ಅಜಿತ್ 'ವಲಿಮೈ', ಆಲಿಯಾ 'ಗಂಗೂಬಾಯಿ': ಕರ್ನಾಟಕದಲ್ಲಿ ಈ ಎರಡು ಚಿತ್ರದ ಕಲೆಕ್ಷನ್ ಎಷ್ಟು?

ತಮಿಳು ಸೂಪರ್‌ಸ್ಟಾರ್ ಅಜಿತ್ ಅಭಿನಯದ 'ವಲಿಮೈ' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ಎರಡೇ ದಿನಕ್ಕೆ ಈ ಸಿನಿಮಾದ ಗಳಿಕೆ 100 ಕೋಟಿ ಸಮೀಸಿತ್ತು. 'ವಲಿಮೈ' ಎಲ್ಲೆಲ್ಲಿ ತೆರೆಕಂಡಿದೆಯೋ ಅಲ್ಲೆಲ್ಲಾ ಗಲ್ಲಾಪಟ್ಟಿಗೆಯನ್ನ ದೋಚುತ್ತಿದೆ. ಅದರಂತೆ ಕರ್ನಾಟಕದ ಬಾಕ್ಸಾಫೀಸ್‌ನಲ್ಲೂ 'ವಲಿಮೈ' ಕಮಾಲ್ ಮಾಡುತ್ತಿದೆ. ತೆರೆಕಂಡ ದಿನದಿಂದು ಭಾನುವಾರದ ವರೆಗೂ ಭರ್ಜರಿ ಕಲೆಕ್ಷನ್ ಮಾಡಿದೆ.

ಇನ್ನೊಂದು ಕಡೆ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ'ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಗಂಗೂಬಾಯಿ ಸಿನಿಮಾ ನೋಡಿದವರು ಆಲಿಯಾ ಭಟ್ ಅನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಈ ಚಿತ್ರದ ಕಲೆಕ್ಷನ್ ಜೋರಾಗಿದೆ. ಅದರಂತೆ ಕರ್ನಾಟಕದಲ್ಲೂ 'ಗಂಗೂಬಾಯಿ ಕಾಠಿಯಾವಾಡಿ' ಸಖತ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ. ಈ ಎರಡು ಸಿನಿಮಾಗಳ ಕರ್ನಾಟಕದ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ.

 'ವಲಿಮೈ' ಕರ್ನಾಟಕ ಕಲೆಕ್ಷನ್ ಎಷ್ಟು?

'ವಲಿಮೈ' ಕರ್ನಾಟಕ ಕಲೆಕ್ಷನ್ ಎಷ್ಟು?

ಅಜಿತ್ ಅಭಿನಯದ 'ವಲಿಮೈ' ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ರಿಪೋರ್ಟ್ ನೆಗೆಟಿವ್ ಇತ್ತು. ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಹೀಗಾಗಿ ಬಾಕ್ಸಾಫೀಸ್ ಕಲೆಕ್ಷನ್ ಮಕಾಡೆ ಮಲಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ವಿಮರ್ಶಕರು ಹಾಕಿದ ಈ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ತೆರೆಕಂಡ ದಿನದಿಂದ ನಾಲ್ಕು ದಿನವೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದ ಬಾಕ್ಸಾಫೀಸ್‌ನಲ್ಲೂ ಸಿನಿಮಾ ಕೋಟಿ ಕೋಟಿ ಲೂಟಿ ಮಾಡಿದೆ. ಕರ್ನಾಟಕದ ವಿತರಕರೊಬ್ಬರು ಹೇಳುವ ಪ್ರಕಾರ, ಮೊದಲ ದಿನ 2.50 ಕೋಟಿ, ಎರಡನೇ ದಿನ 70 ಲಕ್ಷ, ಮೂರನೇ ದಿನ 90 ಲಕ್ಷ ಹಾಗೂ ಭಾನುವಾರ 1.10 ಕೋಟಿ ಆಸು-ಪಾಸಿನಲ್ಲಿ ಗಳಿಕೆ ಕಂಡಿದೆ. ಹೀಗಾಗಿ ನಾಲ್ಕು ದಿನದ ಗಳಿಕೆ 5.20 ಕೋಟಿ ಆಗಿರಬಹುದು ಎನ್ನುತ್ತಾರೆ. ಆದರೆ, ಈ ಚಿತ್ರವನ್ನು ಕಮರ್ ಎಂಬುವವರು ವಿತರಣೆ ಮಾಡಿದ್ದು, ಅಧಿಕೃತ ಮಾಹಿತಿ ಹೊರಬರಬೇಕಿದೆ.

