Good Bad Ugly:ಅಜಿತ್ ಕುಮಾರ್ 'ಗುಡ್‌ಬ್ಯಾಡ್ ಅಗ್ಲಿ' ಕರ್ನಾಟಕ ಬ್ಯುಸಿನೆಸ್; ಕೊಂಡಿದ್ದು ಎಷ್ಟಕ್ಕೆ? ಕ್ರೇಜ್ ಹೇಗಿದೆ?
ಈ ವಾರ ಕನ್ನಡದಲ್ಲಿ ಎರಡು ಸ್ಮಾಲ್ ಬಜೆಟ್ ಸಿನಿಮಾಗಳ ಜೊತೆಗೆ ತಮಿಳಿನ ಬಿಗ್ ಬಜೆಟ್ ಚಿತ್ರ ರಿಲೀಸ್ ಆಗುತ್ತಿದೆ. ಅದುವೇ ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' (Good Bad Ugly). ಕಾಲಿವುಡ್‌ನ ಈ ಆಕ್ಷನ್ ಡ್ರಾಮ ಸಿನಿಮಾವನ್ನು ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ಓಪನಿಂಗ್ ಪಡೆದುಕೊಳ್ಳುತ್ತೆ ಅನ್ನೋ ನಿರೀಕ್ಷೆಯನ್ನು ಸಿನಿಮಾ ಮಂದಿ ಇಟ್ಟುಕೊಂಡಿದ್ದಾರೆ.
ಇದೇ ವರ್ಷ ತೆರೆಕಂಡಿದ್ದ ಅಜಿತ್ ಕುಮಾರ್ ಸಿನಿಮಾ 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಅಜಿತ್ ಕುಮಾರ್ ಅಭಿಮಾನಿಗಳು ಸಿನಿಮಾ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಮತ್ತೊಂದು ಸಿನಿಮಾವನ್ನು ರಿಲೀಸ್‌ಗೆ ಸಜ್ಜಾಗಿದೆ. ಐಪಿಎಲ್ ಅನ್ನೂ ಲೆಕ್ಕಿಸದೆ ಅಜಿತ್ ಕುಮಾರ್ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ.

ಅಜಿತ್ ಕುಮಾರ್ 'ಗುಡ್ ಬ್ಯಾಡ್ ಅಗ್ಲಿ' ಇದ ಏಪ್ರಿಲ್ 10ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ವರದಿಯಾಗುತ್ತಿದೆ. ತಮಿಳುನಾಡಿನಲ್ಲಿ ಸಹಜವಾಗಿ ಉತ್ತಮ ರೆಸ್ಪಾನ್ಸ್ ಸಿಕ್ಕೇ ಸಿಗುತ್ತೆ. ಆದರೆ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ್ ಹಾಗೂ ಕೇರಳದಲ್ಲಿ ಕ್ರೇಜ್ ಹೇಗಿದೆ? 'ವಿಡಾಮುಯಾರ್ಚಿ' ಸೋಲನ್ನು ಮರೆ ಮಾಚುತ್ತಾ? ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಣ ಮಾಡುತ್ತಿರೋದು ಯಾರು? ಎಷ್ಟು ವ್ಯಾಪಾರ ಕುದುರಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.
ಅಜಿತ್ ಕುಮಾರ್ ಸಿನಿಮಾ ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ರಿಲೀಸ್ ಆಗಿತ್ತು. ಆದರೆ, 'ವಿಡಾಮುಯಾರ್ಚಿ' ಸಾಕಷ್ಟು ಹೈಪ್‌ಗಳನ್ನು ಹುಟ್ಟಾಕಿದ್ದರು. ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಾಧ್ಯವಾಗಿರಲಿಲ್ಲ. ಪರಿಣಾಮ ಬಾಕ್ಸಾಫೀಸ್‌ನಲ್ಲಿ ಶೋಚನೀಯವಾಗಿ ಸೋತಿತ್ತು. ಈಗ ಅಜಿತ್ ಅಭಿಮಾನಿಗಳು 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿಲ್ಲೇ ಸಾಧಾರಾಣ ಪ್ರತಿಕ್ರಿಯೆ ಸಿಗುತ್ತಿದೆ.

ಇನ್ನೂ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದ್ದಾರೆ. ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಕೆವಿನ್ ಪ್ರೊಡಕ್ಷನ್ಸ್ ಸುಮಾರು 5.40 ಕೋಟಿ ರೂಪಾಯಿಗೆ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾವನ್ನು ಖರೀದಿ ಮಾಡಿ ವಿತರಣೆಯನ್ನು ಮಾಡುತ್ತಿದೆ. ತಮಿಳಿನ ಸೂಪರ್‌ಸ್ಟಾರ್ ಸಿನಿಮಾಗೆ ಬೆಂಗಳೂರಿನಲ್ಲೂ ಫ್ಯಾನ್ಸ್ ಇರುವುದರಿಂದ ಒಳ್ಳೆಯ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.
ಇನ್ನು ಅಡ್ವಾನ್ಸ್ ಬುಕಿಂಗ್ ಕರ್ನಾಟಕದಲ್ಲಿ ಸಾಧಾರಣ ಪ್ರತಿಕ್ರಿಯೆ ಸಿಕ್ಕಿದೆ. ಟ್ರ್ಯಾಕ್ ಬಾಕ್ಸಾಫೀಸ್ ಪ್ರಕಾರ, ಕರ್ನಾಟಕದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ. ಇನ್ನು ಕರ್ನಾಟಕದಾದ್ಯಂತ ಸುಮಾರು ಫಸ್ಟ್ ಡೇ ಫಸ್ಟ್ ಶೋ 92 ಶೋಗಳು ಹೌಸ್‌ಫುಲ್ ಆಗಿವೆ. 20 ಅಧಿಕ ಶೋಗಳ ಟಿಕೆಟ್‌ಗಳು ಫಾಸ್ಟ್ ಫಿಲ್ಲಿಂಗ್ ಆಗಿವೆ. ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 46.5 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
ತಮಿಳು ನಾಡಿನಲ್ಲಿ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದರಲ್ಲಿ 2263 ಶೋಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, 4 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಸೇಲ್ ಆಗಿವೆ. ಸುಮಾರು 726 ಫಾಸ್ಟ್ ಫಿಲ್ಲಿಂಗ್ ಆಗಿದ್ದು, ಅದರಲ್ಲಿ 248 ಶೋಗಳು ಹೌಸ್‌ಫುಲ್ ಆಗಿವೆ. ಇನ್ನು ಕೇರಳದಲ್ಲಿ 166 ಶೋಗಳಿಂದ 8,900 ಟಿಕೆಟ್‌ಗಳು ಸೋಲ್ಡ್ ಆಗಿದ್ದು, 14ಕ್ಕೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











