30 ಥಿಯೇಟರ್‌ಗಳಲ್ಲಿ RRR ಟ್ರೈಲರ್: ಬೆಂಗಳೂರಿಗೆ ದೌಡಾಯಿಸಿದ ಆಲಿಯಾ, ಜಕ್ಕಣ್ಣ, ರಾಮ್ , ಜೂ.ಎನ್‌ಟಿಆರ್
RRR ಭಾರತದ ದುಬಾರಿ ಬಜೆಟ್ ಸಿನಿಮಾ. ರಾಜಮೌಳಿ ಕನಸಿನ ಮತ್ತೊಂದು ಮೆಗಾ ಸಿನಿಮಾ. ಮೆಗಾ ಪವರ್‌ಸ್ಟಾರ್ ರಾಮ್ ಚರಣ್, ಯಂಗ್ ಟೈಗರ್ ಜೂ.ಎನ್‌ಟಿಆರ್ ಒಂದೇ ವೇದಿಕೆ ಮೇಲೆ ಅಬ್ಬರಿಸಲಿರುವ ಮಲ್ಟಿಸ್ಟಾರರ್ ಸಿನಿಮಾ. ಬಾಲಿವುಡ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್ ದಕ್ಷಿಣ ಭಾರತದಲ್ಲಿ ನಟಿಸಿರುವ ಅದ್ದೂರಿ ಸಿನಿಮಾ. ಈ ಮೆಗಾ ಪ್ಯಾನ್ ಇಂಡಿಯ ಸಿನಿಮಾದ ಪ್ರಚಾರಕ್ಕೆ ರಾಜಮೌಳಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
Recommended Video
RRR ಸಿನಿಮಾದ ಈ ಮೆಗಾ ಟ್ರೈಲರ್ ಡಿಸೆಂಬರ್ 03ರಂದು ರಿಲೀಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈ ಟ್ರೈಲರ್ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ಡಿಸೆಂಬರ್ 9ರಂದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಒಂದೇ ಸಮಯಕ್ಕೆ ಥಿಯೇಟರ್‌ಗಳಲ್ಲಿ ಟ್ರೈಲರ್ ರಿಲೀಸ್ ಮಾಡಲು ರಾಜಮೌಳಿ ಸಜ್ಜಾಗಿದ್ದಾರೆ. ಕನ್ನಡದ ಟ್ರೈಲರ್ ಕೂಡ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ಆಗಿ ಬಿಡುಗಡೆ ಆಗುತ್ತಿರುವುದು ವಿಶೇಷ.

30 ಥಿಯೇಟರ್‌ಗಳಲ್ಲಿ RRR ಟ್ರೈಲರ್
RRR ಪ್ಯಾನ್ ಇಂಡಿಯಾ ಟ್ರೈಲರ್‌ಗೆ ಕ್ಷಣಗಣನೆ ಆರಂಭ ಆಗಿದೆ. ಬಾಹುಬಲಿಯಂತಹ ಮೆಗಾ ಸಿನಿಮಾ ಕೊಟ್ಟಿರುವ ರಾಜಮೌಳಿ ಮತ್ತೊಂದು ದುಬಾರಿ ಸಿನಿಮಾದೊಂದು ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ರಾಮ್ ಚರಣ್, ಜೂ.ಎನ್‌ಟಿಆರ್ ಇಬ್ಬರೂ ಸೂಪರ್‌ಸ್ಟಾರ್‌ಗಳನ್ನು ಒಂದೇ ಸಿನಿಮಾಗೆ ಕರೆದುಕೊಂಡು ಬಂದಿದ್ದಾರೆ. ಈ ಹೈ ವೋಲ್ಟೇಜ್ ಸಿನಿಮಾದ ಟ್ರೈಲರ್ ಎಲ್ಲರ ಕುತೂಹಲವನ್ನು ಇಮ್ಮಡಿಗೊಳಿಸಿದ್ದು, RRR ಟ್ರೈಲರ್ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ರಾಜಮೌಳಿ ಕರ್ನಾಟಕದಾದ್ಯಂತ ಸುಮಾರು 30ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ RRR ಟ್ರೈಲರ್ ಅನ್ನು ಪ್ರದರ್ಶನ ಮಾಡಲಿದ್ದಾರೆ.

