"ಕಥೆ ಇದ್ರೆ ಹೇಳಿ ಸಿನ್ಮಾ ಮಾಡೋಣ" ಎಂದ ಕಿಲಾಡಿ ಅಕ್ಷಯ್ ಕುಮಾರ್; ಏನಂದ್ರು ರಾಜ್‌ ಬಿ ಶೆಟ್ಟಿ?

ರಾಜ್ ಬಿ ಶೆಟ್ಟಿ ನಿರ್ಮಾಣದ 'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ರಾಜ್ ಬಿ ಶೆಟ್ಟಿ ಖುಷಿಯ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವನ್ನು ಅವರದ್ದೇ ಸಿನಿಮಾ ಸೆಟ್ಟಿನಲ್ಲಿ ಭೇಟಿ ಮಾಡಿದ್ದು, ರಾಜ್ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುವುದಕ್ಕೆ ಉತ್ಸಾಹ ತೋರಿದ್ದಾಗಿ ಹೇಳಲಾಗುತ್ತಿದೆ.

'ಸು ಫ್ರಮ್ ಸೋ' ರಿಲೀಸ್ 50 ದಿನಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ಸಿನಿಮಾ ಓಟಿಟಿಗೂ ಲಗ್ಗೆ ಇಟ್ಟಿದೆ. ಹೀಗಿದ್ದರೂ ಥಿಯೇಟರ್‌ನಲ್ಲಿ ಇನ್ನೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಪ್ರೇಕ್ಷಕರನ್ನು ಸಿನಿಮಾದ ಉದ್ದಕ್ಕೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಸಿನಿಮಾಗೆ ಪರಭಾಷೆಯ ಪ್ರೇಕ್ಷಕರು ಮರುಳಾಗಿದ್ದಾರೆ. ಓಟಿಟಿಯಲ್ಲಿ ತೆಲುಗು ಹಾಗೂ ಮಲಯಾಳಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಎರಡೂ ಭಾಷೆಯ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಹುತೇಖ ಮಂದಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

Akshay Kumar likes Su From So Raj B Shetty Meets Him on Haiwaan Set Seeks Script Collaboration

ಇನ್ನು ಈಗಾಗಲೇ 'ಸು ಫ್ರಮ್ ಸೋ' ಬಗ್ಗೆ ಬಾಲಿವುಡ್‌ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ನಿರ್ದೇಶಕ ಜೆಪಿ ತುಮಿನಾಡ್ ಹಾಗೂ ರಾಜ್ ಬಿ ಶೆಟ್ಟಿ ಅಜಯ್ ದೇವಗನ್ ಭೇಟಿ ಮಾಡಿದ್ದರು. ಈಗ ರಾಜ್ ಬಾಲಿವುಡ್‌ನ ಕಿಲಾಡಿ ಅಕ್ಷಯ್ ಕುಮಾರ್ ಅನ್ನು ಭೇಟಿ ಮಾಡಿದ್ದಾರೆ. 50 ದಿನಗಳ ಸಂಭ್ರಮದಲ್ಲಿ ಅಕ್ಷಯ್ ಜೊತೆ ಹೊಸ ಪ್ರಾಜೆಕ್ಟ್ ಏನಾದರೂ ಶುರು ಮಾಡಿದ್ರಾ? ಇಬ್ಬರ ನಡುವೆ ನಡೆದ ಸಂಭಾಷಣೆ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಕಿಲಾಡಿ ಅಕ್ಷಯ್ ಭೇಟಿಯಾದ ರಾಜ್ ಬಿ ಶೆಟ್ಟಿ

ಕೆವಿಎನ್‌ ಸಂಸ್ಥೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ 'ಹೈವಾನ್' ಸಿನಿಮಾ ಮಾಡುತ್ತಿದೆ. ಮಲಯಾಳಂ ನಿರ್ದೇಶಕ 'ಹೇರಾ ಪೇರಿ' ಖ್ಯಾತಿಯ ಪ್ರಿಯಾದರ್ಶನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾ ಊಟಿಯಲ್ಲಿ ನಡೆಯುತ್ತಿದ್ದು, ಅಲ್ಲಿ ಅಕ್ಷಯ್ ಕುಮಾರ್ ಅನ್ನು ರಾಜ್ ಬಿ ಶೆಟ್ಟಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲು ಕುಮಟ ಭೇಟಿ ಮಾಡಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ 'ಸು ಫ್ರಮ್ ಸೋ' ಸಿನಿಮಾವನ್ನು ಮೆಚ್ಚಿಕೊಂಡಾಡಿದ್ದಾರೆ.

