ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್‌ನಲ್ಲಿ ಮಾಧನ ಪಾತ್ರದಲ್ಲಿ ಅಜಿತ್ ಹಂಡೆ ಹೆಂಗಳೆಯ ಮನಸ್ಸು ಕದ್ದಿದ್ದಾರೆ. ಈಗ 'ಫಾದರ್ಸ್ ಡೇ' ಸಿನಿಮಾದಲ್ಲಿ ಮತ್ತೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಬರುತ್ತಿದ್ದಾರೆ. ಅದೂ ಒಬ್ಬ ಬೈಕರ್ ಪಾತ್ರದ ಮೂಲಕ. ಈ ಸಿನಿಮಾ ಒಂದು ಎಳೆಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಆ ಎಳೆ ಏನು? ತಂದೆ ಮಗನ ಸಂಬಂಧದಲ್ಲಿರುವ ಟ್ವಿಸ್ಟ್ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎನ್ನುವ ನಂಬಿಕೆಯಲ್ಲಿದೆ.

ಅಂದ್ಹಾಗೆ 'ಫಾದರ್ಸ್ ಡೇ' ಸಿನಿಮಾವನ್ನು ಇಲವೆನ್ ಎಲಿಮೆಂಟ್ಸ್ ಹಾಗೂ ರೆಕ್ಟ್ಯಾಂಗಲ್ ಸ್ಟುಡಿಯೋ ಸಂಸ್ಥೆಗಳು ಸೇರಿಕೊಂಡು ನಿರ್ಮಾಣ ಮಾಡಿವೆ. 'ಆಚಾರ್ & ಕೋ','ಸಪ್ತಸಾಗರದಾಚೆ ಎಲ್ಲೋ','ಅನಾಮಾಧೇಯ ಅಶೋಕ್ ಕುಮಾರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿರುವ ಹರ್ಷಿಲ್ ಕೌಶಿಕ್ ಈ ಸಿನಿಮಾದ ಹೀರೋ. ಇವರೊಂದಿಗೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಅಜಿತ್ ಹಂಡೆ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕನ್ನಡದ ರಾಪರ್ ಆಲ್‌ ಓಕೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಸಾಮ್ರಾಗ್ನಿ ರಾಜನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರತಂಡವೇ ಹೇಳಿಕೊಂಡಂತೆ ಇದೊಂದು ಪ್ರವಾಸ ಕಥನ. ಕನ್ನಡ ಚಿತ್ರರಂಗದಲ್ಲೇ ಮೊದಲ ಬೈಕರ್ ಸಿನಿಮಾ ಅಂತಲೂ ಹೇಳಬಹುದು ಎಂದು ಹೇಳಿಕೊಂಡಿದೆ. ಅಂದ್ಹಾಗೆ ಈ ಸಿನಿಮಾದ ಕಥೆ ಇಬ್ಬರು ಬೈಕರ್ ಗಳ ಸುತ್ತ ಸಾಗುತ್ತದೆ.ಇಬ್ಬರು ಸಹ ಪಯಣಿಗರಾಗಿದ್ದರೂ ಅವರಿಗೆ ಕೊನೆಯವರೆಗೂ ತಾವಿಬ್ಬರೂ ತಂದೆ -ಮಗ ಎಂದೂ ತಿಳಿಯುವುದಿಲ್ಲ‌. ಈ ವಿಶಿಷ್ಠ ಸ್ಟೋರಿ ಇನ್ನೇನು ತೆರೆಮೇಲೆ ಬರಲಿದೆ.

'ಫಾದರ್ಸ್ ಡೇ' ಸಿನಿಮಾ ಚಿತ್ರಕಥೆ ಕೌತುಕವನ್ನು ಹುಟ್ಟಾಕುತ್ತೆ ಎನ್ನುವ ಭರವಸೆ ಚಿತ್ರತಂಡದ್ದು. 'ಫಾದರ್ಸ್ ಡೇ' ತಂದೆ -ಮಗನ ಬಾಂಧವ್ಯದ ಸಿನಿಮಾವೂ ಹೌದು.ಇದರ ಜೊತೆಗೆ ತಿಳಿ ಹಾಸ್ಯದ ಸನ್ನಿವೇಶಗಳೂ ಸಹ ಜನರ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. 'ಫಾದರ್ಸ್ ಡೇ' ತಂಡ ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ರಿಲೀಸ್‌ಗೂ ಮುನ್ನ ಪೂರ್ವಭಾವಿಯಾಗಿ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೂಡ ಕುತೂಹಲ ಮೂಡಿಸಿದೆ. ಸಿನಿಮಾ ನೋಡುವ ಕಾತುರವನ್ನು ಹೆಚ್ಚಿಸಿದೆ‌. ಈ ಸಿನಿಮಾಗೆ ಜ್ಯೋಲ್ಸ್ನಾ ಪ್ಯಾನಿಕರ್ ಸಂಕಲನ ಹಾಗೂ ಜೋ ಪ್ಯಾನಿಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Ajith Hande from Shrirasthu Shubamasthu Stars in Fathers Day Movie.
Read more about: kannada movie serial actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X