ಎಲ್ಲೆಲ್ಲಿ RRR ಟ್ರೈಲರ್ ರಿಲೀಸ್
ಮೆಗಾ ಸಿನಿಮಾ, ಮೆಗಾ ಐಡಿಯಾ. ಸಿನಿಮಾ ಟ್ರೈಲರ್ ತೋರಿಸಲೂ ರಾಜಮೌಳಿ ಥಿಯೇಟರ್ ಮೊರೆ ಹೋಗಿದ್ದಾರೆ. ಅದರಲ್ಲೂ ಕನ್ನಡಿಗರಿಗಾಗಿ ಕನ್ನಡದ ಟ್ರೈಲರ್ ತೋರಿಸಲು ಜಕ್ಕಣ್ಣ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕರ್ನಾಟಕದ ಸುಮಾರು 30 ಚಿತ್ರಮಂದಿರಗಳಲ್ಲಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕನ್ನಡದ RRR ಟ್ರೈಲರ್ ಪ್ರದರ್ಶನ ಕಾಣಲಿದೆ. ಊರ್ವಶಿ, ಅಂಜನ್, ಸ್ವಾಗತ್ ಶಂಕರ್ ನಾಗ್, ಕಾವೇರಿಯಂತಹ ಬೆಂಗಳೂರಿನ ಪ್ರಮುಖ ಚಿತ್ರಮಂದಿಗಳಲ್ಲಿ ಪ್ರದರ್ಶನ ಕಾಣಲಿದೆ. ಇನ್ನೊಂದು ಕಡೆ, ಮೈಸೂರಿನ ಡಿಆರ್‌ಸಿ, ದಾವಣಗೆರೆ ವಸಂತ, ಬಳ್ಳಾರಿಯಲ್ಲಿ ರಾಧಿಕಾ, ರಾಘವೇಂದ್ರ, ನಟರಾಜ ಕಾಂಪ್ಲೆಕ್ಸ್, ಹೊಸಪೇಟೆ ಬಾಲ, ಕಂಪ್ಲಿ ಭಾರತ್ ಹಾಗೂ ಚಂದ್ರಕಲಾ ಸೇರಿದಂತೆ ಇನ್ನೂ ಹಲವೆಡೆ ಟ್ರೈಲರ್ ಪ್ರದರ್ಶನವಾಗುತ್ತಿದೆ.

ಬೆಂಗಳೂರಿಗೆ ಪ್ರಚಾರಕ್ಕೆ ಬರ್ತಾರೆ ಆಲಿಯಾ ಭಟ್
RRR ಸಿನಿಮಾದ ಪ್ರಚಾರಕ್ಕಾಗಿ ಆಲಿಯಾ ಭಟ್ ಬೆಂಗಳೂರಿಗೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಟ್ರೈಲರ್ ತೆರೆಕಂಡ ಒಂದು ದಿನದ ಬಳಿಕ ರಾಜಮೌಳಿ ಬೆಂಗಳೂರಿಗೆ ಆಲಿಯಾ ಭಟ್‌ರನ್ನು ಕರೆತರುತ್ತಿದ್ದಾರೆ. ಈ ಮೂಲಕ ಭರ್ಜರಿ ಪ್ರಚಾರಕ್ಕೆ ಜಕ್ಕಣ್ಣ ಮುಂದಾಗಿದ್ದಾರೆ. ಬಹಳ ದಿನಗಳ ಬಳಿಕ ಆಲಿಯಾ ಭಟ್ ಒಂದು ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದು, ಸಿನಿಪ್ರಿಯರಲ್ಲಿ ಎದೆಬಡಿತ ಮತ್ತಷ್ಟು ಹೆಚ್ಚಾಗಿದೆ. ಕೇವಲ ಆಲಿಯಾ ಅಷ್ಟೇ ಅಲ್ಲ ಇವರೊಂದಿಗೆ ಇಡೀ RRR ತಂಡವೇ ಬೆಂಗಳೂರಿಗೆ ಬರಲಿದೆ.

ಬೆಂಗಳೂರಿಗೆ ಬರ್ತಾರೆ ರಾಮ್ ಚರಣ್, ಜೂ.ಎನ್‌ಟಿಆರ್, ರಾಜಮೌಳಿ
ಹೌದು.. RRR ಪ್ರಮೋಷನ್‌ಗೆ ಕೇವಲ ಆಲಿಯಾ ಭಟ್ ಅಷ್ಟೇ ಎಂಟ್ರಿ ಕೊಡುತ್ತಿಲ್ಲ. ಬಾಲಿವುಡ್ ಬ್ಯೂಟಿ ಜೊತೆ ನಿರ್ದೇಶಕ ರಾಜಮೌಳಿ, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಯಂಗ್ ಟೈಗರ್ ಜೂ.ಎನ್‌ಟಿಆರ್ ಕೂಡ ಡಿಸೆಂಬರ್ 10ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ RRR ಪ್ರಚಾರಕ್ಕೆ ರಾಜಮೌಳಿ ಮುಂದಾಗಲಿದೆ.


Click it and Unblock the Notifications











