ಪ್ರೈವೇಟ್ ಫೋಟೋ ಲೀಕ್: ಕಮಲ್ ಹಾಸನ್ ಪುತ್ರಿ ಫುಲ್ ಗರಂ

ಸೂಪರ್ ಸ್ಟಾರ್ ಕಮಲ್ ಹಾಸನ್ ಅವರ ಕಿರಿಯ ಪುತ್ರಿ ಅಕ್ಷರ ಹಾಸನ್ ಇತ್ತೀಚಿಗಷ್ಟೆ ತಮ್ಮ ಖಾಸಗಿ ಫೋಟೋಗಳ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದರು. ಅಕ್ಷರ ಹಾಸನ್ ಅರೆನಗ್ನವಾಗಿದ್ದ ಹಲವು ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಈ ಫೋಟೋಗಳನ್ನ ಯಾರೂ ಲೀಕ್ ಮಾಡಿದ್ರು, ಹೇಗೆ ಮಾಡಿದ್ರು ಎಂಬುದು ಗೊತ್ತಿರಲಿಲ್ಲ. ಬಟ್, ಅಕ್ಷರ ಹಾಸನ್ ಒಳ ಉಡುಪಿನಲ್ಲಿದ್ದ ಫೋಟೋಗಳೇ ಸೋರಿಕೆಯಾಗಿದೆ. ಇದು ಅವರ ಮೊಬೈಲ್ ನಲ್ಲಿದ್ದ ಫೋಟೋಗಳು ಎಂದು ಹೇಳಲಾಗ್ತಿದೆ. ಆದ್ರೆ, ಯಾವುದು ಖಚಿತ ಮಾಹಿತಿ ಇರಲಿಲ್ಲ.

ಈ ಬಗ್ಗೆ ಸ್ವತಃ ಅಕ್ಷರ ಹಾಸನ್ ಮೌನ ಮುರಿದಿದ್ದಾರೆ. ಈ ಫೋಟೋಗಳನ್ನ ಯಾರೋ ಲೀಕ್ ಮಾಡಿದ್ದಾರೆ, ಅವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಮಲ್ ಪುತ್ರಿ ಸೈಬರ್ ಪೊಲೀಸರಿಗೆ ದೂರು ಕೂಡ ನೀಡಲಿದ್ದಾರಂತೆ. ಅಷ್ಟಕ್ಕೂ, ಅಕ್ಷರ ಹಾಸನ್ ಪ್ರೈವೇಟ್ ಫೋಟೋ ಲೀಕ್ ಬಗ್ಗೆ ಹೇಳಿದ್ದೇನು.? ಮುಂದೆ ಓದಿ.....

ಯಾರು ಲೀಕ್ ಮಾಡಿದ್ರೋ ಗೊತ್ತಿಲ್ಲ

ಯಾರು ಲೀಕ್ ಮಾಡಿದ್ರೋ ಗೊತ್ತಿಲ್ಲ

ಖಾಸಗಿ ಫೋಟೋಗಳು ಲೀಕ್ ಆಗಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಅಕ್ಷರ ಹಾಸನ್ ''ಈ ಫೋಟೋಗಳನ್ನ ಯಾರು ಲೀಕ್ ಮಾಡಿದ್ರೋ ಗೊತ್ತಿಲ್ಲ. ಯಾಕೆ ಲೀಕ್ ಮಾಡಿದ್ರೋ ಗೊತ್ತಿಲ್ಲ. ಇದು ಮಾಡಿದ್ದರಿಂದ ಅವರಿಗೇನು ಸಿಕ್ಕಿದೆ ಎಂಬುದು ಕೂಡ ನನಗೆ ಗೊತ್ತಾಗ್ತಿಲ್ಲ. ಆದ್ರೆ, ಒಬ್ಬ ಹುಡುಗಿಯನ್ನ ಇಷ್ಟು ಕೀಳು ಮಟ್ಟದಲ್ಲಿ ನೋಡುವಂತೆ ಮಾಡಿದ್ದು ಅವರ ಮಾನಸಿಕ ದುಸ್ಥಿತಿ ಹೇಗಿದೆ ಅಂತ ಅರ್ಥವಾಗ್ತಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನ ನೋಡ್ತಿದ್ರೆ ಭಯ ಆಗ್ತಿದೆ

ಇದನ್ನ ನೋಡ್ತಿದ್ರೆ ಭಯ ಆಗ್ತಿದೆ

''ಈ ಫೋಟೋ ಲೀಕ್ ಆದ್ಮೇಲೆ ತುಂಬಾ ಜನ ಇದನ್ನ ಶೇರ್ ಮಾಡಿದ್ದಾರೆ. ವಿಭಿನ್ನ ವಿಭಿನ್ನವಾಗಿ ಶೀರ್ಷಿಕೆ ಕೊಡ್ತಿದ್ದಾರೆ. ಬಹಳ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅಶ್ಲೀಲವಾಗಿ, ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ಒಬ್ಬ ಹುಡುಗಿಯ ಗೌರವವನ್ನ ಹಾಳುಮಾಡುವುದಕ್ಕೆ ಇಷ್ಟು ಜನ ಇದ್ದಾರಾ ಎಂದು ಭಯ ಕಾಡುತ್ತಿದೆ'' ಎಂದು ಕಿಡಿಕಾರಿದ್ದಾರೆ.

ಮೀಟೂ ಅಭಿಯಾನದ ವೇಳೆ ಮಾಡಿದ್ದು ಖಂಡನೀಯ

ಮೀಟೂ ಅಭಿಯಾನದ ವೇಳೆ ಮಾಡಿದ್ದು ಖಂಡನೀಯ

'ಸದ್ಯ, ಮೀಟೂ ಅಭಿಯಾನ ದೇಶದಲ್ಲಿ ಚಾಲ್ತಿಯಲ್ಲಿದೆ. ಹೆಣ್ಣು ಮಕ್ಕಳು ತಮ್ಮ ಕೆಟ್ಟ ಅನುಭವವನ್ನ ಹೊರಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ಒಬ್ಬ ಹುಡುಗಿಯ ಪ್ರೈವೇಟ್ ಫೋಟೋಗಳನ್ನ ಈ ರೀತಿ ದುರ್ಬಳಕೆ ಮಾಡಿರೋದು ನಿಜಕ್ಕೂ ಖಂಡನೀಯ' ಎಂದು ಅಕ್ಷರ್ ಹಾಸನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಯಲು ಮಾಡುತ್ತೇನೆ

ಬಯಲು ಮಾಡುತ್ತೇನೆ

'ಈಗಾಗಲೇ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಸೈಬರ್ ಕ್ರೈಂ ಪೊಲೀಸರನ್ನ ಕೂಡ ಭೇಟಿ ಮಾಡಿದ್ದೇನೆ. ಇದಕ್ಕೆ ಕಾರಣವಾದವರನ್ನ ಸುಮ್ಮನೆ ಬಿಡುವುದಿಲ್ಲ. ಪಕ್ಕಾ ಅವರನ್ನ ಬಯಲುಗೆಳೆಯುತ್ತೇನೆ' ಎಂದು ಅಕ್ಷರ ಹಾಸನ್ ಬರೆದುಕೊಂಡಿದ್ದಾರೆ.

More from Filmibeat

English summary
Kamal Haasan’s youngest daughter Akshara Haasan’s private photos were leaked on November 5. now, Akshara took to social media to express her angs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X