ಸಿನಿಮಾ ಮಾಡೋಣ ಎಂದ ಅಕ್ಷಯ್

'ಸು ಫ್ರಮ್ ಸೋ' ರಾಜ್ ಬಿ ಶೆಟ್ಟಿಗೆ ಪ್ಯಾನ್ ಇಂಡಿಯಾ ಇಮೇಜ್ ಸಿಗುವಂತೆ ಮಾಡಿದೆ. ₹4 ಕೋಟಿ ಬಜೆಟ್ ಸಿನಿಮಾ ₹122 ಕೋಟಿ ದುಡಿದಿದ್ದು ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಹಿಂದಿ, ತೆಲುಗು, ತಮಿಳಿನ ಸ್ಟಾರ್ ಸಿನಿಮಾಗಳೇ ₹100 ಕೋಟಿ ದುಡಿಯುವುದಕ್ಕೆ ಪರದಾಡುತ್ತಿವೆ. ಅದರಲ್ಲೂ ಅಕ್ಷಯ್ ಕುಮಾರ್ ಸಿನಿಮಾ ಕೂಡ ಬ್ಯಾಕ್ ಟು ಬ್ಯಾಕ್ ಸೋಲುಂಡಿವೆ. ಹೀಗಾಗಿ ರಾಜ್‌ ಬಿ ಶೆಟ್ಟಿ ಜೊತೆ ಕೈ ಜೋಡಿಸುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅದಕ್ಕೆ "ಕಥೆ ಇದ್ರೆ ಹೇಳಿ ಸಿನ್ಮಾ ಮಾಡೋಣ" ಅಂತ ರಾಜ್ ಬಿ ಶೆಟ್ಟಿ ಯವ್ರನ್ನ ಕಿಲಾಡಿ ಅಕ್ಷಯ್ ಕುಮಾರ್‌ ಕೇಳಿದ್ದಾರೆಂಬ ಸುದ್ದಿ ಓಡಾಡುತ್ತಿದೆ.

Akshay Kumar likes Su From So Raj B Shetty Meets Him on Haiwaan Set Seeks Script Collaboration


50 ದಿನ ಪೂರೈಸಿದ 'ಸು ಫ್ರಮ್ ಸೋ'

ಈಗಿನ ಟ್ರೆಂಡ್‌ನಲ್ಲಿ ಸಿನಿಮಾಗಳು ಎರಡು ವಾರ ಓಡಿದರೇ ಹೆಚ್ಚು. ಅಂತಹದ್ರಲ್ಲಿ 'ಸು ಫ್ರಮ್ ಸೋ' ಯಶಸ್ವಿಯಾಗಿ 50 ದಿನಗಳನ್ನು ಆಯ್ದ ಚಿತ್ರಮಂದಿರಗಳಲ್ಲಿ ಮುಗಿಸಿದೆ. ತಮ್ಮ ಸಿನಿಮಾ 50 ದಿನಗಳನ್ನು ಪೂರೈಸಿದ್ದಕ್ಕೆ ರಾಜ್ ಬಿ ಶೆಟ್ಟಿ ಹಾಗೂ ಚಿತ್ರತಂಡ ಸಂಭ್ರಮಿಸಿದೆ. ಈ ವೇಳೆ ತಮಿಳು ರಿಮೇಕ್ ರೈಟ್ಸ್ ಮಾರಾಟ ಆಗಿದ್ದು, ಹಿಂದಿಯಲ್ಲಿ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ. ಹೀಗಾಗಿ ಹಿಂದಿಯಲ್ಲಿ ರಿಮೇಕ್ ಮಾಡುತ್ತಿಲ್ಲ ಎಂದು ರಾಜ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

50 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

'ಸು ಫ್ರಮ್ ಸೋ' ನಿನ್ನೆಗೆ (ಸೆಪ್ಟೆಂಬರ್ 12) 50 ದಿನಗಳನ್ನು ಪೂರೈಸಿದೆ. ಓಟಿಟಿಯಲ್ಲಿ ರಿಲೀಸ್ ಆಗಿದ್ದರೂ, 50ನೇ ದಿನ ಈ ಸಿನಿಮಾ ಥಿಯೇಟರ್‌ನಲ್ಲಿ ಮೂರು ಭಾಷೆಗಳಿಂದ ₹5 ಲಕ್ಷ ಕಲೆಕ್ಷನ್ ಆಗಿದೆ. ಇನ್ನು 50 ದಿನಗಳಲ್ಲಿ ವಿಶ್ವದಾದ್ಯಂತ ಈ ಸಿನಿಮಾ ₹122.45 ಕೋಟಿ ಕಲೆಕ್ಷನ್ ಆಗಿದೆ. ಹಾಗೇ ಭಾರತದಲ್ಲಿ ₹91.97 ಕೋಟಿ, ಅದರಲ್ಲಿ ಕನ್ನಡ ಭಾಷೆಯಿಂದ 84.09 ಕೋಟಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Akshay Kumar praised Raj B Shetty produced movie Su From So when the filmmaker met him on the sets of Haiwaan. Akshay Kumar also discussed collaborating for movie with Raj B Shetty.
Read more about: akshay kumar raj b shetty actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X