Puneeth Rajkumar: ಅಪ್ಪು ಮನೆಗೆ ಭೇಟಿ ನೀಡಿದ ಟಾಲಿವುಡ್ ನಟ ಅಲಿ- ಬ್ರಹ್ಮಾನಂದಂ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ 6 ತಿಂಗಳು ಕಳೆದಿವೆ. ಇಂದಿಗೂ ಅಪ್ಪು ಅಭಿಮಾನಿಗಳು ಆ ನೋವಿನಿಂದ ಹೊರಬಂದಿಲ್ಲ. ಕನ್ನಡ ಚಿತ್ರರಂಗ ಈ ಶಾಕ್‌ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಮಗು ಮುಖದ ಶ್ರೀಮಂತನನ್ನು ಕಳೆದುಕೊಂಡು ಕನ್ನಡಿಗರು ಇನ್ನೂ ನೋವಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

Recommended Video

Darshan | ಕನ್ನಡದ ಮೂವರು ಸ್ಟಾರ್‌ಗಳ ಬಳಿ ಇದೆ ಲ್ಯಾಂಬೋರ್ಗಿನಿ ಕಾರು | Nikhil Kumaraswamy | Puneeth RajKumar

ಇನ್ನೊಂದು ಕಡೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಹಿನ್ನೆಲೆಯಲ್ಲೇ ದಕ್ಷಿಣ ಭಾರತದ ನಟರು ಅಪ್ಪು ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವು ತಾರೆಯರು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ. ಇಂದು( ಏಪ್ರಿಲ್ 10) ಟಾಲಿವುಡ್‌ನ ಹಾಸ್ಯ ದಿಗ್ಗಜರು ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಅಪ್ಪು ನಿವಾಸಕ್ಕೆ ಅಲಿ, ಬ್ರಹ್ಮಾನಂದಂ ಭೇಟಿ

ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಟಾಲಿವುಡ್‌ನ ಜನಪ್ರಿಯ ಹಾಸ್ಯ ನಟರು ಭೇಟಿ ನೀಡಿದ್ದಾರೆ. ಕಾಮಿಡಿ ಕಲಾವಿದರಾದ ಬ್ರಹ್ಮಾನಂದಂ ಹಾಗೂ ಅಲಿ ಭೇಟಿ ನೀಡಿ, ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಪ್ಪು ಕುಟುಂಬದೊಂದಿಗೆ ಪುನೀತ್ ಜೊತೆಗಿನ ನೆನೆಪುಗಳನ್ನು ಸ್ಮರಿಸಿಕೊಂಡಿದ್ದಾರೆ.

ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿಯವರಿಗೆ ಹಾಸ್ಯ ನಟರಾದ ಬ್ರಹ್ಮಾನಂದಂ ಹಾಗೂ ಅಲಿ ಸಾಂತ್ವಾನದ ಮಾತುಗಳನ್ನ ಹೇಳಿದ್ದಾರೆ. ಹಾಗೇ ರಾಘವೇಂದ್ರ ರಾಜ್‌ಕುಮಾರ್, ರಾಮ್ ಕುಮಾರ್ ಪುತ್ರ ಧೀರೇನ್ ರಾಮ್‌ ಕುಮಾರ್, ಯುವ ರಾಜ್‌ಕುಮಾರ್ ಅವರೊಂದಿಗೆ ಹಲವು ಹೊತ್ತು ಮಾತುಕತೆ ನಡೆಸಿದ್ದಾರೆ.

Ali And Bhramhandam visited Puneeth Rajkumar House

ಬ್ರಹ್ಮಾನಂದಂ ಜೊತೆ 'ನಿನ್ನಿಂದಲೇ' ಚಿತ್ರದಲ್ಲಿ ನಟನೆ

ಟಾಲಿವುಡ್ ಹಾಸ್ಯನಟರು ಅಲಿ ಹಾಗೂ ಬ್ರಹ್ಮಾನಂದಂ ಇಬ್ಬರೂ ಪವರ್‌ಸ್ಟಾರ್ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಬ್ರಹ್ಮಾನಂದಂ ಅಪ್ಪು ಜೊತೆ 'ನಿನ್ನಿಂದಲೇ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಚಿಕ್ಕಪಾತ್ರದಲ್ಲಿ ನಟಿಸಿದ್ದರೂ, ಬ್ರಹ್ಮಾನಂದಂ ಅವರ ಎಂಟ್ರಿ ಅಪ್ಪು ಅಭಿಮಾನಿಗಳಿಗೆ ಹಾಸ್ಯ ಕಡಲಲ್ಲಿ ತೇಲಿಸಿತ್ತು.

ಟಾಲಿವುಡ್ ಅಲಿ ಜೊತೆ ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ಅಭಿನಯದ 'ಸೂಪರ್', 'ನಮೋ ನಮ:', 'ಕೆಂಪೇಗೌಡ 2' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ಕನ್ನಡ ಚಿತ್ರರಂಗದೊಂದಿಗೆ ಅಲಿ ಉತ್ತಮ ಸಂಬಂಧ ಹೊಂದಿದ್ದಾರೆ.

More from Filmibeat

English summary
Ali And Brahmanandam visited Puneeth Rajkumar House. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X