 'ವಲಿಮೈ' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

'ವಲಿಮೈ' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

'ವಲಿಮೈ' ವಿಶ್ವದಾದ್ಯಂತ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಎರಡು ಹಾಗೂ ಮೂರನೇ ದಿನ ಗಳಿಕೆಯಲ್ಲಿ ಕುಸಿತ ಕಂಡಿತ್ತು. ಭಾರತದಲ್ಲಿ ಎಲ್ಲಾ ಭಾಷೆಯಿಂದ ಸೇರಿ ನಾಲ್ಕು ದಿನದ ಕಲೆಕ್ಷನ್ 79.30 ಕೋಟಿ. ಭಾರತದಲ್ಲಿ ಎಲ್ಲಾ ಭಾಷೆಯಿಂದಲೂ ಸೇರಿ ಮೊದಲ ದಿನ 31.70 ಕೋಟಿ. ಎರಡನೇ ದಿನ 11.50 ಕೋಟಿ. ಮೂರನೇ ದಿನ 16.90 ಕೋಟಿ ಹಾಗೂ ನಾಲ್ಕನೇ ದಿನ 19.20 ಕೋಟಿ ಲೂಟಿ ಮಾಡಿದೆ.

 ರಾಜ್ಯದಲ್ಲಿ 'ಗಂಗೂಬಾಯಿ' ಕಲೆಕ್ಷನ್ ಎಷ್ಟು?

ರಾಜ್ಯದಲ್ಲಿ 'ಗಂಗೂಬಾಯಿ' ಕಲೆಕ್ಷನ್ ಎಷ್ಟು?

ಕರ್ನಾಟಕದಲ್ಲೂ 'ಗಂಗೂಬಾಯಿ ಕಾಠಿಯಾವಾಡಿ' ಕಲೆಕ್ಷನ್ ಕೂಡ ಜೋರಾಗಿದೆ. ಫೆಬ್ರವರಿ 25ರಂದು 'ಗಂಗೂಬಾಯಿ ಕಾಠಿಯಾವಾಡಿ' ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಕರ್ನಾಟಕದಲ್ಲಿ ಮೊದಲ ದಿನ 70 ಲಕ್ಷ, ಎರಡನೇ ದಿನ 60 ಲಕ್ಷ ಹಾಗೂ ಮೂರನೇ ದಿನ 90 ಲಕ್ಷ ಗಳಿಸಿದೆ ಎಂಬುವುದು ವಿತರಕರ ವಲಯದಲ್ಲಿ ಕೇಳಿ ಬರುತ್ತಿರುವ ಅಂಕಿ-ಅಂಶಗಳು. ಒಟ್ಟು ಮೂರು ದಿನ ಕರ್ನಾಟಕದ ಗಳಿಕೆ 2.20 ಕೋಟಿ ಎನ್ನಲಾಗಿದೆ. ಗಂಗೂಬಾಯಿ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಹೆಚ್ಚಾಗಿ ಬಿಡುಗಡೆಯಾಗಿತ್ತು. ಸಿಂಗಲ್ ಸ್ಕ್ರೀನ್ ರಿಲೀಸ್ ಆಗಿದ್ದು ತೀರಾ ಕಡಿಮೆ. ಹೀಗಾಗಿ ಇದು ಕೇವಲ ಮಲ್ಟಿಪ್ಲೆಕ್ಸ್ ಕಲೆಕ್ಷನ್ ಎನ್ನುತ್ತಿದೆ ವಿತರಕರ ವಲಯ.

 ವರ್ಲ್ಡ್‌ವೈಡ್ 'ಗಂಗೂಬಾಯಿ' ಕಲೆಕ್ಷನ್ ಎಷ್ಟು?

ವರ್ಲ್ಡ್‌ವೈಡ್ 'ಗಂಗೂಬಾಯಿ' ಕಲೆಕ್ಷನ್ ಎಷ್ಟು?

ಆಲಿಯಾ ಭಟ್ ಸಿನಿಮಾ ವೀಕೆಂಡ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಮೊದಲ ದಿನ 'ಗಂಗೂಬಾಯಿ ಕಾಠಿಯಾವಾಡಿ' 10.50 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ 13.32 ಕೋಟಿ ಹಾಗೂ ಮೂರನೇ ದಿನ 15.30 ಕೋಟಿ ಗಳಿಕೆ ಕಂಡಿದ್ದು, ಮೂರು ದಿನಗಳಲ್ಲಿ ಒಟ್ಟು 39.12 ಕೋಟಿ ಗಳಿಸಿದೆ. ಗಂಗೂಬಾಯಿ ಹಾಗೂ ವಲಿಮೈ ಈ ಎರಡೂ ಸಿನಿಮಾಗಳಿಗೆ ಶಿವರಾತ್ರಿ ಪ್ಲಸ್ ಪಾಯಿಂಟ್ ಆಗಲಿದೆ.'

More from Filmibeat

English summary
Ajith Starrer Valimai and Alia Bhatt Gangubai movie Karnataka boxoffice report is here. Valimai and Gangubai Kathiawadi both the are doing well at the boxoffice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X